ETV Bharat / entertainment

'Thalaivar 170' ಶೂಟಿಂಗ್​ಗಾಗಿ ಕೊಚ್ಚಿಗೆ ತೆರಳಿದ ರಜನಿ​; ಚಿತ್ರತಂಡಕ್ಕೆ ಅಮಿತಾಭ್​ ಬಚ್ಚನ್​, ಫಹಾದ್​ ಫಾಸಿಲ್​ ಎಂಟ್ರಿ - ಈಟಿವಿ ಭಾರತ ಕನ್ನಡ

ನಟ ರಜನಿಕಾಂತ್​ 'ತಲೈವರ್​ 170' ಶೂಟಿಂಗ್​ಗಾಗಿ ಇಂದು ಕೊಚ್ಚಿಗೆ ತೆರಳಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್​ ಫಾಸಿಲ್ ಹಾಗೂ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​​ ನಟಿಸಲಿದ್ದಾರೆ ಎಂದು ಅಧಿಕೃತ ಘೋಷಣೆಯಾಗಿದೆ.

Rajinikanth jets off to Kochi for Thalaivar 170 shoot; makers welcome Fahadh Faasil onboard
'Thalaivar 170' ಶೂಟಿಂಗ್​ಗಾಗಿ ಕೊಚ್ಚಿಗೆ ತೆರಳಿದ ರಜನಿ​; ಚಿತ್ರತಂಡಕ್ಕೆ ಫಹಾದ್​ ಫಾಸಿಲ್​ ಎಂಟ್ರಿ
author img

By ETV Bharat Karnataka Team

Published : Oct 3, 2023, 5:45 PM IST

'ಜೈಲರ್​' ಯಶಸ್ಸಿನಲ್ಲಿರುವ ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಮುಂದಿನ 'ತಲೈವರ್​ 170' ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಕಳೆದೆರಡು ದಿನಗಳಿಂದ ಚಿತ್ರ ತಯಾರಕರು ಸಿನಿಮಾ ಬಗೆಗಿನ ಕೆಲವೊಂದು ಅಪ್​ಡೇಟ್ಸ್​ಗಳನ್ನು ನೀಡುತ್ತಿದ್ದಾರೆ. ಬಹುಭಾಷಾ ತಾರೆಯರು ಸೇರಿದಂತೆ ಭಾರತೀಯ ಚಿತ್ರರಂಗದ ಹಿರಿಯ ನಟರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೀಗ ಮಲಯಾಳಂ ನಟ ಫಹಾದ್​ ಫಾಸಿಲ್ ಹಾಗೂ ಬಿಗ್​ ಬಿ ಅಮಿತಾಭ್​ ಬಚ್ಚನ್​​ ಕೂಡ 'ತಲೈವರ್​ 170'ನ ಭಾಗವಾಗಿದ್ದಾರೆ ಎಂದು ಅಧಿಕೃತ ಘೋಷಣೆಯಾಗಿದೆ.

'ತಲೈವರ್​ 170' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಮಾಲಿವುಡ್​ ರಂಗದ ಸ್ಟಾರ್​ ನಟ ಫಹಾದ್​ ಫಾಸಿಲ್​ ಹಾಗೂ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟರ ಎಂಟ್ರಿ ಕುರಿತು ಪೋಸ್ಟ್​ ಶೇರ್​ ಮಾಡಿಕೊಂಡಿದೆ. ಇದಕ್ಕೂ ಮುನ್ನ ಸೌತ್ ಸಿನಿಮಾ ರಂಗದ ಸ್ಟಾರ್ ಹೀರೋ ರಾಣಾ ದಗ್ಗುಬಾಟಿ ಅವರು ಕೂಡ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿತ್ತು.

ಕೊಚ್ಚಿಗೆ ತೆರಳಿದ ರಜನಿ: ರಜನಿಕಾಂತ್​ ಅವರು ಈ ಸಿನಿಮಾದ ಶೂಟಿಂಗ್​ಗಾಗಿ ಇಂದು ಕೊಚ್ಚಿಗೆ ತೆರಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರು ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡರು. ಬಳಿಕ ಮಾತನಾಡಿದ ತಲೈವಾ, "ಮುಂದಿನ ಸಿನಿಮಾ ಶೂಟಿಂಗ್​ಗಾಗಿ ಕೊಚ್ಚಿಗೆ ತೆರಳುತ್ತಿದ್ದೇನೆ. ಜೈಲರ್​ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. ನನ್ನ 170ನೇ ಸಿನಿಮಾವನ್ನು ಟಿ.ಜೆ. ಜ್ಞಾನವೇಲ್​ ನಿರ್ದೇಶಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್​ ನಿರ್ಮಿಸುತ್ತಿದೆ. ಈ ಸಿನಿಮಾ ಒಂದೊಳ್ಳೆ ಸಂದೇಶದೊಂದಿಗೆ ದೊಡ್ಡ ಪರದೆಗೆ ಎಂಟ್ರಿಯಾಗಲಿದೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿರ್ಧಾರವಾಗಿಲ್ಲ" ಎಂದು ತಿಳಿಸಿದರು.

'ತಲೈವರ್ 170' ನಿರ್ಮಾಣ ಸಂಸ್ಥೆಯು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಚಿತ್ರದ ಪಾತ್ರವರ್ಗ ಹಾಗೂ ಸಿಬ್ಬಂದಿ ಕುರಿತು ಅಧಿಕೃತ ಘೋಷಣೆಗಳನ್ನು ಮಾಡುತ್ತಿದೆ. ಈಗಾಗಲೇ ತಿಳಿದಿರುವಂತೆ ಈ ಸಿನಿಮಾವನ್ನು 'ಜೈ ಭೀಮ್​' ಖ್ಯಾತಿಯ ಟಿ.ಜೆ.ಜ್ಞಾನವೇಲ್​ ನಿರ್ದೇಶಿಸಲಿದ್ದಾರೆ. ಜವಾನ್​,ಜೈಲರ್​ನಂತಹ ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಅನಿರುದ್ಧ್​ ರವಿಚಂದರ್ ಈ ಸಿನಿಮಾಗೂ​ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಮೂಲಕ ಸುಭಾಸ್ಕರನ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಇನ್ನು ನಿನ್ನೆಯಷ್ಟೇ ಈ ಚಿತ್ರದ ನಾಯಕಿಯರ ಮಾಹಿತಿಯೂ ಹೊರಬಿದ್ದಿದೆ. ಬಹುಭಾಷಾ ನಟಿಯರಾದ ರಿತಿಕಾ ಸಿಂಗ್​, ಮಂಜು ವಾರಿಯರ್​ ಮತ್ತು ದುಶುರಾ ವಿಜಯನ್​ ಅವರು ರಜನಿ ಮುಂದಿನ ಸಿನಿಮಾದ ಭಾಗವಾಗಿದ್ದಾರೆ. ಯಾರು, ಯಾವ್ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ. ಜೊತೆಗೆ ರಜನಿಕಾಂತ್​ಗೆ ನಾಯಕಿ ಯಾರಾಗಲಿದ್ದಾರೆ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಚಿತ್ರವು ಆ್ಯಕ್ಷನ್​ ಪ್ಯಾಕ್ಡ್​ ಎಂಟರ್​ಟೈನರ್​ ಆಗಿರಲಿದೆ. ರಜನಿಕಾಂತ್​ ವಿಶೇಷ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕಥೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ತಲೈವಾ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 2024ರಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Thalaivar 170: ರಜನಿಕಾಂತ್​ ಜೊತೆ ರಾಣಾ ದಗ್ಗುಬಾಟಿ ಸ್ಕ್ರೀನ್​ ಶೇರ್ - 'ತಲೈವರ್ 170' ಮೇಲೆ ಹೆಚ್ಚಿದ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.