ETV Bharat / entertainment

'ಅಜ್ಞಾತವಾಸಿ'ಯಾಗಿ ರಂಗಾಯಣ ರಘು; ಏಪ್ರಿಲ್​ 7ಕ್ಕೆ ಟೀಸರ್​ ರಿಲೀಸ್​ - etv bharat kannada

ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಅಜ್ಞಾತವಾಸಿ' ಸಿನಿಮಾದ ಟೀಸರ್​ ಏಪ್ರಿಲ್​ 7ರಂದು ಬಿಡುಗಡೆಯಾಗಲಿದೆ.

ajnathavaasi
ಅಜ್ಞಾತವಾಸಿ
author img

By

Published : Apr 4, 2023, 5:40 PM IST

ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ರಂಗಾಯಣ ರಘು ತಮ್ಮ ಅಭಿನಯದ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇದೀಗ ಅವರೇ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾವೊಂದು ತೆರೆ ಕಾಣಲು ಸಜ್ಜಾಗಿದೆ. ಕೆಲವು ವರ್ಷಗಳಿಂದ ಪೋಷಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ರಘು ಇದೀಗ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.

ಗುಲ್ಟು ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ಧನ ಚಿಕ್ಕಣ್ಣ ಮತ್ತು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕವಲು ದಾರಿ ಚಿತ್ರ ಖ್ಯಾತಿಯ ನಿರ್ದೇಶಕ ಹೇಮಂತ್​ ರಾವ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ 'ಅಜ್ಞಾತವಾಸಿ' ಸಿನಿಮಾಗೆ ರಂಗಾಯಣ ರಘು ಹೀರೋ ಆಗಿದ್ದಾರೆ. ಇದೀಗ ಚಿತ್ರ ತಂಡ 'ಅಜ್ಞಾತವಾಸಿ'ಯ ಕೆಣುಕು ನೋಟ (ಟೀಸರ್) ಬಿಡುಗಡೆಗೆ ದಿನ ಗೊತ್ತು ಮಾಡಿದೆ. ಇದೇ ಏಪ್ರಿಲ್​ 7 ರಂದು ಮತ್ತೊಂದು ಭಿನ್ನ ಅಭಿರುಚಿಯ ಸಿನಿಮಾದ ಟೀಸರ್​ ರಿಲೀಸ್​ ಆಗಲಿದೆ.

ರಘು ಜೊತೆ ಚಿತ್ರದ ಪ್ರಮುಖ ಪಾತ್ರದಲ್ಲಿ ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ ಮತ್ತು ರವಿಶಂಕರ್ ಗೌಡ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು ಅವರು ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಟೀಸರ್ ಬಿಡುಗಡೆಗೆ ಸಿನಿಮಾ ತಂಡ ಸಿದ್ಧವಾಗಿದ್ದು, ತೆರೆ ಮೇಲೆ ಚಿತ್ರ ಶೀಘ್ರದಲ್ಲಿ ಬರಲಿದೆ.

  • Teaser of my next production 'Agnyathavasi' is releasing on 7th April. So proud and excited about this. pic.twitter.com/lABctkBtbX

    — Hemanth M Rao (@hemanthrao11) April 4, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ರೈನ್​ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ

ಈವರೆಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ರಂಗಾಯಣ ರಘು ಅಭಿನಯಿಸಿದ್ದಾರೆ. ದೊಡ್ಡಣ್ಣ, ಸಾಧುಕೋಕಿಲ ಇಂತಹ ಖ್ಯಾತ ಹಾಸ್ಯ ನಟರ ಜೊತೆ ಇವರು ಕೂಡ ಸೇರಿದ್ದಾರೆ. ಇದಲ್ಲದೇ ರಘು ವಿಲನ್​ ಪಾತ್ರಗಳನ್ನು ಕೂಡ ಮಾಡಿದ್ದಾರೆ. ಹೆಚ್ಚಾಗಿ ಹಾಸ್ಯ ಪಾತ್ರ ಮಾಡುವವರು ಖಳನಾಯಕನ ಪಾತ್ರವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ರಂಗಾಯಣ ರಘು ಈ ಮಾತಿಗೆ ತದ್ವಿರುದ್ಧ. ಎಂತಹ ಪಾತ್ರವನ್ನು ಕೊಟ್ಟರೂ ಸಲೀಸಾಗಿ ನಟಿಸಿ ಸುಲಭದಲ್ಲೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ.

ಇದನ್ನೂ ಓದಿ: 'ಏಂಟಮ್ಮಾ' ಹಾಡಿಗೆ ಸಲ್ಮಾನ್​ ಖಾನ್​, ವೆಂಕಟೇಶ್​ ದಗ್ಗುಬಾಟಿ ಜೊತೆ ರಾಮ್​ಚರಣ್​ ಡ್ಯಾನ್ಸ್​

ರಂಗಾಯಣ ರಘು ಅವರು ಮೊದಲಿನಿಂದಲೂ ಹೆಚ್ಚಾಗಿ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ನಾಯಕ ನಟನ ಅಥವಾ ನಾಯಕಿಯ ತಂದೆಯಾಗಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ವಿಭಿನ್ನ ವಿಭಿನ್ನ ಪಾತ್ರಗಳನ್ನು ಹೆಚ್ಚಾಗಿ ಆಯ್ದುಕೊಳ್ಳುವ ಇವರಿಗೆ ನಾಯಕ ನಟನಾಗಿ ಅಭಿನಯಿಸುವ ಅವಕಾಶ ಸಿಕ್ಕಿದೆ. 'ಅಜ್ಞಾತವಾಸಿ' ಇಡೀ ಕಥೆ ಇವರ ಸುತ್ತಲೇ ಸುತ್ತುತ್ತದೆ. ಪ್ರಮುಖ ಪಾತ್ರದಲ್ಲಿ ಇವರೇ ಮಿಂಚಲಿದ್ದಾರೆ. ಈಗಾಗಲೇ ಇವರ ನಟನೆಗೆ ಮನಸೋತಿರುವ ಪ್ರೇಕ್ಷಕರು 'ಅಜ್ಞಾತವಾಸಿ' ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ತಂದೆ ಶಾರುಖ್​ ಖಾನ್​ ಡ್ಯಾನ್ಸ್​ ನೋಡಿ ಖುಷಿ ಪಟ್ಟ ಆರ್ಯನ್​ ಖಾನ್​; ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.