ETV Bharat / entertainment

93ರ ಅಜ್ಜನೊಂದಿಗೆ ಡ್ಯಾನ್ಸ್ ಮಾಡಿದ ರಣ್​​​ವೀರ್ ಸಿಂಗ್.. ಆನ್​ಲೈನ್​ಲ್ಲಿ ಜುಮ್ಕಾ ಸಾಂಗ್​ ಸದ್ದು - ರಣ್​​ವೀರ್​ ಸಿಂಗ್​

ರಣ್​​​ವೀರ್ ಸಿಂಗ್ ತಮ್ಮ ಅಜ್ಜನೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ranveer singh with grandfather
ಅಜ್ಜನೊಂದಿಗೆ ಡ್ಯಾನ್ಸ್ ಮಾಡಿದ ರಣ್​​​ವೀರ್ ಸಿಂಗ್
author img

By

Published : Aug 2, 2023, 3:57 PM IST

ಬಾಲಿವುಡ್ ನಟ ರಣ್​​​ವೀರ್ ಸಿಂಗ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ರಣ್​​​ವೀರ್ ಸಿಂಗ್ ತಮ್ಮ ರಾಕಿ ಪಾತ್ರದಿಂದ ಇನ್ನೂ ಹೊರಬಂದಿಲ್ಲ. ಸದ್ಯ ಸಿನಿಮಾ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಕರಣ್ ಜೋಹರ್ ಆ್ಯಕ್ಷನ್​ ಕಟ್​​ ಹೇಳಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಜುಮ್ಕಾ ಸಾಂಗ್​​ ಜನಮನದಲ್ಲಿ ಉಳಿದಿದೆ. ಇದೀಗ ಚಿತ್ರದ ನಾಯಕ ನಟ ತಮ್ಮ 93 ವರ್ಷದ ಅಜ್ಜನೊಂದಿಗೆ ಡ್ಯಾನ್ಸ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಾಯಕ ನಟ ಇಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ತಮ್ಮ 93 ವರ್ಷದ ಅಜ್ಜನೊಂದಿಗೆ ನಟ ಕಾಣಿಸಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ರಣ್​​ವೀರ್ ಅವರ ಅಜ್ಜ 'ಟೀಮ್ ರಾಕಿ' ಟೀ ಶರ್ಟ್ ಧರಿಸಿ ಮೊಮ್ಮಗನೊಂದಿಗೆ ಪೋಸ್ ನೀಡುತ್ತಿದ್ದಾರೆ. ಇನ್​ಸ್ಟಾಗ್ರಾಮ್​​ ಪೋಸ್ಟ್​ನ ಎರಡನೇ ಸ್ಲೈಡ್‌ನಲ್ಲಿ ವಾಟ್ ಜುಮ್ಕಾ ಸಾಂಗ್​​ಗೆ ಇಬ್ಬರೂ ಒಟ್ಟಿಗೆ ಮೈ ಕುಣಿಸಿರುವುದನ್ನು ಕಾಣಬಹುದು. ಮೂರನೇ ಸ್ಲೈಡ್‌ನಲ್ಲಿ ರಣ್​​ವೀರ್‌ ಅವರ ಅಜ್ಜ "ಟಿಕ್ಕಿ ಚೋರೋ ಟೆಕಿಲಾ ಲಾವೋ" ಎಂದು ಹೇಳುತ್ತಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಈ ಪೋಸ್ಟ್ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸುಂದರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, "ಇಬ್ಬರೂ ಹೃದಯಸ್ಪರ್ಶಿಗಳು" ಎಂದು ಬರೆದಿದ್ದಾರೆ. ನಿರೂಪಕ ಗೌರವ್ ಕಪೂರ್ ಕಾಮೆಂಟ್ ಮಾಡಿ, "ರಾಕಿ ಮತ್ತು ರಾಕ್‌ಸ್ಟಾರ್" ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ, "ವಿಶೇಷ ಕ್ಷಣ, ಅವರು ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತಾರೆ" ಎಂದು ಬರೆದಿದ್ದಾರೆ. ಇದಕ್ಕೂ ಮೊದಲು ನಟ ರಣ್​​ವೀರ್ ಸಿಂಗ್ ಸಹ-ನಟಿ ಆಲಿಯಾ ಭಟ್ ಮತ್ತು ನಿರ್ದೇಶಕ ಕರಣ್ ಜೋಹರ್ ಅವರೊಂದಿಗೆ ಮುಂಬೈ ಥಿಯೇಟರ್‌ನ ಹೊರಗೆ ಕಾಣಿಸಿಕೊಂಡರು.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ!

ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಕಳೆದ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಸಹ ಪ್ರಮುಖ ಭಾಗಗಳಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ಕೊನೆಯದಾಗಿ ನಿರ್ದೇಶಿಸಿದ್ದ ಸಿನಿಮಾ ಏ ದಿಲ್ ಹೈ ಮುಷ್ಕಿಲ್. ಏಳು ವರ್ಷಗಳ ಬ್ರೇಕ್​​ ನಂತರ ನಿರ್ದೇಶನಕ್ಕೆ ಮರಳಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದ್ದಾರೆ. ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಸುಮಾರು 178 ಕೋಟಿ ರೂ.ನ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಐದು ದಿನಗಳಲ್ಲಿ 100 ಕೋಟಿ ಕ್ಲಬ್​ ಸೇರುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​.. ಐದನೇ ದಿನಕ್ಕೆ 100 ಕೋಟಿಯ ಕ್ಲಬ್​​​ ಸೇರಿದ ರಣವೀರ್​ - ಆಲಿಯಾ ಚಿತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.