ಮಧುರೈ (ತಮಿಳುನಾಡು): ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಚಿತ್ರ 'ಜೈಲರ್' ಇನ್ನೇನು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಕಾತರರಾಗಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನ ಅವರ ಅಭಿಮಾನಿಗಳು ಇತ್ತೀಚೆಗೆ ತಿರುಪರಂಕುಂದ್ರಂ ಅಮ್ಮನ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಸೂಪರ್‌ಸ್ಟಾರ್ ಅವರ ಮುಂಬರುವ ಚಿತ್ರ 'ಜೈಲರ್' ಆಗಸ್ಟ್ 10 ರಂದು ಥಿಯೇಟರ್‌ಗಳಿಗೆ ಬರಲಿದೆ ಎಂದು ಅವರ ಅಭಿಮಾನಿಗಳು ಮಂಗಳವಾರ ಮಧುರೈನ ಅಮ್ಮನ್ ದೇವಸ್ಥಾನದಲ್ಲಿ ಚಿತ್ರದ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚಿತ್ರದ ಅದ್ಧೂರಿ ಯಶಸ್ಸಿಗಾಗಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಿನಿಮಾದ ಅದ್ಧೂರಿ ಯಶಸ್ಸಿಗಾಗಿ ‘ಮನ್ ಸೋರು’ ಎಂಬ ವಿಶಿಷ್ಟ ತಪಸ್ಸು ಮಾಡಿ, ಒಳ್ಳೆ ಸಕ್ಸಸ್ ಕಾಣಲಿ ಎಂದು ಅಮ್ಮನ್ಗೆ ಬೇಡಿಕೊಂಡರು.

ರಜಿನಿಕಾಂತ್ ಅವರ ಅಭಿಮಾನಿಯೊಬ್ಬರು ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿ ಹರ್ಷ ವ್ಯಕ್ತಪಡಿಸಿದರು. "ನಾನು 40 ವರ್ಷಗಳಿಂದ ರಜಿನಿ ಅಭಿಮಾನಿಯಾಗಿದ್ದೇನೆ. ರಜಿನಿಕಾಂತ್ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ. ಅವರ ಪಡೆಯಪ್ಪ ಚಿತ್ರದಿಂದ ಇಂದಿನವರೆಗೆ ನಾನು ರಜಿನಿಕಾಂತ್ ಅವರ ಚಿತ್ರದ ಯಶಸ್ಸಿಗಾಗಿ ವಿವಿಧ ಪ್ರಾರ್ಥನೆಗಳನ್ನು ಮಾಡುತ್ತಾ ಬಂದಿದ್ದೇನೆ. ಇಂದು ನಾನು ರಜಿನಿಕಾಂತ್ ಅವರ 169 ನೇ ಚಿತ್ರ ಜೈಲರ್ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ." ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

"ಮದುರೈ ಜನತೆ, ಅಭಿಮಾನಿಗಳ ಪರವಾಗಿ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಚಿತ್ರದ ಪರವಾಗಿ ನಾವು ವಿಶೇಷ ಪ್ರಾರ್ಥನೆ ಸಲ್ಲಿಸಿ ಯಶಸ್ವಿಯಾಗಲಿ ಎಂದು ಆ ಭಗವಂತನಲ್ಲಿ ಬೇಡಿಕೊಂಡಿದ್ದೇವೆ. ರಜಿನಿ ಅವರ ಅಭಿಮಾನಿಗಳು ಇನ್ನಷ್ಟು ಹೆಚ್ಚಲಿ, ಅವರೆಲ್ಲ ಉತ್ತಮ ಮಾರ್ಗದಲ್ಲಿ ಸಿನಿಮಾಗಳನ್ನು ನೋಡಿ ಆನಂದಿಸಲಿ, ಯಾವುದೇ ಕೆಟ್ಟದ್ದಕ್ಕೆ ಅವಕಾಶ ನೀಡದಂತೆ ಸಾಂಗವಾಗಿ ಚಿತ್ರ ಪ್ರದರ್ಶನ ಆಗಲಿ ಎಂದರು. ಚಿತ್ರದ ಆಡಿಯೋ ಬಿಡುಗಡೆ ವೇಳೆ ರಜಿನಿಕಾಂತ್ ತಮ್ಮ ಅಭಿಮಾನಿಗಳಿಗೆ ಕುಡಿಯಬೇಡಿ ಎಂದು ಮನವಿ ಮಾಡಿದ್ದರು. ಅವರು ಕರೆಕೊಟ್ಟಿರುವಂತೆ ನಾವು ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇವೆ” ಎಂದು ಮತ್ತೊಬ್ಬ ರಜಿನಿ ಅಭಿಮಾನಿ ವಿಶೇಷ ಪೂಜೆ ಸಲ್ಲಿಕೆ ಬಳಿಕ ಹೇಳಿದ್ದಾರೆ

'ಜೈಲರ್' ಒಂದು ಆಕ್ಷನ್ - ಪ್ಯಾಕ್ಡ್ ಎಂಟರ್‌ಟೈನರ್ ಚಿತ್ರ ಆಗರಲಿದೆ ಎಂದು ಹೇಳಲಾಗಿದೆ. ಪ್ರಿಯಾಂಕಾ ಮೋಹನ್, ಶಿವ ರಾಜ್‌ಕುಮಾರ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ, ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಚಿತ್ರ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ರಜಿನಿ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಲಯಾಳಂ ನಟ ಮೋಹನ್‌ಲಾಲ್ ಸಹ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ: Film Director Siddique: ಮಲಯಾಳಂ ಸಿನಿಮಾ ನಿರ್ದೇಶಕ ಸಿದ್ದಿಕ್ ಹೃದಯಾಘಾತದಿಂದ ನಿಧನ