ETV Bharat / entertainment

ಪೆಪ್ಸಿ ಜಾಹೀರಾತಿಗೆ ರಾಕಿಂಗ್​​ ಸ್ಟಾರ್ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ? - Yash upcoming films

ರಾಕಿಂಗ್​​ ಸ್ಟಾರ್ ಯಶ್ ಪೆಪ್ಸಿ ಕೂಲ್ ಡ್ರಿಂಕ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ‌.

Yash Pepsi advertisement
ರಾಕಿಂಗ್​​ ಸ್ಟಾರ್ ಯಶ್ ಪೆಪ್ಸಿ ಜಾಹೀರಾತು
author img

By

Published : Jan 25, 2023, 4:26 PM IST

ರಾಕಿಂಗ್​​ ಸ್ಟಾರ್ ಯಶ್ ಪೆಪ್ಸಿ ಜಾಹೀರಾತು

ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಹುದೊಡ್ಡ ಯಶಸ್ಸಿನ ಮೂಲಕ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕೆಜಿಎಫ್ 2 ಚಿತ್ರ ತೆರೆಕಂಡು ತಿಂಗಳುಗಳೇ ಕಳೆದರೂ ಯಶ್ 19ನೇ ಸಿನಿಮಾ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆದರೂ ಯಶ್​ ಮೇಲಿನ ಬೇಡಿಕೆ, ಆ ಕ್ರೇಜ್​ ಇನ್ನೂ ಕಮ್ಮಿಯಾಗಿಲ್ಲ. ಸಿನಿಮಾ ಇಲ್ಲದೇ ಇದ್ರೂ ಹೊಸ ಲುಕ್​​ನಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ ರಾಕಿಂಗ್​​ ಸ್ಟಾರ್ ಯಶ್.

ಪೆಪ್ಸಿ ಕೂಲ್ ಡ್ರಿಂಕ್ಸ್ ಜಾಹೀರಾತು: ಕೆಜಿಎಫ್​ 2 ಬಳಿಕ ನಟ ಯಶ್​ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಕೇವಲ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿದೆ. ಸಿನಿಮಾ ಘೋಷಣೆ ಮಾಡುತ್ತಾರೆ ಎಂಬ ಕುತೂಹಲದಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಯಶ್​ ಹೊಸ ಲುಕ್​ನಲ್ಲಿ ಪ್ರದರ್ಶನ ಕೊಟ್ಟಿದ್ದಾರೆ. ಕೋಟಿ ಕೋಟಿ ಸಂಭಾವನೆ ಸಿಗುವ ಇಂಟರ್​ನ್ಯಾಷನಲ್ ಜಾಹೀರಾತಿ​ನಲ್ಲಿ ನಟ ಯಶ್​ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ರೊಮ್ಯಾನ್ಸ್ ಮಾಡಿದ್ದ ಯಶ್ ಇದೀಗ ವಿಶ್ವದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರೋ ಪೆಪ್ಸಿ ಕೂಲ್ ಡ್ರಿಂಕ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ‌.

ಇಂಟರ್​ನ್ಯಾಷನಲ್​ ಜಾಹೀರಾತಿನಲ್ಲಿ ಕನ್ನಡದ ತಾರೆ: ರಾಕಿಂಗ್ ಸ್ಟಾರ್ ಈಗ ಕೇವಲ ಸ್ಯಾಂಡಲ್‌ವುಡ್ ಸ್ಟಾರ್ ಅಲ್ಲ. ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟನಾಗಿ ಹೊರ ಹೊಮ್ಮಿದ್ದಾರೆ. ಕೆಜಿಎಫ್ ಚಾಪ್ಟರ್ 1 ಬಂದಾಗಲೇ ಯಶ್ ಕ್ರೇಜ್‌ ದೇಶ್ಯಾದ್ಯಂತ ಸೃಷ್ಟಿಯಾಗಿತ್ತು. ಕೆಜಿಎಫ್​ ಚಾಪ್ಟರ್‌ 2 ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಬಾಲಿವುಡ್ ಸ್ಟಾರ್ ನಟರು ಸೇರಿದಂತೆ ಇಡೀ ಭಾರತೀಯ ಚಿತ್ರರಂಗವು ಕನ್ನಡದ ಕೆಜಿಎಫ್ ಹಾಗೂ ಯಶ್ ಬಗ್ಗೆ ಮಾತನಾಡುವ ಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು. ಈವರೆಗೆ ಬಾಲಿವುಡ್‌ ಹಾಗೂ ಕ್ರಿಕೆಟ್ ಲೋಕದ ತಾರೆಯರು ಮಾತ್ರ ಪೆಪ್ಸಿ ತಂಪು ಪಾನೀಯಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಇಂಟರ್​ನ್ಯಾಷನಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋದು ಹೆಮ್ಮೆಯ ವಿಚಾರ.

ಯಶ್ ಪಡೆದ ಸಂಭಾವನೆ: ನ್ಯಾಷನಲ್​ ಸ್ಟಾರ್ ಯಶ್ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಪೆಪ್ಸಿ ತಂಪು ಪಾನೀಯ ಸಂಸ್ಥೆ ಈಗ ಕನ್ನಡದ ನಟನನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡು ಅಗ್ರಿಮೆಂಟ್ ಮಾಡಿಕೊಂಡಿದೆ ಅಂದ್ರೆ ಭಾರೀ ಮೊತ್ತದ ಸಂಭಾವನೆಯನ್ನು ಯಶ್ ಅವರಿಗೆ ಕೊಟ್ಟಿರೋದು ಗೊತ್ತಾಗುತ್ತೆ. ಯಶ್ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಂಥಹ ಯಾವುದೇ ಅವಕಾಶ ಬಂದರೂ ಅಳೆದು ತೂಗಿ ಆರಿಸಿಕೊಳ್ಳುತ್ತಾರೆ.

ಹೀಗೆ ಇರಬೇಕಾದ್ರೆ ಸಹಜವಾಗಿ ಯಶ್ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಎಷ್ಟು ಕೋಟಿ ಸಂಭಾವನೆ ತೆಗೆದುಕೊಂಡಿರಬಹುದು ಅನ್ನೋ ಕುತೂಹಲ ಎಲ್ಲರಲ್ಲಿದೆ. ಆದರೆ ಇನ್​ಕಮ್ ಟ್ಯಾಕ್ಸ್ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ತಾವು ಸಿನಿಮಾಗೆ, ಜಾಹೀರಾತಿಗೆ ತೆಗೆದುಕೊಳ್ಳುವ ಸಂಭಾವನೆ ಬಗ್ಗೆ ನಿಖರ ಮಾಹಿತಿ ಕೊಡುವುದಿಲ್ಲ. ಆದರೂ ಯಶ್ ಈ ಪೆಪ್ಸಿ ಕೂಲ್‌ ಡ್ರಿಂಕ್ಸ್​​ ಆ್ಯಡ್​​ಗೆ ಪಡೆದಿರುವ ಸಂಭಾವನೆ ಎಷ್ಟು ಅನ್ನೋದರ ಬಗ್ಗೆ ಅವರ ಆಪ್ತ ಮೂಲಗಳು ಈಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಯಶ್ ಆಪ್ತರು ಹೇಳುವ ಪ್ರಕಾರ, ಅಡುಗೆ ಎಣ್ಣೆ ಜಾಹೀರಾತಿಗೆ ಯಶ್​ 1 ಕೋಟಿಯಿಂದ‌ 2 ಕೋಟಿ (ಕೆಲ ತಿಂಗಳಿಗೆ) ಸಂಭಾವನೆ ಪಡೆದಿದ್ರಂತೆ. ಈಗ ಪೆಪ್ಸಿ ಕೂಲ್ ಡ್ರಿಂಕ್ಸ್​ಗೆ 5 ರಿಂದ‌ 10 ಕೋಟಿ ರೂಪಾಯಿ ಸಂಭಾವನೆ ಪಡೆಯಲಾಗಿದೆ ಅಂತಾ ಯಶ್ ಬಲ್ಲವರು ಹೇಳಿದ ಮಾತು.

ಪಾನ್ ಮಸಾಲಾ ಜಾಹೀರಾತು ತಿರಸ್ಕಾರ: ಕೆಜಿಎಫ್ 1 ಸಿನಿಮಾ ಸಕ್ಸಸ್ ಬೆನ್ನಲ್ಲೇ ಯಶ್‌ ಅವರಿಗೆ ಒಂದು ಜಾಹೀರಾತಿನ ಆಫರ್ ಬಂದಿತ್ತು. ಪಾಸ್‌ ಮಸಾಲಾ ಒಂದರ ಅಂಬಾಸಿಡರ್ ಆಗುವುದಕ್ಕೆ ಡಬಲ್ ಡಿಜಿಟ್ (ಕೋಟಿ) ಮೊತ್ತದ ಸಂಭಾವನೆ ಕೊಡಲು ಮುಂದೆ ಬಂದಿದ್ದರು. ಯಶ್ ಅವರ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನೋಡಿಕೊಳ್ಳುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್​ಟೈನ್​ಮೆಂಟ್​​ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಯಶ್ ಆಫರ್ ತಿರಸ್ಕರಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದರು. 'ಪಾನ್ ಮಸಾಲಾ ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದರೂ ಈ ಜಾಹೀರಾತನ್ನು ನಾನು ಮಾಡುವುದಿಲ್ಲ' ಅಂತಾ ಯಶ್ ಹೇಳುವ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಸಲಾರ್‌ ಚಿತ್ರದಲ್ಲಿ ರಾಕಿಭಾಯ್.. ಐದು ಸೀಕ್ವೆಲ್‌ಗಳಲ್ಲಿ ಕೆಜಿಎಫ್ ತೆರೆಗೆ ಸಿದ್ಧತೆ

ಇದೀಗ ಯಶ್ ಪೆಪ್ಸಿ ಇಂಡಿಯಾ ಅಂಬಾಸಿಡರ್ ಆಗಿರುವ ವಿಚಾರವನ್ನು ಸಣ್ಣ ವಿಡಿಯೋ ಸಮೇತ ಹಂಚಿಕೊಂಡಿಕೊಂಡಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಪೆಪ್ಸಿ ಬಾಟಲ್ ಹಿಡಿದು ಪೋಸ್ ಕೊಟ್ಟಿದ್ದಾರೆ. ರಾಕಿ ಬಾಯ್ ನಯಾ ಅವತಾರಕ್ಕೆ ಅಭಿಮಾನಿಗಳು ಕೂಡ‌‌ ಫಿದಾ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.