ETV Bharat / entertainment

Rocking star Yash: ಕೌಬಾಯ್ ಲುಕ್​ನಲ್ಲಿ ರಾಕಿಂಗ್​ ಸ್ಟಾರ್ ಯಶ್...ಅಭಿಮಾನಿಗಳ ಬೇಡಿಕೆಯೇ ಬೇರೆ

author img

By

Published : Jul 5, 2023, 2:13 PM IST

Updated : Jul 5, 2023, 5:31 PM IST

ರಾಕಿಂಗ್​ ಸ್ಟಾರ್ ಯಶ್ ಅವರ ಹೊಸ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Rocking star Yash
ರಾಕಿಂಗ್​ ಸ್ಟಾರ್ ಯಶ್

ರಾಕಿಂಗ್​ ಸ್ಟಾರ್ ಯಶ್ ತಮ್ಮ ಅಮೋಘ ಅಭಿನಯದಿಂದ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಕಿ ಭಾಯ್​​ ದಾಡಿ ಲುಕ್, ಡಿಫ್ರೆಂಟ್​​​ ಹೇರ್ ಸ್ಟೈಲ್​ಗೆ ಅಭಿಮಾನಿಗಳು ಸೇರಿದಂತೆ ಸಿನಿ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ. ಕೆಜಿಎಫ್ 2 ಎಂಬ ಸೂಪರ್​ ಹಿಟ್ ಸಿನಿಮಾ ಕೊಟ್ಟ ನಂತರ ನಟ ಯಶ್ ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ. ಅವರ ಮುಂದಿನ ಪ್ರಾಜೆಕ್ಟ್​ ಬಗ್ಗೆ ಅಭಿಮಾನಿಗಳು ಅಪ್​ಡೇಟ್​ ಕೇಳುತ್ತಿರುವ ಈ ಹೊತ್ತಿನಲ್ಲಿ ನಟ ಹೊಸ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ನಟ ಯಶ್​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೌಬಾಯ್ ಲುಕ್​ನಲ್ಲಿ ರಾಕಿಂಗ್​ ಸ್ಟಾರ್: ಹೌದು, ಯಶ್ ಅವರ ಜಾಹೀರಾತಿನ ವಿಡಿಯೋವೊಂದು ಹೊರಬಿದ್ದಿದೆ. ಈ ವಿಡಿಯೋದಲ್ಲಿ ಯಶ್ ಲುಕ್ ಗಮನ ಸೆಳೆದಿದೆ. ಇದರಲ್ಲಿ ರಾಕಿಂಗ್​ ಸ್ಟಾರ್ ಯಶ್ ಕೌಬಾಯ್ (Cowboy) ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ, ಗಡ್ಡವನ್ನು ಹೆಚ್ಚಿಸುವ ಪ್ರೊಡಕ್ಟ್​ ಒಂದರ ಜಾಹೀರಾತಾಗಿದೆ. ಇದರಲ್ಲಿ ಯಶ್ ಪವರ್​ಫುಲ್​ ಲುಕ್​ ಬೀರಿದ್ದಾರೆ. ಈ ವಿಡಿಯೋ ನೋಡಿದ ಯಶ್ ಫ್ಯಾನ್ಸ್​ ಹುಚ್ಚೆದ್ದು ಕುಣಿದಿದ್ದಾರೆ.

ಮುಂದಿನ ಸಿನಿಮಾ ಘೋಷಣೆಗೆ ಒತ್ತಾಯ: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದ್ರೆ ಎಲ್ಲಕ್ಕಿಂತ ಹೆಚ್ಚಾಗಿ ಮುಂದಿನ ಪ್ರೊಜೆಕ್ಟ್​​​ ಘೋಷಿಸುವಂತೆ ಒತ್ತಾಯಿಸುತ್ತಿದ್ದಾರೆ. ಯಶ್ 19 ಘೋಷಣೆಗೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

ಯಶ್​ 19 ಶೂಟಿಂಗ್​​ ಶುರು?! ಯಶ್ ಅವರ ಮುಂಬರುವ ಪ್ರಾಜೆಕ್ಟ್​​ ಬಗ್ಗೆ ಅಭಿಮಾನಿಗಳ ಕುತೂಹಲ ಜೋರಾಗಿದೆ. ಆದರೆ ಈವರೆಗೆ ಈ ಚಿತ್ರದ ಯಾವುದೇ ಅಪ್​ಡೇಟ್ಸ್ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲ. ಮುಂದಿನ ಚಿತ್ರದ ಚಿತ್ರೀಕರಣ ಜೂನ್‌ನಲ್ಲಿಯೇ ಪ್ರಾರಂಭವಾಗಿದೆ ಎಂಬ ವದಂತಿಗಳಿವೆ. ಇದಕ್ಕಾಗಿ ಅವರು ಕೆಲ ಲೊಕೇಶನ್​ಗೆ ಅನುಮತಿ ಪಡೆಯಲು ಶ್ರೀಲಂಕಾಕ್ಕೆ ತೆರಳಿದ್ದರು ಎಂದು ಸಹ ಹೇಳಲಾಗಿದೆ. ಯಶ್ ಅವರು ಮಲಯಾಳಂ ನಿರ್ದೇಶಕರಾದ ಗೀತು ಮೋಹನ್‌ದಾಸ್ ಅವರೊಂದಿಗೆ ಗ್ಯಾಂಗ್‌ಸ್ಟರ್‌ಗೆ ಸಹಿ ಹಾಕಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ನಿರ್ಮಾಪಕರಿಗೆ ಅಡ್ವಾನ್ಸ್ ಹಣ​ ವಾಪಸ್​ ಕೊಟ್ಟ ನಟಿ ಸಮಂತಾ.. ಸಿನಿಮಾಗಳಿಂದ ಬ್ರೇಕ್​!

ಕೆಲ ದಿನಗಳ ಹಿಂದೆ ಸ್ಯಾಂಡಲ್​ವುಡ್​ನ ರಾಕಿ ಭಾಯ್​​ ಬಾಲಿವುಡ್​​ಗೆ ಹೋಗಲಿದ್ದಾರೆ ಎಂಬ ವದಂತಿಗಳು ಹರಡಿತ್ತು. ರಾಮಾಯಣ ಆಧಾರಿತ ಸಿನಿಮಾದಲ್ಲಿ ರಣ್​ಬೀರ್​ ಕಪೂರ್​ ಶ್ರೀರಾಮನ ಪಾತ್ರದಲ್ಲಿ, ಆಲಿಯಾ ಭಟ್​ ಸೀತೆ ಪಾತ್ರದಲ್ಲಿ, ಯಶ್​ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಆದ್ರೆ ಸ್ವತಃ ನಟ ಯಶ್​ ಅವರೇ ಈ ಸುದ್ದಿಯನ್ನು ತಳ್ಳಿಹಾಕಿದ್ದರು. ನಾನೆಲ್ಲೂ ಹೋಗಲ್ಲ, ಎಲ್ಲರನ್ನೂ ಇಲ್ಲಿಗೆ ಕರೆಸಿಕೊಂಡಿದ್ದೇನೆಂದು ಮೈಸೂರಿನಲ್ಲಿ ಹೇಳಿಕೆ ಕೊಟ್ಟಿದ್ದರು. ಸ್ವತಃ ನಟ ಯಶ್​ ಅವರೇ ಸ್ಪಷ್ಟನೆ ನೀಡಿದ ಹಿನ್ನೆಲೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಇನ್ನು ಪ್ರೇಕ್ಷಕರು ಹಣ ಕೊಟ್ಟು ಸಿನಿಮಾ ನೋಡ್ತಾರೆ, ಆ ಹಣಕ್ಕೆ ಬೆಲೆ ಇದೆ. ಅದಕ್ಕೆ ತಕ್ಕ ಕೆಲಸ ಮಾಡಬೇಕು, ನನ್ನ ಮೇಲೆ ಜವಾಬ್ದಾರಿಗಳಿವೆ ಎಂದು ತಿಳಿಸಿದ್ದ ನಟ ಶೀಘ್ರವೇ ಸಿನಿಮಾ ಘೋಷಣೆ ಆಗಲಿದೆ ಎಂದು ತಿಳಿಸಿದ್ದರು.

Last Updated : Jul 5, 2023, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.