ETV Bharat / entertainment

ವ್ಯಾಲಂಟೈನ್​ ದಿನ ದೆಹಲಿಯಿಂದಲೇ ತನ್ನಿಬ್ಬರು ಪ್ರೀತಿಪಾತ್ರಿಗೆ ಶುಭ ಕೋರಿದ ರಣಬೀರ್​; ಯಾರವರು?

ಮದುವೆಯಾದ ಬಳಿಕ ಮೊದಲ ಪ್ರೇಮಿಗಳ ದಿನವನ್ನು ದೂರವಾಗಿ ಆಚರಿಸಿರುವ ರಣಬೀರ್​ ನೀಡಿದ ಸಂದೇಶ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

author img

By

Published : Feb 15, 2023, 4:13 PM IST

ವ್ಯಾಲಂಟೈನ್​ ದಿನ ದೆಹಲಿಯಿಂದಲೇ ತನ್ನಿಬ್ಬರು ಪ್ರೀತಿಪಾತ್ರಿಗೆ ಶುಭ ಕೋರಿದ ರಣಬೀರ್​; ಯಾರವರು?
Ranbir wished his two lovers from Delhi on Valentine's Day

ಹೈದರಾಬಾದ್​: ಪ್ರೇಮಿಗಳ ದಿನ ಮುಗಿದರೂ ಅದರ ಅಮಲು ಮಾತ್ರ ಇನ್ನು ಕಡಿಮೆಯಾಗಿಲ್ಲ. ಈಗಾಗಲೇ ಬಾಲಿವುಡ್​ನ ಅನೇಕ ಜೋಡಿಗಳು ಈ ದಿನವನ್ನು ಒಟ್ಟಿಗೆ ಸಂಭ್ರಮಿಸಿದ್ದು, ಈ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ನಡುವೆ ಪ್ರೇಮಿಗಳಿಗೆ ಪ್ರತಿನಿತ್ಯವೂ ವ್ಯಾಲಂಟೈನ್​ ಡೇ ಎಂಬ ಮಾತಿನಂತೆ ರಣಬೀರ್​ ಕಪೂರ್​ ತಮ್ಮ ಜೀವನ ಭಾಗವಾಗಿರುವ ಇಬ್ಬರು ಹುಡುಗಿಯರಿಗೆ ಪ್ರೀತಿಯ ಶುಭಾಶಯ ಕೋರಿದ್ದಾರೆ.

ಬಾಲಿವುಡ್​ನ ಪ್ರಣಯ ಪಕ್ಷಿಗಳಾಗಿದ್ದ ಈ ಜೋಡಿ ಕಳೆದ ವರ್ಷ ಸಪ್ತಪದಿ ತುಳಿದಿದ್ದರು. ಮದುವೆಯಾದ ಬಳಿಕ ರಣಬೀರ್​ ಮತ್ತು ಆಲಿಯಾಗೆ ಇದು ಮೊದಲ ಪ್ರೇಮಿಗಳ ದಿನ. ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಿಸಬೇಕಾಗಿದ್ದ ಈ ಜೋಡಿ ಈ ಬಾರಿ ದೂರ ಇದ್ದವು. ಇದಕ್ಕೆ ಕಾರಣ ರಣಬೀರ್​ ಬ್ಯುಸಿ ಶೆಡ್ಯೂಲ್​.

ದೆಹಲಿಯಲ್ಲಿ ಬ್ಯುಸಿಯಾದ ರಣಬೀರ್​: ಸದ್ಯ ಮಗಳು ರಾಹಾ ಲಾಲನೆ ಪಾಲನೆಯಲ್ಲಿ ಆಲಿಯಾ ಬ್ಯುಸಿಯಾಗಿದ್ದರೆ, ಇತ್ತ, ರಣಬೀರ್​ ಕಪೂರ್ ತಮ್ಮ ಮುಂದಿನ ಚಿತ್ರ ತೂ ಜೂಟಿ ಮೇ ಮಕ್ಕರ್​ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಚಿತ್ರದ ಪ್ರಮೋಷನ್​ಗೆ ಪ್ರೇಮಿಗಳ ದಿನದಂದು ದೆಹಲಿಗೆ ಕೂಡ ಆಗಮಿಸಿದ್ದರು. ದೂರ ಇದ್ದರೂ ಪ್ರೇಮಿಗಳ ದಿನದಂದು ಹೆಂಡತಿ ಆಲಿಯಾ ಮತ್ತು ಮುದ್ದು ಮಗಳು ರಾಹಾಳ ನೆನಪಿನಲ್ಲೇ ಇದ್ದ ರಣಬೀರ್​ ರಾಷ್ಟ್ರ ರಾಜಧಾನಿಯಿಂದಲೇ ಪ್ರೀತಿ ತುಂಬಿದ ಸಂದೇಶವನ್ನು ಕಳುಹಿಸಿದ್ದಾರೆ.

ದೆಹಲಿಯ ಗಲ್ಗೊಟಿಸ್​ ಯುನಿವರ್ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣಬೀರ್, ಮನರಂಜನೆ ನೀಡುವ ಮೂಲಕ​ ನೆರೆದಿದ್ದ ಅಭಿಮಾನಿಗಳ ಮನ ಗೆದ್ದರು. ಈ ವೇಳೆ ಅಭಿಮಾನಿಗಳಿಗಾಗಿ ಡ್ಯಾನ್ಸ್​ ಸ್ಟೆಪ್​ ಹಾಕಿದ ರಣಬೀರ್​ ಇದೇ ವೇಳೆ ತಮ್ಮ ಬ್ರಹ್ಮಾಸ್ತ್ರ ಚಿತ್ರದ ಕೆಸರಿಯಾ ಹಾಡನ್ನು ಹಾಡಿ ಮೋಡಿ ಮಾಡಿದರು.

ಇಬ್ಬರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ: ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭ ಕೋರಿದ ರಣಬೀರ್​ ದೆಹಲಿಯಿಂದಲೇ ಪ್ರೀತಿಯ ಮಡದಿ ಆಲಿಯಾ ಮತ್ತು ಮುದ್ದು ಮಗಳು ರಾಹಾಗೆ ಸಂದೇಶವನ್ನು ನೀಡಿದರು. ಈ ವೇಳೆ, ಮಾತನಾಡಿದ ರಣಬೀರ್​ ನಾನು ಎರಡು ಪ್ರೀತಿಗೆ ಶುಭಾಶಯ ಕೋರಬೇಕು ಎಂದಿದ್ದೇನೆ ಎಂದು ರಣಬೀರ್​ ಹೇಳುತ್ತಿದ್ದಂತೆ ನೆರೆದವರಿಂದ ಉದ್ಘಾರ ವ್ಯಕ್ತವಾಯಿತು. ಮಾತು ಮುಂದುವರೆಸಿದ ರಣಬೀರ್​ ಆಲಿಯಾ ಮತ್ತು ರಾಹಾ ಹ್ಯಾಪಿ ವ್ಯಾಲಂಟೈನ್​ ಡೇ ಎಂದರು. ಜೊತೆಗೆ ನಾನು ನನ್ನಿಬ್ಬರು ಹುಡುಗಿರಯರನ್ನು ತುಂಬಾ ಪ್ರೀತಿಸುತ್ತೇನೆ. ಪ್ರೀತಿಯ ಹಬ್ಬದ ಈ ದಿನ ನನ್ನ ಪ್ರೀತಿಪಾತ್ರರಿಂದ ದೂರ ಇದ್ದು, ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದರು.

ರಣಬೀರ್​ ತೂ ಜೂಟಿ ಮೇ ಮಕ್ಕರ್​ ಚಿತ್ರದಲ್ಲಿ ಕ್ಲಿನ್​ ಶೇವ್​ನೊಂದಿಗೆ ಚಾಕೋಲೆಟ್​ ಬಾಯ್​ನಲ್ಲಿ ಕಂಡು ಬಂದಿದ್ದರೆ, ಪ್ರಮೋಷನ್​ ವೇಳೆ ನಟ ರಣಬೀರ್​ ಗಡ್ಡದಲ್ಲಿ ಕಂಡರು. ತನ್ನ ಮುಂದಿನ ಚಿತ್ರವಾದ ಅನಿಮಲ್​ಗಾಗಿ ಅವರು ಗಡ್ಡ ಬಿಟ್ಟಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಇನ್ನು ತೂ ಜೂಟಿ ಮೇ ಮಕ್ಕರ್​ ಚಿತ್ರ ಇದೇ ಮಾರ್ಚ್​ 8 ರಂದು ಚಿತ್ರ ಮಂದಿರದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.

ಇದನ್ನೂ ಓದಿ: 'ವ್ಯಾಲೆಂಟೈನ್ಸ್ ಡೇ ದಿನ ಮದುವೆ ಪೂರ್ವ ಚಿತ್ರಗಳನ್ನು ಹಂಚಿಕೊಂಡ ಸಿದ್ಧಾರ್ಥ್,ಕಿಯಾರಾ ಅಡ್ವಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.