ETV Bharat / entertainment

ಜಪಾನ್​​ನಲ್ಲಿ RRR ಪ್ರಚಾರ ಜೋರು.. ಅ.21ರಿಂದ ಹೊರದೇಶದಲ್ಲಿ ರಾಮ್-ಭೀಮ್‌ ಹವಾ ಶುರು - RRR release in Japan

ಇದೇ ತಿಂಗಳ 21 ರಂದು ಜಪಾನ್‌ನಲ್ಲಿ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಜೂ. ಎನ್​ಟಿಆರ್, ರಾಮ್ ಚರಣ್, ಮತ್ತು ರಾಜಮೌಳಿ ಪ್ರಚಾರಕ್ಕಾಗಿ ಜಪಾನ್​​ಗೆ ತೆರಳಿದ್ದಾರೆ.

RRR movie team in Japan for promotion
ಜಪಾನ್​​ನಲ್ಲಿ ಆರ್​​ಆರ್​ಆರ್​ ಪ್ರಚಾರ
author img

By

Published : Oct 19, 2022, 12:22 PM IST

ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕ ರಾಜಮೌಳಿ ಅವರ ಚಿತ್ರಗಳು ಪ್ರಪಂಚದಾದ್ಯಂತ ಸುದ್ದಿ ಮಾಡುತ್ತಿದೆ. ಈಗಾಗಲೇ 'ಈಗ' ಮತ್ತು 'ಬಾಹುಬಲಿ' ಚಿತ್ರಗಳು ಹಲವು ದೇಶಗಳಲ್ಲಿ ಬಿಡುಗಡೆಯಾಗಿ ಜನಪ್ರಿಯಗೊಂಡಿವೆ. 'ಬಾಹುಬಲಿ' ಜಪಾನ್​​ಗೆ ಭಾಷಾಂತರಗೊಂಡಿದೆ ಮತ್ತು ಹೆಚ್ಚಿನ ಜನಪ್ರಿಯತೆಯನ್ನೂ ಗಳಿಸಿದೆ.

ಸದ್ಯ ಸುದ್ದಿಯಲ್ಲಿರುವ 'ಆರ್​ಆರ್​ಆರ್​' ಈಗಾಗಲೇ OTT ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟು ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಜಪಾನ್​​ನ ಚಿತ್ರಮಂದಿರಗಳಲ್ಲಿ ಆರ್​​ಆರ್​ಆರ್​ ತೆರೆಕಾಣಲಿದೆ.

RRR movie team in Japan for promotion
ಆರ್​ಆರ್​ಆರ್​ನ ರಾಮ್ ಮತ್ತು ಭೀಮ್‌

ಇತ್ತೀಚೆಗೆ ಅಮೆರಿಕದ ಅನೇಕ ಸ್ಥಳಗಳಲ್ಲಿ ಆರ್​ಆರ್​ಆರ್​ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ನಿರ್ದೇಶಕ ರಾಜಮೌಳಿ ಕೂಡ ಆ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಜೊತೆಗೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಪಡೆದರು. ಆಸ್ಕರ್ ಪ್ರಶಸ್ತಿಯ ರೇಸ್‌ನಲ್ಲಿರುವ ಈ ಚಿತ್ರಕ್ಕೆ ಅಮೆರಿಕದಲ್ಲಿ ವ್ಯಾಪಕ ಪ್ರಚಾರ ಸಿಕ್ಕಿದೆ.

ಇದನ್ನೂ ಓದಿ: ಭಾರತದ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದ ಕಾಂತಾರ!

ಜಪಾನ್‌ನಲ್ಲಿ ಆರ್​ಆರ್​ಆರ್​ನ ರಾಮ್ ಮತ್ತು ಭೀಮ್‌ನ ಸದ್ದು ಶುರುವಾಗಲಿದೆ. ಇದೇ ತಿಂಗಳ 21 ರಂದು ಜಪಾನ್‌ನಲ್ಲಿ ಆರ್‌ಆರ್‌ಆರ್ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಜೂನಿಯರ್ ಎನ್​ಟಿಆರ್, ರಾಮ್ ಚರಣ್ ತೇಜ್​, ಮತ್ತು ರಾಜಮೌಳಿ ಪ್ರಚಾರಕ್ಕಾಗಿ ಜಪಾನ್​​ಗೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.