'ಬಾಹುಬಲಿ 2' ಸಿನಿಮಾ ಮೂಲಕ ಭಾರತದಾದ್ಯಂತ ಭಾರಿ ಹವಾ ಎಬ್ಬಿಸಿದ್ದ ನಟ ಪ್ರಭಾಸ್ ಅವರ ಈ ಹಿಂದಿನ ಕೆಲವು ಸಿನಿಮಾಗಳು ಹೇಳಿಕೊಳ್ಳುವ ಗೆಲುವು ಕಾಣಲಿಲ್ಲ. ಆದರೀಗ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತೆರೆಗೆ ಬಂದಿರುವ 'ಸಲಾರ್' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿನಿಪ್ರಿಯರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ತೆರೆಗೆ ಬಂದ ಎರಡೇ ದಿನಗಳಲ್ಲಿ 295 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಹೇಳುತ್ತಿದ್ದಾರೆ.
'ಸಲಾರ್' ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ ಜಾಗತಿಕ ಕಲೆಕ್ಷನ್ನ ಅಪ್ಡೇಟ್ಸ್ ನೀಡಿದೆ. ಇಂದು ಶೇರ್ ಮಾಡಲಾಗಿರುವ ಈ ಪೋಸ್ಟ್ನಲ್ಲಿ, ವಿಶ್ವಾದ್ಯಂತ 295.7 ಕೋಟಿ ರೂಪಾಯಿ ಗಳಿಸಿರುವುದಾಗಿ ಬಹಿರಂಗಪಡಿಸಿದೆ. ಸಲಾರ್ ಭಾರತದ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 2023ರ ಹಿಟ್ ಸಿನಿಮಾಗಳಾದ ಪಠಾಣ್ ಮತ್ತು ಜವಾನ್ ಮೀರಿಸಿದೆ.
2023ರ ಮೊದಲ ಬ್ಲಾಕ್‌ಬಸ್ಟರ್ ಎಂದು ಪರಿಗಣಿಸಲಾದ ಪಠಾಣ್ ತೆರೆಕಂಡ ಎರಡು ದಿನಗಳಲ್ಲಿ ಸುಮಾರು 235 ಕೋಟಿ ರೂ. ಗಳಿಸಿತ್ತು. ಜವಾನ್ ಬಿಡುಗಡೆಯಾದ ಎರಡು ದಿನಗಳಲ್ಲಿ ಜಾಗತಿಕವಾಗಿ 240 ಕೋಟಿ ರೂ. ಬಾಚಿಕೊಂಡಿತ್ತು. ಆದರೆ, ಸಲಾರ್ ಎರಡೇ ದಿನದಲ್ಲಿ 295 ಕೋಟಿ ರೂ. ಕಲೆಕ್ಷನ್ ಮಾಡಿದೆ.
- " class="align-text-top noRightClick twitterSection" data="">
ಜಾಗತಿಕ ಕಲೆಕ್ಷನ್ ₹295 ಕೋಟಿ: ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ ನಡೆಸಿದ ವ್ಯವಹಾರ 145 ಕೋಟಿ ರೂ. ತೆರೆಕಂಡ ಮೊದಲ ದಿನ ದೇಶದಲ್ಲಿ ಸುಮಾರು 90 ಕೋಟಿ ರೂ. ವ್ಯವಹಾರ ನಡೆಸಿದೆ. ಎರಡನೇ ದಿನ ಕೊಂಚ ಕುಸಿತ ಕಂಡರೂ, 55 ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ.
ಇದನ್ನೂ ಓದಿ: ಮುಂಬೈ ಪೊಲೀಸರ ವಾರ್ಷಿಕ ಕಾರ್ಯಕ್ರಮಕ್ಕೆ ಮೆರುಗು ತಂದ ಬಾಲಿವುಡ್ ತಾರೆಯರು: ವಿಡಿಯೋ
ಶಾರುಖ್ ಖಾನ್-ರಾಜ್‌ಕುಮಾರ್ ಹಿರಾನಿಯವರ ಡಂಕಿ ಸಿನಿಮಾ ಜೊತೆಗಿನ ಬಾಕ್ಸ್ ಆಫೀಸ್ ರೇಸ್‌ನಲ್ಲಿ 'ಸಲಾರ್' ಮುಂಚೂಣಿಯಲ್ಲಿದೆ. ಸಲಾರ್‌ಗೂ ಒಂದು ದಿನ ಮುಂಚಿತವಾಗಿ ತೆರೆ ಕಂಡ ಡಂಕಿ ಮೂರು ದಿನಗಳಲ್ಲಿ ಅಂದಾಜು 75.32 ಕೋಟಿ ರೂಪಾಯಿ ಸಂಗ್ರಹಿಸಿದೆ. ಭಾನುವಾರದ ಕಲೆಕ್ಷನ್ ಮೂಲಕ ನಾಲ್ಕು ದಿನಗಳಲ್ಲಿ ಭಾರತದಲ್ಲಿ 100 ಕೋಟಿ ರೂ. ಕ್ಲಬ್ ಪ್ರವೇಶಿಸಲು ಸಜ್ಜಾಗಿದೆ. ಜಾಗತಿಕ ಮಟ್ಟದಲ್ಲಿ 'ಡಂಕಿ' 150 ಕೋಟಿ ರೂಪಾಯಿ ಗಡಿ ತಲುಪುವ ನಿರೀಕ್ಷೆಯಿದೆ.
ಇದನ್ನೂ ಓದಿ: 'ಪಿಕೆ'ಯಂತೆ 'ಡಂಕಿ' ಯಶಸ್ವಿಯಾಗುವ ನಂಬಿಕೆ ಹೊಂದಿದ್ದ ಶಾರುಖ್, ಅಭಿಮಾನಿಗಳು; ಆದರೆ!
ಸಲಾರ್‌ಗೆ ಹಣ ಸುರಿದ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಭಾಗ ನಿರ್ಮಿಸುವ ಯೋಜನೆ ಹೊಂದಿದೆ. 'ಸಲಾರ್' ಇಬ್ಬರು ಬಾಲ್ಯದ ಗೆಳೆಯರ ಕಥೆ. ದಕ್ಷಿಣ ಚಿತ್ರರಂಗದ ಜನಪ್ರಿಯ ನಟರಾರ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆತ್ಮೀಯ ಸ್ನೇಹಿತರು ಎದುರಾಳಿಗಳಾಗುವ ಕಥಾಹಂದರವೇ ಸಲಾರ್. ಕಾಲ್ಪನಿಕ, ಹಿಂಸಾತ್ಮಕ ನಗರವಾದ ಖಾನ್ಸಾರ್ನಲ್ಲಿ ಈ ಆ್ಯಕ್ಷನ್ ಡ್ರಾಮಾ ನಡೆಯುತ್ತದೆ.