ETV Bharat / entertainment

'ನಮ್ಮ ಬೆಡ್ರೂಮ್​ ತನಕ ಬನ್ನಿ..': ಪಾಪರಾಜಿಗಳ ವರ್ತನೆಗೆ ನಟ ಸೈಫ್​ ಅಲಿಖಾನ್ ರಿಯಾಕ್ಷನ್​ - ಈಟಿವಿ ಭಾರತ ಕನ್ನಡ

ಖಾಸಗಿತನಕ್ಕೆ ಅಡ್ಡಿಪಡಿಸುತ್ತಿರುವ ಪಾಪರಾಜಿಗಳ ವರ್ತನೆಗೆ ನಟ ಸೈಫ್​ ಅಲಿಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Saif Ali Khan
ಸೈಫ್ ಅಲಿಖಾನ್​
author img

By

Published : Mar 3, 2023, 8:06 PM IST

ಸಿನಿಮಾ ತಾರೆಯರು ಮನೆಯಿಂದ ಹೊರಗೆ ಸುತ್ತಾಡುವಾಗ ತುಂಬಾ ಜಾಗರೂಕರಾಗಿರುತ್ತಾರೆ. ತಾರೆಯರು ಎಲ್ಲೇ ಹೋದರೂ ಪಾಪರಾಜಿಗಳು ಅವರನ್ನು ಹಿಂಬಾಲಿಸಿರುತ್ತಾರೆ. ಅಲ್ಲದೇ ನಟ, ನಟಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡುತ್ತಿರುತ್ತಾರೆ. ಇದೀಗ ಖಾಸಗಿತನಕ್ಕೆ ಅಡ್ಡಿಪಡಿಸುತ್ತಿರುವ ಪಾಪರಾಜಿಗಳ ವಿರುದ್ಧ ನಟ ಸೈಫ್​ ಅಲಿಖಾನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ವರ್ತನೆಗೆ ನಟ ವ್ಯಂಗ್ಯ ರೀತಿಯಲ್ಲಿ ಮಾತನಾಡಿದ್ದಾರೆ.

ನಟ ಸೈಫ್​ ಅಲಿಖಾನ್​ ಅವರು ಪತ್ನಿ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರೊಂದಿಗೆ ತಡರಾತ್ರಿ ಪಾರ್ಟಿಯಿಂದ ಹಿಂದಿರುಗುತ್ತಿದ್ದ ವೇಳೆ, ಅವರ ಮನೆಯ ಹೊರಗೆ ದಂಪತಿ ಫೋಟೋಗಾಗಿ ಪಾಪರಾಜಿಗಳು ಸಾಲುಗಟ್ಟಿ ನಿಂತಿದ್ದರು. ಈ ವೇಳೆ, ಕೊಂಚ ಅಸಮಾಧಾನಗೊಂಡ ನಟ, 'ನಮ್ಮ ಬೆಡ್ರೂಮ್​ ತನಕ ಬನ್ನಿ..' ಎಂದು ವ್ಯಂಗ್ಯದ ಜೊತೆಗೆ ಹಾಸ್ಯ ರೀತಿಯಲ್ಲಿ ಮಾತನಾಡಿದ್ದಾರೆ. ಸೈಫ್​ ಅಲಿಖಾನ್​ ಕೋಪದಲ್ಲಿ ಹೇಳದಿದ್ದರೂ, ಸಿನಿ ತಾರೆಯರಿಗೆ ಪಾಪರಾಜಿಗಳ ವರ್ತನೆ ನಿಜಕ್ಕೂ ಆತಂಕ ಉಂಟುಮಾಡಿದೆ.

ಈ ಹಿಂದೆ, ಆಲಿಯಾ ಭಟ್​ ತನ್ನ ಅನುಮತಿಯಿಲ್ಲದೇ ತನ್ನ ಮನೆಯಲ್ಲಿಯೇ ಫೋಟೋ ತೆಗೆಯುವ ಮೂಲಕ ಪಾಪರಾಜಿಗಳು ನನ್ನ ಖಾಸಗಿತನವನ್ನು ಆಕ್ರಮಿಸಿದ್ದಾರೆ ಎಂದು ಆರೋಪಿಸಿದ್ದರು. ಅನೇಕ ಸೆಲೆಬ್ರಿಟಿಗಳು ಆಲಿಯಾ ಹೇಳಿಕೆಗೆ ಬೆಂಬಲವಾಗಿ ನಿಂತಿದ್ದರು. ಅನುಷ್ಕಾ ಶರ್ಮಾ, ಅರ್ಜುನ್ ಕಪೂರ್, ಜಾನ್ವಿ ಕಪೂರ್ ಮತ್ತು ಕರಣ್ ಜೋಹರ್ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿಗಳ ಬಗ್ಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ: 'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು

ಬಾಲಿವುಡ್​ ಜೋಡಿ ಸೈಫ್- ಕರೀನಾ:​ ನಟಿ ಕರೀನಾ ಕಪೂರ್​ ಖಾನ್​ ಮತ್ತು ಸೈಫ್ ಅಲಿಖಾನ್​ 2012 ರ ಅಕ್ಟೋಬರ್ ತಿಂಗಳಿನಲ್ಲಿ ಮುಂಬೈನಲ್ಲಿ ವಿವಾಹವಾದರು. ಈ ದಂಪತಿಗೆ 2016 ರಲ್ಲಿ ತೈಮೂರ್ ಅಲಿ ಖಾನ್​ ಮತ್ತು 2021 ರಲ್ಲಿ ಜೆಹ್ ಅಲಿ ಖಾನ್ ಎಂಬ ಎರಡು ಮಕ್ಕಳು ಜನಿಸಿದರು. ಬಾಲಿವುಡ್​ ಸಿನಿ ರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಈ ಜೋಡಿ ಫ್ಯಾಮಿಲಿ ಜೊತೆಗೂ ಹೆಚ್ಚು ಟೈಮ್​ ಸ್ಪೆಂಡ್​ ಮಾಡುತ್ತಾರೆ. ಮಕ್ಕಳೊಂದಿಗಿನ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡುತ್ತಿರುತ್ತಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸೈಫ್​ ಅಲಿಖಾನ್​ ಆದಿಪುರುಷ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ರಾಮಾಯಣ ಕಥಾಧಾರಿತವಾಗಿದ್ದು, ಸೈಫ್​ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕ ನಟರಾಗಿ ಕೃತಿ ಸನೋನ್​ ಮತ್ತು ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಜೂನ್ 16 ರಂದು ತೆರೆ ಕಾಣಲಿದೆ.

ನಟಿ ಕರೀನಾ ಕಪೂರ್​ ಕಳೆದ ನವೆಂಬರ್‌ನಲ್ಲಿ ಮರ್ಡರ್​​ ಮಿಸ್ಟರಿ ಶೂಟಿಂಗ್​ ಅನ್ನು ಪೂರ್ಣಗೊಳಿಸಿದ್ದಾರೆ. ಮುಂಬರುವ ಚಿತ್ರವು ಕರೀನಾ ಕಪೂರ್​ ಖಾನ್​ ಅವರಿಗೆ ನಿರ್ಮಾಪಕರಾಗಿ ಚೊಚ್ಚಲ ಚಿತ್ರವಾಗಿದೆ. ಅವರು ಏಕ್ತಾ ಕಪೂರ್ ಅವರೊಂದಿಗೆ ಹೆಸರಿಡದ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ಸುಜೋಯ್ ಘೋಷ್ ಅವರ ಮುಂದಿನ ಚಿತ್ರದಲ್ಲೂ ನಟಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಆರ್​ಆರ್​ಆರ್​​ ಸಕ್ಸಸ್​: ಜೂನಿಯರ್ ಎನ್​ಟಿಆರ್​, ಆಲಿಯಾ ಭಟ್​ಗೆ HCA ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.