ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ 'ರೈನ್ಬೋ'. ನಿನ್ನೆಯಷ್ಟೇ ಈ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್ನಲ್ಲಿ ನೆರವೇರಿದೆ. ಶಂತರುಬನ್ ಚಿತ್ರಕಥೆ ಬರೆದಿದ್ದು, ಅವರೇ ನಿರ್ದೇಶಿಸಲಿರುವ 'ರೈನ್ಬೋ' ಸ್ತ್ರೀ ಪ್ರಧಾನ ಸಿನಿಮಾ ಆಗಿದ್ದು, ಚಿತ್ರದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ನಟ ದೇವ್ ಮೋಹನ್ ಜೊತೆ ತೆರೆ ಹಂಚಿಕೊಳ್ಳಲಿರುವ ರಶ್ಮಿಕಾ ಮಂದಣ್ಣ ಅವರನ್ನು ನೀವು ಇದುವರೆಗೂ ನೋಡದ ಪಾತ್ರದಲ್ಲಿ ನೋಡಬಹುದಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ರಶ್ಮಿಕಾ ಅವರು ಬ್ಯುಸಿಯಾಗಿದ್ದು, ನಿರ್ದೇಶಕ ಶಂತರುಬನ್ ಕೊಟ್ಟಿರುವ ಹೇಳಿಕೆ ಸದ್ಯ ಸಂಚಲನ ಸೃಷ್ಟಿಸಿದೆ.
ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ತೆಲುಗು ನಟಿ ಸಮಂತಾ ರುತ್ ಪ್ರಭು ಕೂಡ ವಿಭಿನ್ನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಇವರಿಬ್ಬರ ನ್ಯಾಶನಲ್ ವೈಡ್ ಸ್ಟಾರ್ ಡಮ್ ಉತ್ತುಂಗದಲ್ಲಿದೆ.
ರಶ್ಮಿಕಾ ಮಂದಣ್ಣ ಅವರು ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ತ್ರೀ ಪ್ರಧಾನ ದ್ವಿಭಾಷಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಾಲ್ಪನಿಕ ಪ್ರೇಮಕಥೆಯುಳ್ಳ ಈ ಸಿನಿಮಾದ ಶೂಟಿಂಗ್ ನಿನ್ನೆ ಪೂಜಾ ಕಾರ್ಯಗಳೊಂದಿಗೆ ಆರಂಭವಾಗಿದೆ. ಆದರೆ ಈ ಸಿನಿಮಾಗೆ ಮೊದಲ ಆಯ್ಕೆ ರಶ್ಮಿಕಾ ಆಗಿರಲಿಲ್ಲ. ಸಮಂತಾ ಅವರ ಬಳಿ ಈ ಚಿತ್ರದ ಆಫರ್ ಇತ್ತು. ಕೆಲ ಅನಿವಾರ್ಯ ಕಾರಣ, ಬ್ಯುಸಿ ಶೆಡ್ಯೂಲ್ ಹಿನ್ನೆಲೆ ಅಂತಿಮವಾಗಿ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ.
ವಾಸ್ತವವಾಗಿ ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ 2021ರಲ್ಲಿ ನಟಿ ಸಮಂತಾ ರುತ್ ಪ್ರಭು ಜೊತೆ ಸಿನಿಮಾ ಘೋಷಿಸಿತ್ತು. ಆದರೆ ಈವರೆಗೂ ಅದರ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ನಿನ್ನೆ ರಶ್ಮಿಕಾರ ಜೊತೆ ರೈನ್ಬೋ ಚಿತ್ರ ಘೋಷಿಸಿದೆ. ರಶ್ಮಿಕಾಗೆ ಜೋಡಿಯಾಗಿ ದೇವ್ ಮೋಹನ್ ಬಣ್ಣ ಹಚ್ಚಲಿದ್ದಾರೆ. ತಮಿಳು ನಿರ್ದೇಶಕ ಶಂತರುಬನ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಸಮಂತಾ ಸ್ಥಾನಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ.
ಈ ಸಿನಿಮಾ ಲಾಂಚ್ ವೇಳೆ ನಿರ್ಮಾಪಕ ಎಸ್ ಆರ್ ಪ್ರಭು ಅವರಿಗೂ ಇದೇ ಪ್ರಶ್ನೆ ಎದುರಾಗಿದೆ. ನಟಿ ಬದಲಾವಣೆ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಅವರು ಕೊಟ್ಟ ಉತ್ತರ ಪರೋಕ್ಷವಾಗಿ ಸಮಂತಾ ಅವರನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ''ಚಿತ್ರ ರಚನೆಕಾರರು, ಸ್ಕ್ರಿಪ್ಟ್‌ಗಳು ಸರಿಯಾದ ವ್ಯಕ್ತಿಯನ್ನು ಸರಿಯಾದ ಸ್ಥಳದಲ್ಲಿ ಆಯ್ಕೆ ಮಾಡುತ್ತದೆ. ನಾವು ಅದನ್ನು ನಂಬುತ್ತೇವೆ. ಆ ಪ್ರಕ್ರಿಯೆ ಬದಲಾಯಿಸಲು ನಾವು ಬಯಸುವುದಿಲ್ಲ. ಕಂಟೆಂಟ್ ಮತ್ತು ಕರ್ಮಗಳು ಹಾಗೆ ಎದುರಾಗಿವೆ. ಅವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ'' ಎಂದಿದ್ದಾರೆ. ಆದರೆ ಈ ಕಾಮೆಂಟ್‌ಗಳು ಸಮಂತಾ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕರ್ಮ ಎಂಬ ಪದವನ್ನು ಬಳಸುವುದು ಸೂಕ್ತವಲ್ಲ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿ ಮಹಿಳಾ ಪ್ರಧಾನ ಸಿನಿಮಾಗೆ ರಶ್ಮಿಕಾ ನಾಯಕಿ: 'ರೈನ್ಬೋ' ಪೋಸ್ಟರ್ ಔಟ್
ಸಮಂತಾ ಈ ಪ್ರಾಜೆಕ್ಟ್ ಅಂತಿಮಗೊಳಿಸುವ ಹೊತ್ತಿಗೆ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಅನಾರೋಗ್ಯಕ್ಕೆ ಒಳಗಾದರು. ಸಿನಿಮಾಗಳಿಂದ ಕೆಲ ಸಮಯ ವಿರಾಮ ತೆಗೆದುಕೊಂಡಳು. ಸದ್ಯ ತಾವು ಒಪ್ಪಿಕೊಂಡಿರುವ ಬೇರೆ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಾಗ್ಯೂ, ಈ ಕಾಮೆಂಟ್‌ಗಳು ಸದ್ಯ ಹಾಟ್ ಟಾಪಿಕ್ ಆಗಿವೆ.
ಇದನ್ನೂ ಓದಿ: 'ಆ ಹುಡುಗಿಯಾದರೂ ಸಂತೋಷವಾಗಿರಲಿ': ನಾಗ ಚೈತನ್ಯ - ಶೋಭಿತಾ ಡೇಟಿಂಗ್ ವದಂತಿಗೆ ಸಮಂತಾ ಪ್ರತಿಕ್ರಿಯೆ
ಪ್ರಸ್ತುತ ಶಾಕುಂತಲಂ ಚಿತ್ರದ ಪ್ರಚಾರದಲ್ಲಿ ನಟಿ ಸಮಂತಾ ನಿರತರಾಗಿದ್ದಾರೆ. ಇದೇ ತಿಂಗಳ 14ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ನಂತರ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಸಿಟಾಡೆಲ್ ವೆಬ್ ಸೀರಿಸ್ನ ಹಿಂದಿ ಆವೃತ್ತಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.