ETV Bharat / entertainment

ಕೂಡಿಬಂದ ಕಂಕಣ ಭಾಗ್ಯ ; ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದ ರಣಬೀರ್ ಕಪೂರ್ - ಆಲಿಯಾ ಭಟ್ - ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ

ವರದಿಗಳ ಪ್ರಕಾರ ಬೆಸ್ಟ್​ ಆ್ಯಂಡ್​ ಕ್ಯೂಟ್​ ಕಪಲ್​ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹವು ಮುಂಬೈನಲ್ಲಿರುವ ಚೆಂಬೂರಿನ ಕಪೂರ್ ಕುಟುಂಬದ ಪೂರ್ವಜರ ಮನೆಯಾದ ಆರ್‌ಕೆಹೌಸ್‌ನಲ್ಲಿ ನಡೆಯಲಿದೆಯಂತೆ. ರಿಷಿ ಕಪೂರ್ ಮತ್ತು ನೀತು ಕಪೂರ್ ಸಹ ಇಲ್ಲಿಯೇ ಮದುವೆಯಾಗಿದ್ದರು. ಪೋಷಕರ ಇಷ್ಟದಂತೆ ಆರ್‌ಕೆ ಹೌಸ್‌ನಲ್ಲಿಯೇ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ..

Ranbir Kapoor and Alia Bhatt to tie knot on April 15
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್
author img

By

Published : Apr 8, 2022, 8:20 AM IST

ಹೈದರಾಬಾದ್ : ಬೆಸ್ಟ್​ ಆ್ಯಂಡ್​ ಕ್ಯೂಟ್​ ಕಪಲ್​ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಯಾವಾಗಾ ಮದುವೆಯಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದಂತಾಗಿದೆ. ಬಾಲಿವುಡ್​ ಅಂಗಳದಲ್ಲಿ ಇವರಿಬ್ಬರ ಮದುವೆ ಸುದ್ದಿ ಜೋರಾಗಿದ್ದು, ಶೀಘ್ರದಲ್ಲೇ ಕಪೂರ್ ಮತ್ತು ಭಟ್ ಕುಟುಂಬದ ಕುಡಿಗಳು ಒಂದಾಗಲಿದ್ದಾರೆ. ಹಾಗಾಗಿ, ಎರಡೂ ಕುಟುಂಬದವರ ಮನೆಯಲ್ಲಿ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ.

Ranbir Kapoor and Alia Bhatt to tie knot on April 15
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್

ಇವರಿಬ್ಬರ ಮದುವೆ ಯಾವಾಗ? ಕಾರಣಾಂತರಗಳಿಂದ ಇಬ್ಬರ ಮದುವೆ ಹಲವು ಬಾರಿ ಮುಂದೂಡಲ್ಪಟ್ಟಿದ್ದರಿಂದ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟತೊಡಗಿದ್ದವು. ಅಭಿಮಾನಿಗಳ ಮನದಲ್ಲಿಯೂ ತವಕ ತಂದಿಟ್ಟಿತ್ತು. ಆದರೆ, ಇದೇ ತಿಂಗಳ ಏಪ್ರಿಲ್ 15ರಂದು (ಸದ್ಯದ ವರದಿಗಳ ಪ್ರಕಾರ) ಈ ತಾರಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಆಲಿಯಾ ಭಟ್

ತರಾತುರಿಗೆ ಕಾರಣ? ಈ ತಾರಾತುರಿಗೆ ಮಗದೊಂದು ಕಾರಣವೂ ಇದೆಯಂತೆ. ಮಾಹಿತಿ ಪ್ರಕಾರ ಈ ತಾರಾ ಜೋಡಿ ಏ.17ರಂದು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಈ ಜೋಡಿ ಮದುವೆಯಾಗಲಿದೆ. ಆಲಿಯಾ ಅವರ ತಾತ (ತಾಯಿಯ ತಂದೆ) ರಝ್‌ದಾನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಈ ತರಾತುರಿ ಮದುವೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೊಮ್ಮಗಳ ಮದುವೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದರಿಂದ ಈ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಎರಡು ದಿನ ಮುಂಚಿತಾಗಿಯೇ ಇವರು ಹಸೆಮನೆ ಏರಲಿದ್ದಾರಂತೆ.

ಎಲ್ಲಿ ನಡೆಯಲಿದೆ? ವರದಿಗಳ ಪ್ರಕಾರ ಈ ವಿವಾಹವು ಮುಂಬೈನಲ್ಲಿರುವ ಚೆಂಬೂರಿನ ಕಪೂರ್ ಕುಟುಂಬದ ಪೂರ್ವಜರ ಮನೆಯಾದ ಆರ್.ಕೆ ಹೌಸ್‌ನಲ್ಲಿ ನಡೆಯಲಿದೆಯಂತೆ. ರಿಷಿ ಕಪೂರ್ ಮತ್ತು ನೀತು ಕಪೂರ್ ಸಹ ಇಲ್ಲಿಯೇ ಮದುವೆಯಾಗಿದ್ದರು. ಪೋಷಕರ ಇಷ್ಟದಂತೆ ಆರ್.ಕೆ ಹೌಸ್‌ನಲ್ಲಿಯೇ ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ.

ಮೆಹಂದಿ ಸಮಾರಂಭ : ಏ.13ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಏ.14ರಂದು ಹಳದಿ ಸಮಾರಂಭ ಆಯೋಜಿಸಲಾಗಿದೆ. ಪಂಜಾಬಿ ಪದ್ಧತಿಯಂತೆ ಏ. 15ರ ರಾತ್ರಿ (ಏ.16ರ ಮುಂಜಾನೆ) 2 ರಿಂದ 4 ಗಂಟೆಯ ನಡುವೆ 7 ಫೆರಾಗಳನ್ನು (ಪವಿತ್ರ ಸುತ್ತುಗಳು) ತೆಗೆದುಕೊಳ್ಳುವ ಮೂಲ ಇವರು ಹಸೆಮಣೆ ಏರಲಿದ್ದಾರೆ. ಮದುವೆಯಾದ ಬಳಿಕವೇ ಇವರು ಮಾಧ್ಯಮದ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಏಪ್ರಿಲ್ 16 ಯಾಕೆ?: ರಿಷಿ ಕಪೂರ್, ನೀತು ಕಪೂರ್ ಮತ್ತು ರಣಬೀರ್ ಕಪೂರ್ ಅವರಿಗೆ 8 ಅದೃಷ್ಟದ ಸಂಖ್ಯೆಯಾಗಿದೆ. ಈ ಹಿನ್ನೆಲೆ ಏ.16 ಅನ್ನು ಮದುವೆಗೆ ಆಯ್ಕೆ ಮಾಡಲಾಗಿದೆಯಂತೆ. ಏ. 16, 2022 ರಂದು ಈ ಜೋಡಿ ಫೆರಾಗಳನ್ನು ತೆಗೆದುಕೊಳ್ಳಲಿದ್ದಾರೆ. ವಿಸ್ತೃತವಾಗಿ ಹೇಳಬೇಕೆಂದರೆ 16 (ದಿನಾಂಕ) + 4 (ತಿಂಗಳು) + 2022 (ವರ್ಷ) ಎಲ್ಲವನ್ನು ಸೇರಿದಾಗ 2042 ಆಗುತ್ತದೆ. 2042 ಅನ್ನು ಸೇರಿಸಿದಾಗ ಒಟ್ಟು ಸಂಖ್ಯೆ 2+0+4 +2=8 ಆಗುತ್ತದೆ. 8 ಅನ್ನೋದು ಅದೃಷ್ಟ ಸಂಖ್ಯೆಯಾಗಿದ್ದರಿಂದ ಅಂದೇ ಫೆರಾಗಳನ್ನು ತೆಗೆದುಕೊಳ್ಳಲಿದ್ದಾರೆ.

ಮದುವೆಗೆ ಯಾರೆಲ್ಲ ಬರಲಿದ್ದಾರೆ?: ಬಾಲಿವುಡ್‌ನ ಬಿಗ್ ವೆಡ್ಡಿಂಗ್ ಇದಾಗಿದ್ದರಿಂದ ತಾರಾ ಬಳಗವೇ ಈ ಮದುವೆಯಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಸಂಬಂಧಿಕರಾದ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್ ಸೇರಿದಂತೆ ಇಡೀ ಕಪೂರ್ ಕುಟುಂಬವು ಆಗಮಿಸಲಿದೆ. ನಿಕಟ ಸ್ನೇಹಿತರಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ, ಕರಣ್ ಜೋಹರ್, ಆಕಾಂಕ್ಷಾ ರಂಜನ್ ಮತ್ತು ಇನ್ನೂ ಅನೇಕರು ಬರಲಿದ್ದಾರೆ. ಇವರಲ್ಲದೇ ಬಾಲಿವುಡ್ ಟಾಪ್​ ಸೆಲೆಬ್ರಿಟಿಗಳಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಇನ್ನೂ ದೃಢಪಟ್ಟಿಲ್ಲ.

ಇದನ್ನೂ ಓದಿ: ಚಿತ್ರೀಕರಣಕ್ಕೂ‌ ಮುನ್ನವೇ ದುನಿಯಾ ವಿಜಯ್ 'ಭೀಮ'ನ ಭರ್ಜರಿ ಬ್ಯುಸಿನೆಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.