ETV Bharat / entertainment

'ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಅನ್ನೋದನ್ನು ಸಂವಿಧಾನದಲ್ಲಿ ತೀರ್ಮಾನಿಸಲಿ' - Kiccha Sudeep hindi language statement

ಗರಡಿ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಸಚಿವ ಬಿ.ಸಿ.ಪಾಟೀಲ್​, ಖಳನಟ ರವಿಶಂಕರ್​ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರು ಹಿಂದಿ ಹೇರಿಕೆ ಸಂಬಂಧ ವೈಯಕ್ತಿಕ ಪ್ರತಿಕ್ರಿಯೆ ನೀಡಿದರು.

ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಅನ್ನೋದನ್ನ ಸಂವಿಧಾನದಲ್ಲಿ ತೀರ್ಮಾನ ಮಾಡಬೇಕು : ಕೃಷಿ ಸಚಿವ

author img

By

Published : Apr 28, 2022, 7:09 PM IST

ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ ಹಾಗು ಸುದೀಪ್ ನಡುವೆ ನಡೆದ ಟ್ವಿಟರ್ ಸಂಭಾಷಣೆ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ಸುದೀಪ್ ಪರವಾಗಿ ಮೋಹಕ ತಾರೆ ರಮ್ಯಾ, ಚೇತನ್,‌ ನೀನಾಸಂ ಸತೀಶ್ ಸೇರಿದಂತೆ ಸಾಕಷ್ಟು ತಾರೆಯರು ಧ್ವನಿ ಎತ್ತಿದ್ದಾರೆ. ಇದೀಗ ನಟ‌ ಹಾಗು ಕೃಷಿ ಸಚಿವ ಬಿ.ಸಿ.ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್ ಹಾಗು ಖಳನಟ ಪಾತ್ರಗಳಲ್ಲಿ ಪ್ರಖ್ಯಾತಿ ಹೊಂದಿರುವ ನಟ ರವಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಸಿ.ಪಾಟೀಲ್ ಮಾತನಾಡಿ, ಕಲೆ ಹಾಗು ಕಲಾವಿದನಿಗೆ ಭಾಷೆಯ ನಿರ್ಬಂಧ ಇಲ್ಲ ಅನ್ನೋದಕ್ಕೆ‌ ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸ್ತಿರೋದೇ ಸಾಕ್ಷಿ. ಕನ್ನಡ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳು ಹಿಂದಿಗೆ ಡಬ್ ಆಗಿ ವಾಹಿನಿಗಳಲ್ಲಿ ಪ್ರಚಾರ ಆಗುತ್ತಿವೆ. ಆದರೆ, ಅದರಲ್ಲಿ ಸ್ವಾರ್ಥ ಬೆರೆಸೋದು ಸರಿಯಲ್ಲ. ಹಿಂದಿ ಭಾಷೆಯನ್ನು ದೇಶದೆಲ್ಲೆಡೆ ಹೆಚ್ಚಾಗಿ ಬಳಸಲಾಗುತ್ತಿದೆ, ಹಿಂದಿ ರಾಷ್ಟ್ರ ಭಾಷೆ ಹೌದೋ ಅಥವಾ ಇಲ್ಲವೋ ಅನ್ನೋದನ್ನು ಸಂವಿಧಾನದಲ್ಲಿ ತೀರ್ಮಾನ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಜಾಣ್ಮೆಯ ಉತ್ತರ ನೀಡಿದರು.

ಇದನ್ನೂ ಓದಿ: ಮಗಳಿಗೆ ಕಟ್ಟಿದ ಹೊಸ ಮನೆಗೆ 'ಶ್ರೀ ನರೇಂದ್ರ ಮೋದಿ ನಿಲಯ' ಎಂದು ಹೆಸರಿಟ್ಟ ಅಭಿಮಾನಿ

ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಈ ವಿವಾದದಲ್ಲಿ ನಾನು ಸೇರಿಕೊಳ್ಳುವುದಿಲ್ಲ. ನಾವು ಸಿನಿಮಾಗಳನ್ನು ಮಾಡೋದು ವ್ಯಾಪಾರ ದೃಷ್ಟಿಯಿಂದ ಎಂದಷ್ಟೇ ಹೇಳಿದರೆ ಆರ್ಮುಗಂ ರವಿಶಂಕರ್ ಮಾತನಾಡಿ, ನಾನು ಸುದೀಪ್ ಸಾರ್ ಪರವಾಗಿದ್ದೀನಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.