ETV Bharat / entertainment

'ಸಂಜು ವೆಡ್ಸ್​ ಗೀತಾ 2'ಗೆ ನಾಯಕಿ ಫೈನಲ್​: ರಮ್ಯಾ ಬದಲು ರಚಿತಾ ರಾಮ್ ಹೀರೋಯಿನ್​ ​ - ಈಟಿವಿ ಭಾರತ ಕನ್ನಡ

'ಸಂಜು ವೆಡ್ಸ್​ ಗೀತಾ 2' ಸಿನಿಮಾಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿಯಾಗಿದ್ದಾರೆ.

Sanju Weds Geeta
ಸಂಜು ವೆಡ್ಸ್​ ಗೀತಾ
author img

By

Published : Jul 22, 2023, 3:29 PM IST

'ಸಂಜು ವೆಡ್ಸ್​ ಗೀತಾ'... 2011ರಲ್ಲಿ ತೆರೆಕಂಡು ಬ್ಲಾಕ್​ ಬಸ್ಟರ್​ ಆದ ಸಿನಿಮಾ. ನಟ ಶ್ರಿನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಕೆಮಿಸ್ಟ್ರಿ ಸಿನಿ ಪ್ರೇಮಿಗಳನ್ನು ವಿಶೇಷವಾಗಿ ಸೆಳೆದಿತ್ತು. ಚಿತ್ರದಲ್ಲಿನ ಹಾಡುಗಳು, ಕಥೆ, ಸಂಭಾಷಣೆ ಎಲ್ಲವೂ ಹಿಟ್​ ಆಗಿದ್ದವು. ಒಂದು ದಶಕ ಕಳೆದರೂ ಇಂದಿಗೂ ಈ ಸಿನಿಮಾದ ಕ್ರೇಜ್​ ಕಡಿಮೆ ಆಗಿಲ್ಲ ಅನ್ನೋದೇ ವಿಶೇಷ. ಇದೀಗ ಸುಮಾರು 12 ವರ್ಷಗಳ ಬಳಿಕ ಸಂಜು ವೆಡ್ಸ್​ ಗೀತಾ ಪಾರ್ಟ್​ 2ಗೆ ಸಿದ್ಧತೆ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ.

ಈ ಸಂತಸದ ವಿಚಾರವನ್ನು ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದಂದು (ಜುಲೈ 8) ಚಿತ್ರತಂಡ ಹಂಚಿಕೊಂಡಿತ್ತು. ಸಂಜು ವೆಡ್ಸ್​ ಗೀತಾ 2ನ ಫಸ್ಟ್​ ಲುಕ್​ ಬಿಡುಗಡೆಯಾಗಿತ್ತು. ನವೆಂಬರ್​ನಿಂದ ಅಂದರೆ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸಿನಿಮಾ ಶೂಟಿಂಗ್​ ಕೂಡ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಸಿನಿಮಾ ನಾಯಕಿಯ ಆಯ್ಕೆ ಮಾತ್ರ ಫೈನಲ್​ ಆಗಿರಲಿಲ್ಲ. ಎಲ್ಲರೂ ರಮ್ಯಾ ಅವರೇ ಹೀರೋಯಿನ್​ ಆಗಬೇಕು ಎಂಬ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಪಾರ್ಟ್​ 2ಗೆ ರಮ್ಯಾ ಬದಲು ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹೌದು. ಕನ್ನಡ ಚಿತ್ರರಂಗದ ಬಹುಬೇಡಿಕೆಯ​ ನಟಿಗೆ ಈ ಅವಕಾಶ ಸಿಕ್ಕಿದೆ. ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಅಭಿಮಾನಿಗಳಿಗೆ ಮಾತ್ರ ಮೋಹಕ ತಾರೆಯೇ ನಾಯಕಿಯಾಗಬೇಕು ಅನ್ನೋದು ಆಸೆಯಾಗಿತ್ತು. ಅಲ್ಲದೇ ಬಿಡುಗಡೆಯಾದ ಫಸ್ಟ್​ ಲುಕ್​ನಲ್ಲಿ 'ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಪ್ರೆಸೆಂಟ್ಸ್​' ಅನ್ನೋ ಹೆಸರನ್ನು ಕೂಡ ಸೇರಿಸಲಾಗಿತ್ತು. ಹಾಗಾಗಿ ರಮ್ಯಾ ಕೂಡ ಈ ಸಿನಿಮಾದಲ್ಲಿ ಇರ್ತಾರಾ? ಅನ್ನೋ ಕುತೂಹಲ ಜನರಲ್ಲಿತ್ತು. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಇಂದು ತೆರೆ ಬಿದ್ದಿದ್ದು, ಸಂಜು ವೆಡ್ಸ್​ ಗೀತಾ ಪಾರ್ಟ್​ 2 ನಾಯಕಿಯ ಸ್ಥಾನವನ್ನು ರಚಿತಾ ರಾಮ್​ ತುಂಬಲಿದ್ದಾರೆ.

ರಚಿತಾ ರಾಮ್​ ಫಸ್ಟ್​ ಲುಕ್​ನಲ್ಲೇನಿದೆ?: ಈಗಾಗಲೇ ಬಿಡುಗಡೆಯಾಗಿರುವ ಶ್ರೀನಗರ ಕಿಟ್ಟಿ ಫಸ್ಟ್​ ಲುಕ್​ ರೀತಿಯಲ್ಲೇ ರಚಿತಾ ರಾಮ್​ ಅವರ ಫಸ್ಟ್​ ಲುಕ್​ನ್ನೂ ರಿಲೀಸ್​ ಮಾಡಲಾಗಿದೆ. ಒಂದೇ ಪೋಸ್ಟರ್​ನಲ್ಲಿ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ನೋಟ್​ ಬುಕ್​ನ ಹಾಳೆಯಲ್ಲಿ ರಚಿತಾ ರಾಮ್​ ಫೋಟೋವನ್ನು ಚಿತ್ರಿಸಲಾಗಿದೆ. ಡಿಂಪಲ್​ ಕ್ವೀನ್​ ಕೆಂಪು ಸೀರೆ ಉಟ್ಟು, ನಗುತ್ತಾ ನಿಂತಿದ್ದಾರೆ.

ಪೋಸ್ಟರ್​ನಲ್ಲಿ 'ಸಂಜು ವೆಡ್ಸ್​ ಗೀತಾ 2'ವನ್ನು ರಕ್ತದ ಬಣ್ಣದಲ್ಲೇ ಬರೆಯಲಾಗಿದೆ. ಅದರ ಮೇಲೆ 'ಲೈಫ್​ ಈಸ್​ ಬ್ಯೂಟಿಫುಲ್'​ ಎಂಬ ಬರಹವೂ ಇದೆ. ಸಿನಿಮಾವನ್ನು ನಾಗಶೇಖರ್​ ಅವರೇ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುಂದಿನ ವರ್ಷ 2024ರ ದಸರಾ ಹಬ್ಬದ ಸಮಯದಲ್ಲಿ 'ಸಂಜು ವೆಡ್ಸ್​ ಗೀತಾ 2' ಬಿಡುಗಡೆಗೆ ಮುಹೂರ್ತ ನೀಡಲಾಗಿದೆ. ಇದೇ ವರ್ಷ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಶೂಟಿಂಗ್​ ಕೂಡ ಪ್ರಾರಂಭವಾಗಲಿದೆ. ಇನ್ನೂ ಸಿನಿಮಾ ಕಾಸ್ಟಿಂಗ್​ ವಿಚಾರವಾಗಿ ಚಿತ್ರತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಇದನ್ನೂ ಓದಿ: Kalki 2898 AD: ಡಾರ್ಲಿಂಗ್​ ಪ್ರಭಾಸ್​ ಲುಕ್​ಗೆ ಮೆಚ್ಚುಗೆ ಸೂಚಿಸಿದ ಸ್ಟಾರ್​ ನಿರ್ದೇಶಕ ರಾಜಮೌಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.