ETV Bharat / entertainment

Yash19: TOXIC ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್ ಯಶ್​​

author img

By ETV Bharat Karnataka Team

Published : Dec 8, 2023, 10:08 AM IST

Updated : Dec 8, 2023, 10:35 AM IST

Rocking Star Yash: ರಾಕಿಂಗ್​​ ಸ್ಟಾರ್​ ಯಶ್​ ತಮ್ಮ ಮುಂದಿನ ಪ್ರಾಜೆಕ್ಟ್​​ ಘೋಷಿಸಿದ್ದಾರೆ.

Rocking Star Yash
ರಾಕಿಂಗ್​ ಸ್ಟಾರ್ ಯಶ್​​

'ರಾಕಿಂಗ್​​ ಸ್ಟಾರ್​ ಯಶ್'​ ವಿಶೇಷ ಪರಿಚಯ ಬೇಕೆನಿಸದು. ಕೆಜಿಎಫ್​​ ಎಂಬ ಒಂದೇ ಒಂದು ಹೆಸರು ಸಾಕಲ್ಲವೇ. ಮಾಡಿದ್ದು 18 ಸಿನಿಮಾ. ಆದರೆ ಸಂಪಾದಿಸಿದ ಜನಪ್ರಿಯತೆ ಅಳೆಯಲಾಗದಷ್ಟು. 'ಸ್ವಯಂ ನಿರ್ಮಿತ ನಟ' ಖ್ಯಾತಿಯ ಯಶ್​ ಅವರ ಅಮೋಘ ಅಭಿನಯ ಅಪಾರ ಸಂಖ್ಯೆಯ ಸಿನಿಪ್ರಿಯರ ಮನ ಗೆದ್ದಿದೆ. ಜನಪ್ರಿಯತೆ ಜೊತೆಗೆ, ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ.

'Yash19' ಪ್ರಾಜೆಕ್ಟ್​​​ ಘೋಷಣೆ: ಹೀಗೆ ಸದಾ ಸುದ್ದಿಯಲ್ಲಿರುವ ನಟನ ಮುಂದಿನ ಸಿನಿಮಾ ಮೇಲೆ ಶಿಖರದಷ್ಟು ನಿರೀಕ್ಷೆಗಳಿವೆ. ಬ್ಲಾಕ್​ಬಸ್ಟರ್ ಕೆಜಿಎಫ್​​ 2 ಸಿನಿಮಾ ಬಂದು ಒಂದೂವರೆ ವರ್ಷ ಕಳೆದರೂ ನಟನ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಮೂರ್ನಾಲ್ಕು ದಿನಗಳ ಹಿಂದಷ್ಟೇ ತಮ್ಮ ಮುಂದಿನ ಸಿನಿಮಾ ಘೋಷಿಸುವುದಾಗಿ ಸ್ವತಃ ಕೆಜಿಎಫ್​ ಸ್ಟಾರ್​ ಯಶ್​​ ಘೋಷಿಸಿದ್ದರು. ಕೊಟ್ಟ ಮಾತಿನಂತೆ ಇಂದು ಬಹುನಿರೀಕ್ಷಿತ 'Yash19' ಪ್ರಾಜೆಕ್ಟ್​​​ ಘೋಷಣೆ ಆಗಿದೆ.

TOXIC........ ನಟ ಯಶ್​ ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್​ ಜೊತೆ ಕೈ ಜೋಡಿಸಿದ್ದು, ಇಂದು ಸಿನಿಮಾ ಘೋಷಣೆ ಆಗಿದೆ. 'TOXIC' ನಟನ ಮುಂದಿನ ಸಿನಿಮಾದ ಶೀರ್ಷಿಕೆ.

ಇದನ್ನೂ ಓದಿ: ವಿದೇಶದಲ್ಲಿ ತೆರೆಕಂಡು ದಾಖಲೆ ಬರೆದ ಕೊಂಕಣಿ ಸಿನಿಮಾ 'ಅಸ್ಮಿತಾಯ್'

ಕೆಜಿಎಫ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರದ ನಿರ್ಮಾಪಕರು ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ. ಈ ಮೊದಲೇ ಅಂದಾಜಿಸಿದಂತೆ ಗೀತು ಮೋಹನ್‌ದಾಸ್ ಯಶ್​ ನಟನೆಯ 19ನೇ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಈವರೆಗೆ ಯಶ್ 19 ಎಂದು ಹೆಸರಿಸಲಾಗುತ್ತಿದ್ದ ಕೆಜಿಎಫ್​ ಸ್ಟಾರ್​ನ ಸಿನಿಮಾದ ಅಧಿಕೃತ ಶೀರ್ಷಿಕೆ ಟಾಕ್ಸಿಕ್​​​. ಕೆವಿಎನ್ ಪ್ರೊಡಕ್ಷನ್ ಅಡಿ ವೆಂಕಟ್ ಕೆ ನಾರಾಯಣ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • " class="align-text-top noRightClick twitterSection" data="">

ಯಶ್​​ ಪೋಸ್ಟ್: ಸೋಷಿಯಲ್​​ ಮೀಡಿಯಾ ಪ್ಲಾಟ್​​​ಫಾರ್ಮ್​​ಗಳಲ್ಲಿ ಟೈಟಲ್​ ಅನೌನ್ಸ್​ಮೆಂಟ್​ ವಿಡಿಯೋ ಅನಾವರಣಗೊಂಡಿದೆ. ಸ್ವತಃ ಯಶ್ ಅವರೇ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅನೌನ್ಸ್‌ಮೆಂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "'ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ' - ರೂಮಿ. ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್ , ಟಾಕ್ಸಿಕ್" ಎಂದು ಬರೆದುಕೊಂಡಿದ್ದಾರೆ. ಸದ್ಯ ಅನೌನ್ಸ್​ಮೆಂಟ್​ ವಿಡಿಯೋ ನೋಡುತ್ತಿದ್ರೆ ಇದೊಂದು ಈ ಹಿಂದಿನ ಕೆಜಿಎಫ್​​​ ಸರಣಿಗಳಂತೆ ಮಾಸ್​ ಆ್ಯಕ್ಷನ್​​ ಸಿನಿಮಾ ಎಂಬುದು ಬಹುತೇಕ ಪಕ್ಕಾ ಆಗಿದೆ.

ಇದನ್ನೂ ಓದಿ: ಕೆಜಿಎಫ್​ ಸ್ಟಾರ್​ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ; 'ಯಶ್​​ 19' ಅನೌನ್ಸ್​ಮೆಂಟ್​ಗೆ ಕಾತರ

ಉಳಿದಂತೆ ಕೆಜಿಎಫ್​ 3 ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. 2025ರಲ್ಲಿ ಸಿನಿಮಾ ತೆರೆಕಾಣಲಿದ್ದು, ಶೀಘ್ರದಲ್ಲೇ ಶೂಟಿಂಗ್​ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ನಿತೇಶ್​ ತಿವಾರಿ ಅವರ ಬಾಲಿವುಡ್​ ರಾಮಾಯಣ ಸಿನಿಮಾದಲ್ಲೂ ಯಶ್​ ಹೆಸರು ಕೇಳಿಬರುತ್ತಿದೆ. ಎಲ್ಲದಕ್ಕೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

Last Updated : Dec 8, 2023, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.