ETV Bharat / entertainment

ರಣ್​​ಬೀರ್​ ಕಪೂರ್​​ ಬರ್ತ್​​ಡೇ: 'ಅನಿಮಲ್​' ಟೀಸರ್​ ರಿಲೀಸ್ - ​ ರಶ್ಮಿಕಾ ಮಂದಣ್ಣ

Animal Teaser: ರಣ್​​ಬೀರ್​ ಕಪೂರ್​​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್​' ಟೀಸರ್​ ಅನಾವರಣಗೊಂಡಿದೆ.

Animal teaser
ಅನಿಮಲ್ ಟೀಸರ್​ ರಿಲೀಸ್
author img

By ETV Bharat Karnataka Team

Published : Sep 28, 2023, 1:46 PM IST

ಬಾಲಿವುಡ್​ ನಟ ರಣ್​ಬೀರ್​ ಕಪೂರ್​​ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಹುಬೇಡಿಕೆ ನಟನಿಗೆ ಆಪ್ತರು, ಕುಟುಂಬಸ್ಥರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಅನಿಮಲ್​'. ಚಿತ್ರತಂಡ ಟೀಸರ್​ ಗಿಫ್ಟ್​​ ಕೊಟ್ಟಿದ್ದು, ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಅನಿಮಲ್ ಟೀಸರ್​ ರಿಲೀಸ್: ಬರ್ತ್​​ಡೇ ಬಾಯ್ ರಣ್​​ಬೀರ್ ಕಪೂರ್ ಹಾಗೂ ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಟೀಸರ್​ ಸೇರಿದಂತೆ ಚಿತ್ರದ ಅಪ್​ಡೇಟ್ಸ್​ಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಫೈನಲಿ, ನಟನ ಜನ್ಮದಿನ ಹಿನ್ನೆಲೆ ಚಿತ್ರತಂಡ ಇಂದು ಟೀಸರ್​ ಅನಾವರಣಗೊಳಿಸಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಮೋಸ್ಟ್ ಎಕ್ಸ್​​ಪೆಕ್ಟೆಡ್​​ ಮೂವಿ ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತ್ರಿಪ್ತಿ ಡಿಮ್ರಿ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

  • " class="align-text-top noRightClick twitterSection" data="">

2 ನಿಮಿಷ ಮತ್ತು 26 ಸೆಕೆಂಡುಗಳ ಅನಿಮಲ್​​ ಟೀಸರ್ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಇದೊಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋದು ಪಕ್ಕಾ ಆಗಿದೆ. ರಣ್​​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಮಾತುಕತೆಯೊಂದಿಗೆ ಟೀಸರ್ ಆರಂಭಗೊಳ್ಳುತ್ತದೆ. ನಂತರ ಉಳಿದ ಪಾತ್ರವರ್ಗ ಎಂಟ್ರಿ ಆಗುತ್ತವೆ. ಕೊನೆಯಲ್ಲಿ ನಟ ಬಾಬಿ ಡಿಯೋಲ್ ಹಿಂದೆಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ದರ್ಶನ ಕೊಡಲಿದ್ದಾರೆ. ಮೊದಲು ಲವರ್​ ಬಾಯ್​ನಂತೆ ಕಾಣಿಸಿಕೊಳ್ಳುವ ರಣ್​​ಬೀರ್​ ಕಪೂರ್​ ಅವರು ರಗಡ್​ ಪರ್ಸನಾಲಿಟಿ ಆಗಿ ಬದಲಾಗೋದನ್ನು ಟೀಸರ್​ನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಬಾನದಾರಿಯಲಿ ಬಿಡುಗಡೆ... ಗೋಲ್ಡನ್ ಸ್ಟಾರ್ ಗಣೇಶ್​ ಸಿನಿಮಾ ಮೆಚ್ಚಿದ ಸ್ಯಾಂಡಲ್​​ವುಡ್ ಸ್ಟಾರ್ಸ್

ಈ ಹಿಂದೆ ಆಗಸ್ಟ್ 11 ರಂದು ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸಿನಿಮಾದ ಕೆಲಸಗಳು ಬಾಕಿ ಇವೆ ಎಂದು ಹೇಳಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಬಿಡುಗಡೆ ತಡವಾಗುತ್ತಿರುವುದನ್ನು ಚಿತ್ರತಂಡ ಸಮರ್ಥಿಸಿಕೊಂಡಿತ್ತಾದರೂ, ಆಗಸ್ಟ್​ನಲ್ಲಿ ಬಿಡುಗಡೆ ಆದ ಬಹುನಿರೀಕ್ಷಿತ ಚಿತ್ರಗಳಾದ ಓಎಂಜಿ 2, ಗದರ್​ 2ನ ಬಾಕ್ಸ್ ಆಫೀಸ್ ಫೈಟ್​ ತಪ್ಪಿಸಿಕೊಳ್ಳಲು ಅನಿಮಲ್​ ರಿಲೀಸ್​ ಡೇಟ್ ಪೋಸ್ಟ್ ಪೋನ್​ ಆಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾನದಾರಿಯಲಿ ಸ್ಪೆಷಲ್​ ಸ್ಕ್ರೀನಿಂಗ್... ಸಿನಿಮಾ ವೀಕ್ಷಿಸಿದ ಸ್ಟಾರ್ಸ್ Photos

ಡಿಸೆಂಬರ್ 1ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಅನಿಮಲ್​ ತೆರೆಗಪ್ಪಳಿಸಲಿದೆ. ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾದಲ್ಲಿ ಒಟ್ಟು ಏಳು ಹಾಡುಗಳಿವೆ. ಸಿನಿಮಾ ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಚಿತ್ರದೊಂದಿಗೆ ಪೈಪೋಟಿ ನಡೆಸಲಿದೆ. ವಿಕ್ಕಿ ನಟನೆಯ ಸಿನಿಮಾ ಕೂಡ ಡಿ. 1ಕ್ಕೆ ಬಿಡುಗಡೆಯಾಗಲು ನಿರ್ಧಾರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.