ETV Bharat / entertainment

ಪಾಂಡ್ಯ ಸಹೋದರರೊಂದಿಗೆ ರಾಕಿಂಗ್ ಸ್ಟಾರ್​ ಯಶ್​: KGF 3 ಎಂದ ಕ್ರಿಕೆಟಿಗ - Hardik Pandya tweet

ಪಾಂಡ್ಯ ಬ್ರದರ್ಸ್​​​ ಜೊತೆ ನಟ​ ಯಶ್​ ಕಾಣಿಸಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ 'KGF 3' ಸಖತ್​ ಸದ್ದು ಮಾಡುತ್ತಿದೆ.

Yash with Pandya brothers
ಪಾಂಡ್ಯ ಸಹೋದರರೊಂದಿಗೆ​ ಯಶ್
author img

By

Published : Dec 31, 2022, 1:29 PM IST

ಪ್ರಖ್ಯಾತ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸ್ಯಾಂಡಲ್​ವುಡ್ ಸೂಪರ್​​ಸ್ಟಾರ್ ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸೌಂಡ್​ ಮಾಡ್ತಿದೆ.

ಕೆಜಿಎಫ್ ಚಾಪ್ಟರ್​​ 3? ರಾಕಿಂಗ್​ ಸ್ಟಾರ್​​ ಯಶ್ ಅವರ ಕೆಜಿಎಫ್ ಚಾಪ್ಟರ್​​ 2 ಬಾಕ್ಸ್​​ ಆಫೀಸ್​​ನ ದಾಖಲೆಗಳನ್ನು ಮುರಿದು 2022ರ ಸೂಪರ್​ ಹಿಟ್​ ಚಿತ್ರವಾಗಿ ಹೊರಹೊಮ್ಮಿದೆ. ಅದಾದ ಬಳಿಕ ರಾಕಿಂಗ್​ ಸ್ಟಾರ್​ ಮುಂದಿನ ನಡೆ ಏನು? ಕೆಜಿಎಫ್​ 3 ಬರಲಿದೆಯಾ? ಯಾವ ನಿರ್ದೇಶಕ, ನಿರ್ಮಾಪಕರ ಜೊತೆ ಅವರು ಸಿನಿಮಾ ಮಾಡಲಿದ್ದಾರೆ? ಯಾವ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಕೇಳಿಬರುತ್ತಿದೆ. ಕೆಜಿಎಫ್ ಚಾಪ್ಟರ್​​ 3 ಬಗ್ಗೆ ಅಭಿಮಾನಿಗಳ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ನಿರೀಕ್ಷೆಯನ್ನಿಟ್ಟುಕೊಂಡಿದೆ. ಆದ್ರೆ ಪ್ಯಾನ್​ ಇಂಡಿಯಾ ಸ್ಟಾರ್​ ನಟನ ಬಾಯಿಂದ ಈವರೆಗೂ ಯಾವುದೇ ಅಧಿಕೃತ ಹೇಳಿಕ ಬಂದಿಲ್ಲ. ಕುಟುಂಬಕ್ಕೆ ಸಮಯ ಕೊಡುತ್ತಾ, ಪ್ರಶಸ್ತಿ ಪ್ರದಾನ ಸಮಾರಂಭ, ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತಿದ್ದಾರೆ ನಟ ಯಶ್​.

ಪಾಂಡ್ಯ ಸಹೋದರರೊಂದಿಗೆ ಯಶ್: ಈ ನಡುವೆ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಜೊತೆ ಕಾಣಿಸಿಕೊಂಡಿರೋದು ಮಾತ್ರ ಸಖತ್​ ಸುದ್ದಿಯಾಗಿದೆ. ಸ್ವತಃ ಹಾರ್ದಿಕ್ ಪಾಂಡ್ಯ ಈ ಫೋಟೋ ಹಂಚಿಕೊಂಡಿದ್ದು, KGF 3 ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಜೊತೆ KGF 3 ಎನ್ನುವ ಶೀರ್ಷಿಕೆ ಸೋಷಿಯಲ್​ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ. ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 3 ಟ್ರೆಂಡಿಂಗ್ ಆಗಿದೆ. ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಬಂದಿದೆ. ಆದರೆ ಯಶ್ ಮತ್ತು ಪಾಂಡ್ಯ ಸಹೋದರರು ಎಲ್ಲಿ, ಯಾವಾಗ ಭೇಟಿ ಆಗಿದ್ದಾರೆ ಎನ್ನುವ ವಿಷಯವನ್ನು ಮಾತ್ರ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ?

ಯಶ್ ಮುಂದಿನ ನಡೆ? ಕೆಜಿಎಫ್ ಬಳಿಕ ನೀವು ಏನು ಮಾಡುತ್ತಿದ್ದೀರಿ ಎಂದು ಜನರು ನನ್ನಲ್ಲಿ ಕೇಳುತ್ತಾರೆ. ನಿಮಗೆ ಏನನ್ನಿಸುತ್ತದೆ ಎಂದು ನಾನು ಮರು ಪ್ರಶ್ನಿಸುತ್ತೇನೆ. ಕೆಜಿಎಫ್ ಯಶಸ್ಸೇ ಅಂತಿಮವೇ. ಬಹುಶಃ ಇದು ನಿಮಗಾಗಿರಬಹುದು. ಆದರೆ ನಾನು ಇನ್ನೂ ಹೋರಾಡುವ ಮನಸ್ಸಿನಲ್ಲಿದ್ದೇನೆ ಎಂದು ಹೇಳುತ್ತೇನೆ. ನನಗೆ ಸಾಧಿಸುವ ಹಸಿವಿದೆ, ಹೋರಾಟದ ಮನೋಭಾವವಿದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ರಾಕಿಂಗ್​ ಸ್ಟಾರ್​ ಯಶ್ ಹೇಳಿದ್ದರು. ಹಾಗಾಗಿ ಅವರ ಮುಂದಿನ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.

ಇದನ್ನೂ ಓದಿ: ಪವಿತ್ರ ಬಂಧನಕ್ಕೆ ತೆಲುಗು ನಟ ನರೇಶ್ ಸಜ್ಜು.. ವಿಡಿಯೋ ಮೂಲಕ ಶುಭಸುದ್ದಿ ಹಂಚಿಕೊಂಡ ಜೋಡಿ

ಯಶ್ ಮುಂದಿನ ಸಿನಿಮಾ? ಕನ್ನಡ ಚಿತ್ರರಂಗದಲ್ಲಿ ಮಫ್ತಿ ಮಾಡಿದ್ದ ನಿರ್ದೇಶಕ ನರ್ತನ್ ಈ ಹಿಂದೆ ಯಶ್ ಅವರ 19ನೇ ಸಿನಿಮಾ ನಿರ್ದೇಶನ ಮಾಡ್ತಾರೆ ಅಂತಾ ಹೇಳಲಾಗಿತ್ತು. ಯಶ್ ಹಾಗು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಕಥೆ ಹೇಳಿ ಮಾತುಕತೆ ಕೂಡ ಆಗಿದೆ ಎಂದು ನಟ ಯಶ್ ಆಪ್ತರಿಂದ ಕೇಳಿ ಬಂದಿತ್ತು. ಇತ್ತೀಚೆಗೆ ಕೆವಿನ್ ಸಂಸ್ಥೆ ನಿರ್ದೇಶಕ ನರ್ತನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದೆ. ಈ ಎಲ್ಲ ಬೆಳವಣಿಗೆ ನೋಡಿದ್ರೆ ಯಶ್ ಅವರ ಮುಂದಿನ ಚಿತ್ರ ಅಂದ್ರೆ ಅವರ 19ನೇ ಸಿನಿಮಾಗೆ ನರ್ತನ್ ಆ್ಯಕ್ಷನ್​ ಕಟ್​ ಹೇಳ್ತಾರೆ ಅಂತಾ ಊಹಿಸಲಾಗಿದೆ. ಯಾವುದಕ್ಕೂ ನಟ ಯಶ್ ಅವರಿಂದಲೇ ಅಧಿಕೃತ ಹೇಳಿಕೆ ಬರಬೇಕಿದೆ. ಅವರ ಮುಂದಿನ ಸಿನಿಮಾ ಬಗ್ಗೆ ಅಪಾರ ಸಂಖ್ಯೆ ಅಭಿಮಾನಿಗಳು ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.