ETV Bharat / entertainment

ಇಂಡಿಯನ್ ಪೊಲೀಸ್ ಫೋರ್ಸ್: ಶೂಟಿಂಗ್​ ಸೆಟ್​ಗೆ ವಾಪಸಾದ ನಿರ್ದೇಶಕ ರೋಹಿತ್ ಶೆಟ್ಟಿ - ರೋಹಿತ್ ಶೆಟ್ಟಿ ಅನಾರೋಗ್ಯ

ನಿನ್ನೆ ಇಂಡಿಯನ್ ಪೊಲೀಸ್ ಫೋರ್ಸ್‌ನ ಶೂಟಿಂಗ್​ ಸೆಟ್‌ನಲ್ಲಿ ಗಾಯಗೊಂಡಿದ್ದ ನಿರ್ದೇಶಕ ರೋಹಿತ್ ಶೆಟ್ಟಿ ಚೇತರಿಸಿಕೊಂಡು​​ ಸೆಟ್​​ಗೆ ವಾಪಸ್ಸಾಗಿದ್ದಾರೆ.

Rohit Shetty back to shooting set
ಶೂಟಿಂಗ್​ ಸೆಟ್​ಗೆ ವಾಪಸಾದ ರೋಹಿತ್ ಶೆಟ್ಟಿ
author img

By

Published : Jan 8, 2023, 3:55 PM IST

ಶೂಟಿಂಗ್​ ಸೆಟ್​ಗೆ ವಾಪಸಾದ ರೋಹಿತ್ ಶೆಟ್ಟಿ

ಚಲನಚಿತ್ರ ನಿರ್ಮಾಪಕ, ನಿರ್ದೇಶ ರೋಹಿತ್ ಶೆಟ್ಟಿ ಶನಿವಾರ ತಮ್ಮ ಚೊಚ್ಚಲ ಸರಣಿ ಇಂಡಿಯನ್ ಪೊಲೀಸ್ ಫೋರ್ಸ್‌ನ ಸೆಟ್‌ನಲ್ಲಿ ಗಾಯಗೊಂಡಿದ್ದರು. ಹೈದರಾಬಾದ್​ನಲ್ಲಿ ಕಾರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್​​ ಮಾಡುವಾಗ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದು ಶೂಟಿಂಗ್​​ ಸೆಟ್​​ಗೆ ವಾಪಸಾಗಿದ್ದಾರೆ. ತಮ್ಮ ಎರಡು ಬೆರಳುಗಳಿಗೆ ಹೊಲಿಗೆಗಳನ್ನು ಹಾಕಿದ್ದಾರೆ ಎಂದು ಬಹಿರಂಗಪಡಿಸಿದರು.

"ಮತ್ತೊಂದು ಕಾರು ಉರುಳಿದೆ. ಈ ಬಾರಿ ಎರಡು ಬೆರಳುಗಳಿಗೆ ಹೊಲಿಗೆ ಹಾಕಲಾಗಿದೆ. ಚಿಂತಿಸಬೇಕಾಗಿಲ್ಲ, ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ತುಂಬಾ ಧನ್ಯವಾದಗಳು. ಹೈದರಾಬಾದ್​ನಲ್ಲಿ ಇಂಡಿಯನ್ ಪೊಲೀಸ್ ಫೋರ್ಸ್‌ ಚಿತ್ರೀಕರಣ ಮುಂದುವರಿದಿದೆ ಎಂದು ಚಲನಚಿತ್ರ ನಿರ್ಮಾಪಕ ರೋಹಿತ್​ ಶೆಟ್ಟಿ ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಡಿಯನ್ ಪೊಲೀಸ್ ಫೋರ್ಸ್‌ ವೆಬ್​ ಸೀರಿಸ್​ನ ಪ್ರಮುಖರಲ್ಲಿ ಒಬ್ಬರಾಗಿರುವ ಸೂಪರ್​ಸ್ಟಾರ್​ ಸಿದ್ಧಾರ್ಥ್ ಮಲ್ಹೋತ್ರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕ್ಲಿಪ್‌ನಲ್ಲಿ, "ದುರದೃಷ್ಟಕರ ಘಟನೆಯ ನಂತರ ಸೆಟ್‌ಗೆ ಮರಳಿರುವ OG ಆ್ಯಕ್ಷನ್ ಮಾಸ್ಟರ್" ಎಂದು ಸಿದ್ಧಾರ್ಥ್ ಹೇಳುವುದನ್ನು ಕಾಣಬಹುದು. ಘಟನೆ ಸಂಭವಿಸಿ ಇನ್ನೂ 12 ಗಂಟೆ ಸಹ ಕಳೆದಿಲ್ಲ. ಆದರೆ ಅವರು ರಾಕ್‌ಸ್ಟಾರ್​​ ಮತ್ತೆ ಸೆಟ್‌ಗೆ ಮರಳಿದ್ದಾರೆ ಎಂದು ಸಿದ್ಧಾರ್ಥ್ ಹೇಳಿದರು. ರೋಹಿತ್ ವಿಡಿಯೋದಲ್ಲಿ ತಮ್ಮ ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಏನಿದು ಘಟನೆ?: ಇಂಡಿಯನ್ ಪೊಲೀಸ್ ಫೋರ್ಸ್‌ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಚಿತ್ರೀಕರಣದ ವೇಳೆ ಬಾಲಿವುಡ್ ಸ್ಟಾರ್​ ನಿರ್ದೇಶಕ ರೋಹಿತ್ ಶೆಟ್ಟಿ ಗಾಯಗೊಂಡಿದ್ದರು. ಅವರನ್ನು ಹೈದರಾಬಾದ್‌ ಮಹಾನಗರದ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮಾಹಿತಿ ಪ್ರಕಾರ, ಕಾರ್ ಚೇಸ್ ಶೂಟಿಂಗ್​ ದೃಶ್ಯದಲ್ಲಿ ರೋಹಿತ್ ಶೆಟ್ಟಿ ಗಾಯಗೊಂಡಿದ್ದರು. ಕಾಮಿನೇನಿ ಆಸ್ಪತ್ರೆಯಲ್ಲಿ ಅವರ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಶೂಟಿಂಗ್: ರೋಹಿತ್ ಶೆಟ್ಟಿ ಕಾರ್ ಚೇಸ್ ದೃಶ್ಯದ ಚಿತ್ರೀಕರಣಕ್ಕೆ ಸೆಟ್ ನಿರ್ಮಾಣವಾಗಿತ್ತು​. ಭರ್ಜರಿ ಸೀನ್​ ಸೆರೆ ಹಿಡಿಯಲು ಬೃಹತ್ ಸೆಟ್ ಅನ್ನು ನಿರ್ಮಾಣ ಮಾಡಲಾಗಿತ್ತು. ಈ ಸೆಟ್‌ನಲ್ಲಿಯೇ ಬಹುತೇಕ ಆ್ಯಕ್ಷನ್​ ಸೀನ್​​ ಶೂಟಿಂಗ್​​ ಆಯೋಜನೆಗೊಂಡಿತ್ತು. ಆದರೆ ಶೂಟಿಂಗ್​​ ವೇಳೆ ಅವಘಡ ಸಂಭವಿಸಿದೆ. ರೋಹಿತ್ ಶೆಟ್ಟಿ ಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

'ಇಂಡಿಯನ್ ಪೊಲೀಸ್ ಫೋರ್ಸ್': ಸಿಂಗಂ ಸರಣಿ, ಚೆನ್ನೈ ಎಕ್ಸ್‌ಪ್ರೆಸ್, ಗೋಲ್ಮಾಲ್ ಸರಣಿ, ಸಿಂಬಾ ಮತ್ತು ಸೂರ್ಯವಂಶಿಯಂತಹ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿರುವ ರೋಹಿತ್ ಶೆಟ್ಟಿ, ತಮ್ಮ ಚೊಚ್ಚಲ ವೆಬ್‌ ಸೀರಿಸ್ 'ಇಂಡಿಯನ್ ಪೊಲೀಸ್ ಫೋರ್ಸ್' ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ.

ಇಂಡಿಯನ್ ಪೊಲೀಸ್ ಫೋರ್ಸ್​ ಶೋ ಪೊಲೀಸ್ ಪಡೆಯ ಬಗೆಗಿನ ಕಥೆ. ದೇಶಾದ್ಯಂತ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಚಿತ್ರದ ಮೂಲಕ ಜನರಿಗೆ ತಲುಪಿಸುವ ಗುರಿಯನ್ನು ಈ ಶೋ ಹೊಂದಿದೆ. ನಟಿ ಶಿಲ್ಪಾ ಶೆಟ್ಟಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟ ವಿವೇಕ್ ಒಬೆರಾಯ್ ಈ ಸೀರಿಸ್​ನ ಮುಖ್ಯಭೂಮಿಕೆಯಲ್ಲಿದ್ದಾರೆ. ಇದು ಈ ವರ್ಷವೇ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ: ತೀವ್ರವಾಗಿ ಗಾಯಗೊಂಡ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು - ಬಿಡುಗಡೆ!

ಗಾಯಗೊಂಡಿದ್ದ ಸಿದ್ಧಾರ್ಥ್ ಮಲ್ಹೋತ್ರಾ, ಶಿಲ್ಪಾ ಶೆಟ್ಟಿ: ಈ ಹಿಂದೆ ಇದೇ ಸರಣಿಯ ಚಿತ್ರೀಕರಣದ ವೇಳೆ ನಟಿ ಶಿಲ್ಪಾ ಶೆಟ್ಟಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಗಾಯಗೊಂಡಿದ್ದರು. ಮುಂಬೈನಲ್ಲಿ ನಡೆದ ಶೂಟಿಂಗ್​ ವೇಖೆ ಶಿಲ್ಪಾ ಶೆಟ್ಟಿ ಅವರ ಕಾಲು ಮುರಿದಿತ್ತು. ಕೆಲ ದಿನಗಳ ಕಾಲ ವೀಲ್ ಚೇರ್ ಮೇಲೆ ಕೂರುವಂತಾಯ್ತು. ಆ ವೇಳೆ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಅಪ್​ಡೇಟ್​ ಮಾಡುತ್ತಿದ್ದರು. ಸದಾ ಸಕಾರಾತ್ಮಕವಾಗಿ ತಮ್ಮ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ಕಳೆದ ಮೇ ತಿಂಗಳಲ್ಲಿ ಇದೇ ಸೀರಿಸ್​ನ ಶೂಟಿಂಗ್​ ಗೋವಾದಲ್ಲಿ ನಡೆದಿತ್ತು. ಆಗ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆ ಗಾಯದ ವಿಡಿಯೋ ತುಣುಕನ್ನು ಸ್ವತಃ ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಿಜವಾದ ಬೆವರು, ನಿಜವಾದ ರಕ್ತಕ್ಕೆ ಸಮ ಎಂದು ಬರೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.