ಹೈದರಾಬಾದ್: ವಿಚ್ಛೇದಿತ ರ‍್ಯಾಪರ್ ಯೋ ಯೋ ಹನಿ ಸಿಂಗ್ ಬಾಳಲ್ಲಿ ಮತ್ತೊಬ್ಬ ಗೆಳತಿ ಪ್ರವೇಶಿಸಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ಹುಡುಗಿ ಮತ್ಯಾರು ಅಲ್ಲ, ಮಾಡೆಲ್ ಟೀನಾ ಥಂಡನಿ. ಕಾರ್ಯಕ್ರಮವೊಂದರಲ್ಲಿ ಹನಿ ಸಿಂಗ್ ಕೂಡ ಥಂಡನಿಯನ್ನು ಪರಿಚಯಿಸಿದ್ದ. ಇದಾದ ಬಳಿಕ ಮತ್ತೊಮ್ಮೆ ಹನಿ ಸಿಂಗ್ ಆಕೆಯ ಸಂಬಂಧ ಲೈಮ್ ಲೈಟ್ಗೆ ಬಂದಿದೆ. ತಮ್ಮ ಗರ್ಲ್ ಫ್ರೆಂಡ್ ಟೀನಾ ಹುಟ್ಟು ಹಬ್ಬದ ಹಿನ್ನೆಲೆ ಶುಭ ಕೋರಿ ಹನಿ ಸಿಂಗ್ ಫೋಟೋ ಹಂಚಿಕೊಂಡಿದ್ದಾರೆ.
ಹ್ಯಾಪಿ ಬರ್ತಡೇ ಜಾನ್: ಗೆಳತಿ ಜೊತೆಗಿನ ಸೆಲ್ಫಿ ಫೋಟೋ ಹಂಚಿಕೊಂಡಿರುವ ಹನಿ ಸಿಂಗ್ 'ಹ್ಯಾಪಿ ಬರ್ತಡೇ ಜಾನ್' ಎಂದಿದ್ದಾರೆ. ಇನ್ನು ಹನಿ ಸಿಂಗ್ ಶುಭಾಶಯಕ್ಕೆ ಪಿಂಕ್ ಹಾರ್ಟ್ ಎಮೋಜಿ ಮೂಲಕ ಟೀನಾ ಕೂಡ ಪ್ರತಿಕ್ರಿಯಿಸಿದ್ದಾರೆ.
ಯಾರು ಇದು ಥಂಡನಿ?: ವೃತ್ತಿಯಲ್ಲಿ ಮಾಡೆಲ್ ಆಗಿರುವ ಥಂಡನಿ ಅನೇಕ ರ‍್ಯಾಪ್ ವಾಕ್ ನಡೆಸಿದ್ದಾರೆ. 2008ರಲ್ಲಿ ದಿ ಮೋಲ್ ಎಂಬ ಚಿತ್ರದಲ್ಲೂ ಈಕೆ ನಟಿಸಿದ್ದಾರೆ. ಜೊತೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಹನಿಸಿಂಗ್ ಆಲ್ಬಂ ಪ್ಯಾರಿಸ್ ಟ್ರಿಪ್ ಅಲ್ಲಿ ನಡು ಬಳುಕಿಸಿದ್ದಾರೆ. ಆಲ್ಬಂನಲ್ಲಿ ಆಕೆ ಡ್ಯಾನ್ಸ್ ಮತ್ತು ಸ್ಟೈಲ್ ಹಲವರಿಂದ ಮೆಚ್ಚುಗೆ ಪಡೆದಿತ್ತು.
ಗ್ಲಾಮರಸ್ ಗರ್ಲ್ ಆಗಿರುವ ಟೀನಾ ಹನಿ ಸಿಂಗ್ ಜೊತೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಅವರು ಪ್ರತಿನಿತ್ಯ ಅಭಿಮಾನಿಗಳೊಂದಿಗೆ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ಸೂಪರ್ ಸ್ಟಾರ್ ರಜಿನಿಕಾಂತ್ ಹುಟ್ಟುಹಬ್ಬ: ಶುಭಾಶಯದ ಮಳೆಗರೆದ ಅಭಿಮಾನಿಗಳು