ETV Bharat / entertainment

ಆ್ಯಪ್ ಆಧಾರಿತ ಬೈಕ್​ ಚಾಲಕ‌ನ ಮೇಲೆ ರೂಪದರ್ಶಿಯಿಂದ ಸುಳ್ಳು ದೂರು: ಡಿಸಿಪಿ

ರಾತ್ರಿ ವೇಳೆ ಬೈಕ್ ಚಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಉದಯೋನ್ಮುಖ ನಟಿ ಹಾಗೂ ರೂಪದರ್ಶಿ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ನಟಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

author img

By

Published : Nov 16, 2022, 11:23 AM IST

Updated : Nov 16, 2022, 3:17 PM IST

rapido-driver-misbehaved-with-actress-in-bengaluru
ಬೆಂಗಳೂರಲ್ಲಿ ರಾತ್ರಿ ವೇಳೆ ನಟಿಯೊಂದಿಗೆ ರ್‍ಯಾಪಿಡೋ ಚಾಲಕ‌ನ ವಿಕೃತಿ

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ರ‍್ಯಾಪಿಡೋ ಬೈಕ್ ಚಾಲಕನೊಬ್ಬ ತನ್ನ ಖಾಸಗಿ ಭಾಗ ಸ್ಪರ್ಶಿಸಿ ವಿಕೃತ ವರ್ತನೆ ತೋರಿರುವುದಾಗಿ ಉದಯೋನ್ಮುಖ ನಟಿ ಹಾಗೂ ರೂಪದರ್ಶಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಬಗ್ಗೆ ನಟಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಈ ಘಟನೆಗೆ ತಿರುವು ಸಿಕ್ಕಿದೆ. ನಟಿ ಸುಳ್ಳು ದೂರು ನೀಡಿದ್ದಾರೆ ಎಂದು ಡಿಸಿಪಿ ಸ್ಪಷ್ಟನೆ ಕೊಟ್ಟಿದ್ದಾರೆ.

ನಟಿ ನೀಡಿದ ದೂರಿನಲ್ಲೇದೆ?: ಅಕ್ಟೋಬರ್ 31ರ ರಾತ್ರಿ 10:30ರ ರಾತ್ರಿ ಜಕ್ಕೂರಿನಿಂದ ಬಾಬುಸಪಾಳ್ಯಕ್ಕೆ ಬೈಕ್ ಬುಕ್ ಮಾಡಿದ್ದರು. ಬಳಿಕ KA 51 H 5965 ನಂಬರಿನ ಬೈಕ್ ಬಂದಿದೆ. ಆದರೆ ಮಾರ್ಗಮಧ್ಯೆ ಚಾಲಕ ತನ್ನ ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ತಿಳಿಸಿದ್ದರು.

ಚಾಲಕ ಹಾಗೂ ರ‍್ಯಾಪಿಡೋ ಕಂಪನಿ ವಿರುದ್ಧ ನಟಿ ನೀಡಿದ ದೂರಿನನ್ವಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರುದಾರೆ 21 ವರ್ಷದ ಯುವತಿಯಾಗಿದ್ದು ನಟನೆಯ ಜೊತೆಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆ್ಯಪ್ ಆಧಾರಿತ ಬೈಕ್​ ಚಾಲಕ‌ನ ಮೇಲೆ ರೂಪದರ್ಶಿಯಿಂದ ಸುಳ್ಳು ದೂರು: ಡಿಸಿಪಿ ಮಾಹಿತಿ

ಡಿಸಿಪಿ ಹೇಳಿದ್ದಿಷ್ಟು.. ನಮ್ಮ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಯುವತಿ ಮೊದಲು ಬೈಕ್​ ಬುಕ್​ ಮಾಡಿದ್ದರು. ನಂತರ ಅದನ್ನು ಕ್ಯಾನ್ಸಲ್​ ಮಾಡಿದ್ದರು. ಆರೋಪಿ ಸ್ಥಳಕ್ಕೆ ಹೋಗಿರುವ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಇದೊಂದು ಸುಳ್ಳು ಪ್ರಕರಣ ಅಂತಾ ತಿಳಿದುಬಂದಿದೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಶ್ರದ್ಧಾ ತಲೆಗಾಗಿ ಪೊಲೀಸರ ಶೋಧ: ಆಘಾತಕಾರಿ ಸಂಗತಿ​ ಬಾಯ್ಬಿಟ್ಟ ದುರುಳ ಅಫ್ತಾಬ್!

Last Updated : Nov 16, 2022, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.