ETV Bharat / entertainment

ಮತ್ತೆ ಬಣ್ಣ ಹಚ್ಚಿದ್ದಾರೆ ಡೈಲಾಗ್ ಕಿಂಗ್ ಸಾಯಿಕುಮಾರ್‌: 'ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ' ಅಂತೆ! - Producer Ramesh Kashyap

'ಐದು ಜನ ಕ್ರಿಮಿನಲ್‌ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆಮರೆಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ'- ನಿರ್ಮಾಪಕ

Dialog King
ಡೈಲಾಗ್ ಕಿಂಗ್
author img

By

Published : Dec 5, 2022, 8:19 PM IST

ಬೆಂಗಳೂರು: ಪೊಲೀಸ್ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಖಾಕಿ ತೊಟ್ಟು ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಸದ್ಯ ರಾಕ್ಷಸರು ಸಿನಿಮಾ ಮೂಲಕ ಮತ್ತೆ ಖಾಕಿ ತೊಟ್ಟು ಸಿಲ್ವರ್ ಸ್ಕ್ರಿನ್ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಸಾಯಿಕುಮಾರ್ ಮಾತನಾಡಿ, ನಾನು ನಟನೆ ಆರಂಭಿಸಿ ಐವತ್ತು ವರ್ಷಗಳಾಗಿದೆ. ಅದರಲ್ಲೂ ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ 'ಪೊಲೀಸ್‌ ಸ್ಟೋರಿ' ನನಗೆ ಹೆಸರು ತಂದುಕೊಟ್ಟ ಚಿತ್ರ. ಈ ಸಮಯದಲ್ಲಿ ನಾನು ನನ್ನ ತಂದೆ ತಾಯಿಯನ್ನು ಸ್ಮರಿಸುತ್ತೇನೆ. ಹೆತ್ತವರು ಚಿತ್ರದ ನಂತರ ಅಜಯ್ ಕುಮಾರ್ ಅವರೊಂದಿಗೆ ರಾಕ್ಷಸರು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಮತ್ತೆ ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ ಎಂದರು.

ಈ ಚಿತ್ರವನ್ನು ರಜತ್ ನಿರ್ದೇಶನ ಮಾಡಿದ್ದು, ಅಜಯ್ ಕುಮಾರ್ ಕತೆ ಹೆಣೆದಿದ್ದಾರೆ. ಅಜಯ ಕುಮಾರ್ ಮಾತನಾಡಿ, ಇಷ್ಟು ದಿನ ನಾನು ಸೆಂಟಿಮೆಂಟ್ ಕಥೆಗಳನ್ನು ಬರೆಯುತ್ತಿದ್ದೆ. ಈ ಬಾರಿ ಅದಕ್ಕೆ ವಿರುದ್ಧವಾಗಿ ಕ್ರೈಮ್, ಥ್ರಿಲ್ಲರ್, ಆ್ಯಕ್ಷನ್ ಕಥೆ ಮಾಡಿದ್ದೇನೆ. ಚಿತ್ರದಲ್ಲಿ ಹೆಚ್ಚು ಕ್ರೈಮ್ ತೋರಿಸಲಾಗಿದೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಸೆನ್ಸಾರ್ ಮಂಡಳಿಯವರು ಕೆಲ ದೃಶ್ಯಗಳನ್ನು ತೆಗೆಯಲು ಹೇಳಿದರು‌. ಅದರಿಂದ ಸ್ವಲ್ಪ ವಿಳಂಬವಾಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ಸುತ್ತಮುತ್ತ ನಡೆವ ಘಟನೆಗಳನ್ನೇ ತೆಗೆದುಕೊಂಡು ಕಥೆ ಮಾಡಿದ್ದೇವೆ ಎಂದು ಹೇಳಿದರು.

ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು ಮಾತನಾಡಿ, ಅದ್ಭುತವಾದ 8 ಆ್ಯಕ್ಷನ್‌ಗಳಿವೆ. ಇದರಲ್ಲಿ ಒಂದು ಗೀತೆಯನ್ನು ನಾನೇ ಕೊರಿಯೋಗ್ರಫಿ ಮಾಡಿದ್ದೇನೆ. ಇದೊಂದು ಮೆಸೇಜ್ ಇರುವಂತಹ ಸುಂದರ ಸಿನಿಮಾ. ನಾನು ಸಿನಿಮಾ ನೋಡಿದ್ದೇನೆ. ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ರುಶಿಕಾ ರಾಜ್, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ, ರಾಧ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಚಿತ್ರದ ಬಗ್ಗೆ ಒನ್ ಲೈನ್‌ನಲ್ಲಿ ಹೇಳುವುದಾರೆ, ಐದು ಜನ ಕ್ರಿಮಿನಲ್‌ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆಮರೆಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲು ನಿರ್ಧರಿಸಿರುವುದಾಗಿ ನಿರ್ಮಾಪಕ ರಮೇಶ್ ಕಶ್ಯಪ್ ತಿಳಿಸಿದರು.

ಎರಡು ಹಾಡುಗಳಿರುವ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನವಿದೆ. ಸಂಭಾಷಣೆಗೆ ರಾಜಶೇಖರ್ ಪೆನ್ನು ಕೆಲಸ ಮಾಡಿದೆ. ನಿರ್ಮಾಪಕ ರಮೇಶ್ ಕಶ್ಯಪ್ 'ಗರುಡಾದ್ರಿ ಸಿನಿಮಾಸ್' ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ. ಟೀಸರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 'ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ' ಎಂಬ ಅಡಿಬರಹ ಈ ಚಿತ್ರ ಹೊಂದಿದೆ.

ಇದನ್ನೂ ಓದಿ: ಹಾಸ್ಯ ನಟ ಮನ್​ದೀಪ್ ರಾಯ್​ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.