ETV Bharat / entertainment

ಟ್ರೈಲರ್​​ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿದೆ‌ 'ರಕ್ಕಂ' ಸಿನಿಮಾ!

author img

By

Published : Jul 23, 2022, 6:01 PM IST

ಸ್ಯಾಂಡಲ್​ವುಡ್​ನಲ್ಲಿ 'ರಕ್ಕಂ' ಎಂಬ ಹೊಸ ಸಿನಿಮಾವೊಂದು ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ತೆರೆ ಕಾಣಲಿದೆ. ನಟ ರಣಧೀರ್ ಗೌಡಗೆ ಅಮೃತ ನಾಯರ್ ನಾಯಕಿ ಅಭಿನಯಿಸಿದ್ದು, ಚಿತ್ರದ ಟ್ರೈಲರ್​ ಸದ್ಯ ಯುಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ.

Released Of Movie Rakkam Trailer
'ರಕ್ಕಂ' ಚಿತ್ರ ತಂಡ

ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲೊಂದು ಹೊಸ ಚಿತ್ರತಂಡ 'ರಕ್ಕಂ' ಅಂತಾ ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ಸದ್ಯ 'ರಕ್ಕಂ' ಚಿತ್ರದ ಟ್ರೈಲರ್ ಅನಾವರಣಗೊಂಡಿದ್ದು, ಬಿಡುಗಡೆ ದಿನಾಂಕವನ್ನ ಕೂಡ ಅನೌನ್ಸ್​ ಮಾಡಿದೆ.

Released Of Movie Rakkam Trailer
'ರಕ್ಕಂ' ಚಿತ್ರ ತಂಡ

ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಸೆಂಧಿಲ್, ನಮ್ಮ ತಂಡದಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರವಿರಬಹುದು, ಆದರೆ, ಎಲ್ಲರಿಗೂ ರಂಗಭೂಮಿ ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವವಿದೆ‌. ನಾನು ಮೂಲತಃ ರಂಗಭೂಮಿ ಕಲಾವಿದ. ಎನ್​​ಎಸ್​ಡಿಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ.

ಪುನೀತ್ ರಾಜ್‍ಕುಮಾರ್ ಅವರು ನಡೆಸಿಕೊಡುತ್ತಿದ್ದ "ಕನ್ನಡದ ಕೋಟ್ಯಾಧಿಪತಿ" ಸೇರಿದಂತೆ ಅನೇಕ ರಿಯಾಲಿಟಿ ಶೋಗಳಿಗೆ ಕೆಲಸ ಮಾಡಿದ್ದೇನೆ. ಈಗ ಜನಪ್ರಿಯ ಸಂಗೀತ ನಿರ್ದೇಶಕರಾದ ಹಂಸಲೇಖ ಅವರ ಬಳಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಕೋವಿಡ್ ಪೂರ್ವದಲ್ಲಿ ನಿರ್ಮಾಣವಾದ ಚಿತ್ರವಿದು. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದರೂ ತಪ್ಪಾಗಲಾರದು. "ರಕ್ಕಂ" ಎಂದರೆ ಹಣದ ಗಂಟು ಎಂಬ ಅರ್ಥವಿದೆ ಅಂದು ಕಲಾವಿದರ ಪರಿಚಯ ಮಾಡಿಕೊಟ್ಟರು.

Released Of Movie Rakkam Trailer
'ರಕ್ಕಂ' ಚಿತ್ರ ತಂಡ

ಬಳಿಕ ನಾಯಕ ನಟ‌ ರಣಧೀರ್ ಗೌಡ ಮಾತನಾಡಿ, ನಾನು ಆದರ್ಶ ಫಿಲಂ ಸಂಸ್ಥೆ ಹಾಗೂ ರಂಗಾಯಣದಲ್ಲಿ ಅಭಿನಯ ಕಲಿತಿರುವೆ. ಸಹಾಯಕ ನಿರ್ದೇಶಕನಾಗಿಯೂ ದುಡಿದಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ರಂಗ ಎಂಬುದು ನನ್ನ ಪಾತ್ರದ ಹೆಸರು. ಎರಡು ಶೇಡ್​​​ಗಳಲ್ಲಿ ಅಭಿನಯಿಸಿದ್ದೇನೆ. ಮೊದಲು ಹಳ್ಳಿಯವನಾಗಿ ನಂತರ ಪಟ್ಟಣವಾಸಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು‌.

  • " class="align-text-top noRightClick twitterSection" data="">

ರಣಧೀರ್ ಗೌಡಗೆ ಅಮೃತ ನಾಯರ್ ನಾಯಕಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಹಿರಿಯ ಕಲಾವಿದ ನಂಜಪ್ಪ ಬೆನಕ, ನಿರ್ದೇಶಕ ಬಿ.ರಾಮಮೂರ್ತಿ, ನಟರಾದ ವಿನಯ್ ಪಾಂಡವಪುರ, ದಯಾನಂದ್ ಮುಂತಾದವರು ಅಭಿನಯಿಸಿದ್ದಾರೆ‌. ಈ ಚಿತ್ರಕ್ಕೆ ಛಾಯಾಗ್ರಾಹಕನಾಗಿ ಶ್ಯಾಮ್ ಕೆಲಸ ಮಾಡಿದ್ದು, ನಿರ್ದೇಶಕ ಶ್ರೀವತ್ಸ ಅವರ ಸಂಗೀತವಿದೆ. ಈ ಹಾಡುಗಳನ್ನ ರವೀಂದ್ರ ಸೊರಗಾವಿ ಹಾಡಿದ್ದಾರೆ.

ನೃತ್ಯ ನಿರ್ದೇಶಕರಾದ ಚಾಮರಾಜ್, ಅರುಣ್ ಕೆಲಸ ಮಾಡಿದ್ದಾರೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ ಸಂದೇಶ್ ವರ್ಕ್ ಮಾಡಿದ್ದು, ಸಹ ನಿರ್ದೇಶಕ ಗೋಪಾಲ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

Released Of Movie Rakkam Trailer
'ರಕ್ಕಂ' ಚಿತ್ರ ತಂಡ

ಹೊಸಬರ ಕನಸಿಗೆ ನಿರ್ಮಾಪಕಿ ಸ್ನೇಹಲತ, ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಹೊಂದಿರುವ 'ರಕ್ಕಂ' ಸಿನಿಮಾ‌ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಅನ್ನೋದು ನಿರ್ಮಾಪಕಿ ಸ್ನೇಹಲತ ನಂಬಿಕೆ. ಸದ್ಯ ಟ್ರೈಲರ್ ಗಮನ ಸೆಳೆಯುತ್ತಿರೋ ರಕ್ಕಂ ಸಿನಿಮಾ ಜುಲೈ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.