ETV Bharat / entertainment

ಮುಂಬೈ ಏರ್​ಪೋರ್ಟ್‌ನಲ್ಲಿ ಹೃತಿಕ್ ರೋಷನ್-ಸಬಾ ಆಜಾದ್ 'ಕಿಸ್‌ ಆಫ್ ಲವ್' - ನಟಿ ದೀಪಿಕಾ ಪಡುಕೋಣೆ

ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಒಟ್ಟಿಗೆ ಕಾಣಿಸಿಕೊಂಡರು.

ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್
ನಟ ಹೃತಿಕ್ ರೋಷನ್ ಮತ್ತು ಸಬಾ ಆಜಾದ್
author img

By

Published : Feb 27, 2023, 10:30 PM IST

ಸಿನಿಮಾ ನಟ ಹಾಗೂ ನಟಿಯರು ಮನೆಯಿಂದ ಹೊರಬಂದು ಸುತ್ತಾಟ ನಡೆಸುವಾಗ ತುಂಬಾ ಜಾಗರೂಕರಾಗಿರುತ್ತಾರೆ. ತಾರೆಗಳು ಎಲ್ಲೇ ಹೋದರೂ ಅವರ ಫ್ಯಾನ್ಸ್​ ಹಿಂಬಾಲಿಸುತ್ತಿರುತ್ತಾರೆ. ಅಲ್ಲದೇ, ನಟ-ನಟಿಯರ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇದೀಗ ನಟ ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಆಜಾದ್ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರಿಬ್ಬರ ಖಾಸಗಿ ಕ್ಷಣವನ್ನು ಫ್ಯಾನ್ಸ್​ ಪೇಜ್​​ಗಳು ಶೇರ್ ಮಾಡಿಕೊಂಡಿದ್ದು, 'ಕಿಸ್​ ಆಫ್​ ಲವ್'​ ಎಂದು ಕರೆದಿದ್ದಾರೆ.

ಸಾಬಾ ಆಜಾದ್ ಅವರು ಹೃತಿಕ್​ ರೋಷನ್‌ರನ್ನು ನೋಡುವುದಕ್ಕಾಗಿಯೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕಾರ್​​ನೊಳಗೆ ಪರಸ್ಪರ ಇಬ್ಬರು ಕಿಸ್​ ಮಾಡಿಕೊಂಡಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಹೃತಿಕ್ ಮತ್ತು ಗರ್ಲ್‌ ಫ್ರೆಂಡ್​ ಸಬಾ ತಮ್ಮ ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಕಂದು ಬಣ್ಣದ ಕಾರ್ಗೋ ಪ್ಯಾಂಟ್‌ ಹಾಗೂ ಆಲಿವ್ ಹಸಿರು ಟೀ ಶರ್ಟ್‌ ಧರಿಸಿದ್ದರು. ಅದರ ಮೇಲೆ ಹಸಿರು ಜಾಕೆಟ್​ ಹಾಕಿಕೊಂಡಿದ್ದರು. ಅಲ್ಲದೇ ನಟ ತಲೆಗೆ ಕ್ಯಾಪ್​ ಹಾಗೂ ಹಳದಿ ಕನ್ನಡಕ ಹಾಕಿಕೊಂಡಿದ್ದರು. ಮತ್ತೊಂದೆಡೆ, ಸಬಾ ಆಜಾದ್ ಅವರು ಹಸಿರು ಪ್ಯಾಂಟ್ ಮತ್ತು ಬೂದು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದರು. ಹೃತಿಕ್ ತಮ್ಮ ಮುಂಬರುವ ಚಿತ್ರ ಫೈಟರ್ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ತೆರಳಿದ್ದಾರೆ.

ಹೃತಿಕ್ ರೋಷನ್​ ಮತ್ತು ಸಾಬಾ ಆಜಾದ್ ಡೇಟಿಂಗ್ ಬಗ್ಗೆ ಬಹಳ ದಿನಗಳಿಂದ ವದಂತಿ ಹರಿದಾಡುತ್ತಿದೆ. ಈ ನಡುವೆ ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ಕೈ-ಕೈ ಹಿಡಿದು ಪ್ರವೇಶ ಪಡೆದ ನಂತರ ವದಂತಿಗೆ ತೆರೆ ಬಿದ್ದಿತ್ತು. ಹೃತಿಕ್ ಈ ಹಿಂದೆ ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರನ್ನು ವಿವಾಹವಾಗಿದ್ದರು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್​ನಲ್ಲಿ ಮಧ್ಯರಾತ್ರಿ 2ಕ್ಕೆ ವಿಶೇಷ ಫೋಟೋ ಪೋಸ್ಟ್‌ ಮಾಡಿದ ಆಲಿಯಾ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.