ತುಮಕೂರಿನಲ್ಲಿ ಧಾರಾಕಾರ ಮಳೆ ಆಗಿದೆ. ಶನಿವಾರ ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆ ಹಲವೆಡೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ತರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ನವರಸನಾಯಕ ರಾಜ್ಯಸಭೆ ಸದಸ್ಯ ಜಗ್ಗೇಶ್ ಅವರ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
'ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ. ಬಹುತೇಕರು ನೀರು ಹರಿಯುವ ಸರ್ಕಾರದ ಜಾಗದಲ್ಲಿ ಮನೆ ಕಟ್ಟಿ ನೀರು ಹರಿಯುವ ಹೊಂಡಗಳನ್ನು ಮುಚ್ಚಿದ್ದಾರೆ. ಮಾಯಸಂದ್ರ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ. ದಯಮಾಡಿ ನೀರಾವರಿ ನಿಗಮ ಗಮನ ಹರಿಸಿ, ವಿನಂತಿ..' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತುಮಕೂರು: ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋದ ಯುವಕ
ಇಂದಿನಿಂದ ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರೆಯಲಿದೆ. ಹಲವು ಜಿಲ್ಲೆಗಳಿಗೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಆಗಸ್ಟ್ 31ರವರೆಗೆ ವರುಣಾರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-
ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ.ಮಾಯಸಂದ್ರ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ
— ನವರಸನಾಯಕ ಜಗ್ಗೇಶ್ (@Jaggesh2) August 28, 2022 " class="align-text-top noRightClick twitterSection" data="
ವಿನಂತಿ..#DC #TUMKUR#CEO #TUMKUR #ZP#KAVERINIGAMA #MD@BSBommai pic.twitter.com/IIaqptfxi4
">ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ.ಮಾಯಸಂದ್ರ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ
— ನವರಸನಾಯಕ ಜಗ್ಗೇಶ್ (@Jaggesh2) August 28, 2022
ವಿನಂತಿ..#DC #TUMKUR#CEO #TUMKUR #ZP#KAVERINIGAMA #MD@BSBommai pic.twitter.com/IIaqptfxi4ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ.ಮಾಯಸಂದ್ರ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ
— ನವರಸನಾಯಕ ಜಗ್ಗೇಶ್ (@Jaggesh2) August 28, 2022
ವಿನಂತಿ..#DC #TUMKUR#CEO #TUMKUR #ZP#KAVERINIGAMA #MD@BSBommai pic.twitter.com/IIaqptfxi4