ETV Bharat / entertainment

ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ.. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಬಿಗ್ ರಿಲೀಫ್ - Ramya case

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ವಿರುದ್ಧ ಸಲ್ಲಿಸಿದ್ದ ನಟಿ ರಮ್ಯಾ ಅವರ ಅರ್ಜಿ ವಜಾ ಆಗಿದೆ.

Ramya case against Hostel hudugaru bekagiddare movie team dismissed
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಬಿಗ್ ರಿಲೀಫ್
author img

By

Published : Jul 20, 2023, 5:44 PM IST

Updated : Jul 20, 2023, 7:02 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಚಾರ, ಸ್ಟಾರ್ ಕಾಸ್ಟ್, ಸಾಂಗ್, ಪೋಸ್ಟರ್, ಟ್ರೇಲರ್​ ಸೇರಿದಂತೆ ಯೂನಿಕ್ ಕಾನ್ಸೆಪ್ಟ್​​ ಮೂಲಕ ಟಾಕ್ ಆಗುತ್ತಿದ್ದ ಸಿನಿಮಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಆದ್ರೆ ಸಿನಿಮಾ ಬಿಡುಗಡೆ ಮಾಡದಂತೆ ಮೋಹಕ ತಾರೆ ರಮ್ಯಾ ಕಮರ್ಷಿಯಲ್ ಕೋರ್ಟ್ ಮೂಲಕ ನೋಟಿಸ್ ನೀಡಿದ್ದರು. ಇದೀಗ ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಅವರು ಕಮ್‌ ಬ್ಯಾಕ್ ಮಾಡುವ ಆಲೋಚನೆಯಲ್ಲಿ, ಈ ಸಿನಿಮಾಗೆ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿರುವ ನಟಿ ರಮ್ಯಾ, ಏಕಾಏಕಿ ನಾನು ನಟಿಸಿರುವ ದೃಶ್ಯಗಳನ್ನು ನನ್ನ ಅನುಮತಿ ಇಲ್ಲದೇ ಸಿನಿಮಾ ಪ್ರಚಾರಕ್ಕೆ ಬಳಸಬಾರದು, ನೀವು ಆ ದೃಶ್ಯಗಳನ್ನು ಬಳಸಿದರೆ ಒಂದು ಕೋಟಿ ರೂ. ಪರಿಹಾರ ಕೋಡಬೇಕಾಗುತ್ತದೆ ಅಂತಾ ನ್ಯಾಯಾಲಯದ ಮೂಲಕ ಚಿತ್ರತಂಡಕ್ಕೆ ನೋಟಿಸ್ ಕೊಟ್ಟಿದ್ದರು.

ಇದೀಗ ಕಮರ್ಷಿಯಲ್ ಕೋರ್ಟ್​ನಲ್ಲಿ ನಟಿ ರಮ್ಯಾ ಅವರಿಗೆ ಹಿನ್ನೆಡೆ ಆಗಿದೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಪರವಾಗಿ ಆದೇಶ ಬಂದಿದೆ. ರಮ್ಯಾ ಹಾಕಿದ್ದ ಕೇಸ್​ ಅನ್ನು ನ್ಯಾಯಾಲಯ ತೆರವುಗೊಳಿಸಿ, ನಾಳೆ ಸಿನಿಮಾ‌ ಬಿಡುಗಡೆ ಮಾಡಲು ಆದೇಶ ಹೊರಡಿಸಿದೆ‌. ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಚಿತ್ರ ಇದಾಗಿದ್ದು ನಾಳೆ ಬಿಡುಗಡೆಗೆ ರೆಡಿಯಾಗಿದೆ.

ಈ ಸಿನಿಮಾದ ಪ್ರಮುಖ ಸನ್ನಿವೇಶವೊಂದರಲ್ಲಿ ರಮ್ಯಾ ಅಭಿನಯಿಸಿದ್ದಾರೆ. ಪ್ರೋಮೋ ಹಾಗೂ ಸಿನಿಮಾದಲ್ಲಿ ಎರಡು ನಿಮಿಷದ ದೃಶ್ಯಕ್ಕೆಂದು ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು ಎಂದು ಚಿತ್ರತಂಡ ಹೇಳಿಕೊಂಡಿದೆ.

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಅವರೇ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿರುವ ಸಿನಿಮಾ ಇದೇ 21ಕ್ಕೆ ಅಂದರೆ ನಾಳೆ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಿಡುಗಡೆ ಆಗಬಾರದೆಂದು ನ್ಯಾಯಾಲಯದ ಮೆಟ್ಟಿಲೇರಿದ ನಟಿ ರಮ್ಯಾ!

ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ 'ಆ್ಯಪಲ್ ಬಾಕ್ಸ್ ಸ್ಟುಡಿಯೋಸ್' ಮೂಲಕ ಕಮ್​ ಬ್ಯಾಕ್​ ಮಾಡಿದ್ದಾರೆ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರೆ. ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಮೂಲಕ ನಿರ್ಮಾಣಗೊಳ್ಳುತ್ತಿರುವ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ಈ ಚಿತ್ರದಲ್ಲಿ ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶ ಮಾಡಿದ್ದಾರೆ. ಇನ್ನೂ ನಾಳೆ ತೆರೆಕಾಣಲಿರುವ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕೂಡ ಸ್ಪೆಷಲ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.

Last Updated : Jul 20, 2023, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.