ETV Bharat / entertainment

ಅಡ್ವಾನ್ಸ್ ಟಿಕೆಟ್​ ಬುಕಿಂಗ್: 'ಡಂಕಿ'ಗಿಂತ 'ಸಲಾರ್​'​ ಒಂದು ಹೆಜ್ಜೆ ಮುಂದೆ! - ಪ್ರಶಾಂತ್​ ನೀಲ್​​

'ಸಲಾರ್'​ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ..

salaar advance booking updates
ಸಲಾರ್ ಅಡ್ವಾನ್ಸ್ ಬುಕಿಂಗ್
author img

By ETV Bharat Karnataka Team

Published : Dec 21, 2023, 12:03 PM IST

ಬಾಲಿವುಡ್​​ ಕಿಂಗ್​ ಖಾನ್​​ ಅವರ ಡಂಕಿ ಮತ್ತು ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಲಾರ್ ಈ ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳು. ಇಂದು ಡಂಕಿ ತೆರೆಗಪ್ಪಳಿಸಿದೆ. ನಾಳೆ ಸಲಾರ್​​ ಬಿಡುಗಡೆಯಾಗಲಿದೆ. ನಾಳೆಯಿಂದ ಬಾಕ್ಸ್ ಆಫೀಸ್‌ನಲ್ಲಿ ಈ ಎರಡೂ ಸಿನಿಮಾಗಳು ಮುಖಾಮುಖಿಯಾಗಲಿದೆ. ಅಡ್ವಾನ್ಸ್ ಟಿಕೆಟ್​ ಬುಕಿಂಗ್​​ ವಿಚಾರದಲ್ಲಿ ಸಲಾರ್​​ ಒಂದು ಹೆಜ್ಜೆ ಮುಂದಿದೆ.

  • " class="align-text-top noRightClick twitterSection" data="">

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮೊದಲ ದಿನದ ಶೋಗಳಿಗೆ 14,10,965 ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, 29.55 ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಇದು ಮೊದಲ ದಿನದ ಆನ್​​ಲೈನ್​ ವ್ಯವಹಾರವಷ್ಟೇ. ಈ ಅಂಕಿ - ಅಂಶ ಏರಿಕೆ ಕಾಣಲಿದೆ. 'ಸಲಾರ್‌' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​​ ಪ್ರೊಸೆಸ್​ ಅನ್ನು ಕೆಲ ದಿನಗಳ ಹಿಂದೆ ತೆರೆಯಲಾಗಿದ್ದು, ಕಲೆಕ್ಷನ್​​ ಅಂಕಿ - ಅಂಶಗಳು ಉತ್ತಮವಾಗಿರುವಂತೆ ತೋರುತ್ತಿದೆ. ನಾಳೆ ಸಲಾರ್​ ಸಿನಿಮಾ ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಭಾರತದಾದ್ಯಂತ 10,472 ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದೆ. ಮತ್ತೊಂದೆಡೆ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಂಕಿ ಸಿನಿಮಾ ಸುಮಾರು 25 ರಿಂದ 30 ಕೋಟಿ ರೂಪಾಯಿ ಗಳಿಸುವ ಸಾಧ್ಯತೆಗಳಿವೆ. ಮುಂಗಡ ಬುಕಿಂಗ್​ ವ್ಯವಹಾರದಲ್ಲಿ ಸೂಮಾರು 15 ಕೋಟಿ ರೂ. ಗಳಿಸಿದೆ.

ಸಲಾರ್ ಸುತ್ತಲಿನ ಉತ್ಸಾಹ ಜೋರಾಗಿದೆ. ಚಿತ್ರೋದ್ಯಮದ ಪಂಡಿತರು, ವಿಮರ್ಶಕರ ಪ್ರಕಾರ, ಸಲಾರ್‌ನ ಮೊದಲ ದಿನದ ಕಲೆಕ್ಷನ್​​ ಮೂಲಕ ದಾಖಲೆ ಬರೆಯಲಿದೆ. ಮುಂಗಡ ಟಿಕೆಟ್​​ ಬುಕಿಂಗ್​ ವಿಚಾರದಲ್ಲಿ ದಾಖಲೆಯ ಅಂಕಿ - ಅಂಶ ದಾಖಲಾಗಿದೆ. ಸುಮಾರು 1.3 ಮಿಲಿಯನ್ ಜನರು ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಲಾರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.

'ಸಲಾರ್' ದೂರದೃಷ್ಟಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಕಾಂಬೋದ ಸಿನಿಮಾ ಆದ ಹಿನ್ನೆಲೆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್, ಟೀಸರ್​, ಟ್ರೇಲರ್​​​ಗಳು ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಈ ಸಿನಿ ದಿಗ್ಗಜರ ಜೊತೆ ಸೇರಿ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿರೋ ಹಿನ್ನೆಲೆ ಸಲಾರ್​ ಕ್ರೇಜ್​ ಜೋರಾಗೇ ಇದೆ. ಡಿಸೆಂಬರ್ 22 ಅಂದರೆ ನಾಳೆ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಡಂಕಿ ತೆರೆಗೆ: ಸಿನಿಪ್ರಿಯರು ಹೀಗಂದ್ರು! ಹೀಗಿದೆ ಸೋಷಿಯಲ್​ ಮೀಡಿಯಾದ ಚಿತ್ರ ವಿಮರ್ಶೆ !

ಪ್ರಭಾಸ್ ಜೊತೆ ಜನಪ್ರಿಯ ಕಲಾವಿದರಾದ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎರಡು ಗಂಟೆ ಐವತ್ತೈದು ನಿಮಿಷಗಳ ಈ ಆ್ಯಕ್ಷನ್ ಡ್ರಾಮಾ ನಾಳೆ ತೆರೆಗಪ್ಪಳಿಸಲಿದ್ದು, ಎಷ್ಟರ ಮಟ್ಟಿಗೆ ಗೆಲುವು ಸಾಧಿಸಲಿದೆ ಎಂಬುದನ್ನು ಕಾದು ನೋಡೋಣ.

ಇದನ್ನೂ ಓದಿ: ನಾನು ಕೆಟ್ಟ ಸಿನಿಮಾ ಮಾಡಿಲ್ಲ, 'A' ಸರ್ಟಿಫಿಕೇಟ್​ ಬೇಸರ ತಂದಿದೆ: ಪ್ರಶಾಂತ್​ ನೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.