ETV Bharat / entertainment

Jailer: ಜೈಲರ್​ ವೀಕ್ಷಿಸಿಲ್ವಾ? ನೋಡಿಲ್ಲವಾದ್ರೆ ಒಟಿಟಿಯಲ್ಲಿ ಲಭ್ಯ! - ನೆಲ್ಸನ್​ ದಿಲೀಪ್​ ಕುಮಾರ್

Rajinikanth Jailer on OTT: ಬ್ಲಾಕ್​ಬಸ್ಟರ್ ಜೈಲರ್​​ ಸಿನಿಮಾ ಒಟಿಟಿ ವೇದಿಕೆಗೆ ಎಂಟ್ರಿ ಕೊಡಲು ಸಜ್ಜಾಗಿದೆ.

Rajinikanth Jailer OTT release date
ಜೈಲರ್​ ಒಟಿಟಿ ರಿಲೀಸ್​ ಡೇಟ್
author img

By ETV Bharat Karnataka Team

Published : Sep 2, 2023, 3:16 PM IST

ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕಾಲಿವುಡ್​ ಹಿರಿಯ ನಟ ರಜನಿಕಾಂತ್​ ಮುಖ್ಯಭೂಮಿಕೆಯ ಜೈಲರ್​ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿರುವ ಈ ಸಿನಿಮಾ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆಗಸ್ಟ್ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಜೈಲರ್​ ಸಿನಿಮಾ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡುವಲ್ಲಿ ಯಶಸ್ಸು ಕಂಡಿದೆ. ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ, ಸನ್​ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ ತೆರೆಕಂಡು ಒಂದು ತಿಂಗಳು ಪೂರ್ಣಗೊಳಿಸುವ ವೇಳೆ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಜೈಲರ್​ ಸಿನಿಮಾ ಒಟಿಟಿ ಪ್ಲಾಟ್​ಫಾರ್ಮ್ ಪ್ರೈಮ್​ ವಿಡಿಯೋದಲ್ಲಿ ಪ್ರಸಾರ ಆಗಲಿದೆ. ಸೆಪ್ಟೆಂಬರ್​ 7 ರಿಂದ ನೀವಿದ್ದಲ್ಲೇ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ. ಕುತೂಹಲಕಾರಿ ಅಂಶವೆಂದರೆ, ಬಿಡುಗಡೆಗೂ ಮುನ್ನ ಸಾಕಷ್ಟು ಕ್ರೇಜ್​ ಕ್ರಿಯೇಟ್​ ಮಾಡಿರುವ ಜವಾನ್ ಕೂಡ ಸೆಪ್ಟೆಂಬರ್​ 7 ರಿಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಅಭಿಮಾನಿಗಳು ಯಾವ ಸಿನಿಮಾಗೆ ಮಣೆ ಹಾಕುತ್ತಾರೆಂಬುದನ್ನು ಕಾದು ನೋಡಬೇಕಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಆನಂದಿಸಿದಂತೆ ಒಟಿಟಿಯಲ್ಲಿ ಕೂಡ ಸಿನಿಮಾವನ್ನು ವೀಕ್ಷಿಸಿ ಆನಂದಿಸಲಿದ್ದಾರೆ ಎಂದು ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಕ್ರೈಮ್​ ಡ್ರಾಮಾ ಕುರಿತು ಇತ್ತೀಚೆಗೆ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್ ಸಂದರ್ಶನವೊಂದರಲ್ಲಿ​ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸಿದ ಕುರಿತು ಮಾತನಾಡಿ, ಜೈಲರ್​ ಕೇವಲ ಒಂದು ಸಿನಿಮಾವಲ್ಲ. ನಾನಾ ಭಾವನೆಗಳನ್ನೊಳಗೊಂಡ ಅದ್ಭುತ ಕಥೆ ಎಂದು ತಿಳಿಸಿದ್ದಾರೆ. ಅಲ್ಲದೇ, ಓರ್ವ ನಿರ್ದೇಶಕನಾಗಿ ಭಾಷೆಯ ಅಡೆತಡೆಗಳನ್ನು ಮೀರುವಂತೆ ಕಥೆಯನ್ನು ನಿರೂಪಿಸಿಸುವುದು ನನ್ನ ಗುರಿ ಎಂದು ತಿಳಿಸಿದ್ದರು.

ಇದನ್ನೂ ಓದಿ: HBD Pawan Kalyan: ಬಹುನಿರೀಕ್ಷಿತ 'ಓಜಿ ಟೀಸರ್'​ ಅನಾವರಣ - ಪ್ರೇಕ್ಷಕರಿಗೆ ದರ್ಶನ ಕೊಟ್ಟ 'ಹಸಿದ ಚಿರತೆ'

ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು, ಜೈಲರ್​ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಪ್ರಾರಂಭಿಸುವುದರ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಕೂಡ ತಿಳಿಸಿದರು. ಒಂದು ಪವರ್​ಫುಲ್​ ಸ್ಟೋರಿ ಜೊತೆ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಸಂಪರ್ಕ ಸಾಧಿಸಲಿದ್ದು, ಥ್ರಿಲ್​ ಆಗಿದ್ದೇನೆಂದು ತಿಳಿಸಿದರು.

ಇದನ್ನೂ ಓದಿ: ಸಮಂತಾ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ 'ಕುಶಿ' ಫಸ್ಟ್ ಡೇ ಕಲೆಕ್ಷನ್​ ಡೀಟೆಲ್ಸ್!

ರಜನಿಕಾಂತ್​ ಮುಖ್ಯಭೂಮಿಕೆಯ ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್​, ಮೋಹನ್​ ಲಾಲ್​​, ತಮನ್ನಾ ಭಾಟಿಯಾ, ಸುನೀಲ್​, ಯೋಗಿಬಾಬು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಅನಿರುಧ್ ರವಿಚಂದರ್​ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.