ETV Bharat / entertainment

ರಿಚಾ - ಅಲಿ ವಿವಾಹ ಆರತಕ್ಷತೆ ಸಮಾರಂಭಕ್ಕೆ ಗೆಳತಿಯೊಂದಿಗೆ ಆಗಮಿಸಿದ ನಟ ಹೃತಿಕ್ ರೋಷನ್ - ರಿಚಾ ಅಲಿ ಮದುವೆ

ಮುಂಬೈನಲ್ಲಿ ಮಂಗಳವಾರ ರಾತ್ರಿ ನಡೆದ ನಟ ಅಲಿ ಫಜಲ್ ಮತ್ತು ನಟಿ ರಿಚಾ ಚಡ್ಡಾ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ನಟ ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ಅವರೊಂದಿಗೆ ಕಾಣಿಸಿಕೊಂಡರು.

Saba Azad with Hrithik Roshan
ಹೃತಿಕ್ ರೋಷನ್ ಮತ್ತು ಸಬಾ ಆಜಾದ್
author img

By

Published : Oct 5, 2022, 6:11 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಆಜಾದ್ ಅವರೊಂದಿಗೆ ಮಂಗಳವಾರ ನಟ ಅಲಿ ಫಜಲ್ ಮತ್ತು ನಟಿ ರಿಚಾ ಚಡ್ಡಾ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಕಾಣಿಸಿಕೊಂಡರು.

ಮುಂಬೈನಲ್ಲಿ ಮಂಗಳವಾರ ರಾತ್ರಿ ನಡೆದ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರು ಸ್ಥಳಕ್ಕೆ ಆಗಮಿಸಿದ ಆರಂಭಿಕ ಅತಿಥಿಗಳ ಪೈಕಿ ಕಾಣಿಸಿಕೊಂಡರು. ರೆಡ್ ಕಾರ್ಪೆಟ್‌ನಲ್ಲಿ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಹೃತಿಕ್ ರೋಷನ್ ಕಪ್ಪು ಸೂಟ್‌ ಧರಿಸಿದ್ದು, ಸಬಾ ಅವರು ಹೊಳಪುಳ್ಳ ಹಸಿರು ಕುರ್ತಾ ಸೆಟ್​ನಲ್ಲಿ ಶೈನ್​ ಆದರು.

Saba Azad with Hrithik Roshan
ಹೃತಿಕ್ ರೋಷನ್ ಮತ್ತು ಸಬಾ ಆಜಾದ್

ಬಾಲಿವುಡ್​ನಲ್ಲಿ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ರಿಚಾ ಚಡ್ಡಾ ಮತ್ತು ಗೆಳೆಯ, ನಟ ಅಲಿ ಫಜಲ್ ಅವರ ವಿವಾಹ ಆರತಕ್ಷತೆ ಸಮಾರಂಭ ನಿನ್ನೆ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. 2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಜೋಡಿ ಮದುವೆ ಆಗುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಕೊರೊನಾ ಸೇರಿದಂತೆ ಕೆಲ ಕಾರಣದಿಂದ ಮದುವೆ ಮುಂದೂಡಲ್ಪಟ್ಟಿತ್ತು. ಈಗ ವಿವಾಹ ಆರತಕ್ಷತೆ ಸಮಾರಂಭ ನಡೆದಿದೆ.

ಇನ್ನೂ 2020ರಲ್ಲೇ ಈ ಜೋಡಿ ವಿವಾಹ ರಿಜಿಸ್ಟರ್ ಆಗಿದ್ದು, ಈಗ ಮದುವೆಯನ್ನು ಎಲ್ಲರೊಂದಿಗೆ ಸಂಭ್ರಮಿಸಿದ್ದಾರೆ. ಕಾಕ್​ಟೇಲ್ ಪಾರ್ಟಿ, ಸಂಗೀತ, ಮೆಹಂದಿ, ಹಳದಿ ಶಾಸ್ತ್ರಗಳೆಲ್ಲವೂ ನಡೆದಿದ್ದು ನಿನ್ನೆ ವಿವಾಹ ಆರತಕ್ಷತೆ ಸಮಾರಂಭ ಕೂಡ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಿನಿರಂಗದ ಗಣ್ಯಾತಿಗಣ್ಯರು ಆಗಮಿಸಿ ಶುಭಾಶಯ ಕೋರಿದರು.

ಈ ಪೈಕಿ ಹೃತಿಕ್ ರೋಷನ್ ತಮ್ಮ ಗೆಳತಿ ಸಾಬಾ ಆಜಾದ್ ಜೋಡಿ ಕೂಡ ಒಂದು. ಈ ಜೋಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಮೋಡಿ ಮಾಡಿತು. ಕ್ಯಾಮರಾಗಳಿಗೆ ಖುಷಿ, ಪ್ರೀತಿಯಿಂದ ದಿ ಬೆಸ್ಟ್ ಜೋಡಿ ಎನ್ನುವಂತೆ ಫೋಸ್ ನೀಡಿ ಮೆಚ್ಚುಗೆಗೆ ಪಾತ್ರರಾದರು.

ಹೃತಿಕ್ ರೋಷನ್ ಮತ್ತು ಸಬಾ ಆಜಾದ್

ಇನ್ನೂ ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನೆ ಖಾನ್ ಅವರು ತಮ್ಮ ಗೆಳೆಯ ಅರ್ಸ್ಲಾನ್ ಗೋನಿ ಜೊತೆ ಬಂದಿದ್ದರು. ಹೃತಿಕ್ ರೋಷನ್, ಸುಸ್ಸಾನೆ ಅವರು ವಿಚ್ಚೇದನದ ಬಳಿಕ ಇಬ್ಬರೂ ಬೇರೆ ಪ್ರೀತಿ ಕಂಡು ಕೊಂಡಿದ್ದಾರೆ. ಈ ನಾಲ್ಕು ಜನರು ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಅವರು ಸಬಾರನ್ನು ಮದುವೆಯಾಗುತ್ತಾರಾ? ಸುಸ್ಸಾನೆ ಅವರು ಅರ್ಸ್ಲಾನ್ ಗೋನಿ ಅವರನ್ನು ಮದುವೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ರಿಚಾ ಮತ್ತು ಅಲಿ ತಮ್ಮ ಮದುವೆಯ ಆರತಕ್ಷತೆಗಾಗಿ ಡಿಸೈನರ್ ರೆಡಿ ಮಾಡಿರುವ ಬಟ್ಟೆಗಳನ್ನು ಧರಿಸಿದ್ದರು. ವಧು ಅನಾಮಿಕಾ ಖನ್ನಾ ಅವರ ವರ್ಣರಂಜಿತ ಗೌನ್ ಧರಿಸಿದ್ದರು. ಕೌಶಿಕ್ ವೇಲೇಂದ್ರ ವಿನ್ಯಾಸಗೊಳಿಸಿದ ಉದ್ದನೆಯ ಕೋಟ್ ಅನ್ನು ಒಳಗೊಂಡಿರುವ ಇಂಡೋ-ವೆಸ್ಟರ್ನ್ ಸೂಟ್‌ನಲ್ಲಿ ಅಲಿ ಸುಂದರವಾಗಿ ಕಾಣುತ್ತಿದ್ದರು. ತಾರಾ ಜೋಡಿಗಳು ಕೈ-ಕೈ ಹಿಡಿದು ಪೋಸ್ ನೀಡಿದ್ದು, ಪಾಪರಾಜಿಯೊಂದಿಗೆ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆಯ ಆರತಕ್ಷತೆಯನ್ನು ವರದಿ ಮಾಡಲು ಬಂದಿದ್ದ ಮಾಧ್ಯಮದವರಿಗೆ ಉಡುಗೊರೆಗಳನ್ನು ಸಹ ವಿತರಿಸಿದರು.

ಇದನ್ನೂ ಓದಿ: ಬಹುಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್.. ಬೆಲೆ ಎಷ್ಟು ಅಂತೀರಾ?

ಮಾಧ್ಯಮದವರೊಂದಿಗೆ ಮಾತನಾಡಿದ ಅಲಿ, "ಇಷ್ಟು ಪ್ರೀತಿ, ಆಶೀರ್ವಾದಗಳನ್ನು ಸ್ವೀಕರಿಸಲು ನಾವು ನಿಜವಾಗಿಯೂ ಸಂತೋಷಪಡುತ್ತೇವೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು" ಎಂದು ಹೇಳಿದರು. ಇದಕ್ಕೂ ಮೊದಲು, ಈ ದಂಪತಿಯ ವಕ್ತಾರರು, ಮದುವೆಯ ದಿನಾಂಕದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದರು. "ಕಾನೂನುಬದ್ಧವಾಗಿ ಮದುವೆಯಾಗಿ ಈಗಾಗಲೇ 2.5 ವರ್ಷಗಳಾಗಿವೆ. ಪ್ರಸ್ತುತ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮದುವೆಯ ಶಾಸ್ತ್ರಗಳನ್ನು ಮಾತ್ರ ಆಚರಿಸುತ್ತಿದ್ದಾರೆ" ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.