ETV Bharat / entertainment

ಬಿಡುಗಡೆಗೆ ಸಜ್ಜಾಗಿದೆ 'ರಾಣ': ನಿರ್ಮಾಪಕ ಕೆ.ಮಂಜು ಪುತ್ರನಿಗೆ ಬ್ರೇಕ್‌ ಕೊಡುತ್ತಾ ಚಿತ್ರ? - ಕನ್ನಡದ ಖ್ಯಾತ ನಿರ್ಮಾಪಕ

ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್​ ನಟಿಸಿರುವ ರಾಣ ಚಿತ್ರವು ನವೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Raana Release On November 11 Statewide
ರಾಣ ಚಿತ್ರದ ಪೋಸ್ಟರ್​
author img

By

Published : Sep 12, 2022, 1:23 PM IST

ಪಡ್ಡೆಹುಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾಗಿ ಹೊರಹೊಮ್ಮಿರುವ ನಟ ಶ್ರೇಯಸ್ ಮಂಜು, ಸದ್ಯ ರಾಣ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರನಾಗಿರುವ ಶ್ರೇಯಸ್​ಗೆ ಚೊಚ್ಚಲ ಸಿನಿಮಾದಲ್ಲಿ ಅಂದುಕೊಂಡಂತೆ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಮಾಸ್ ಟೈಟಲ್ ಹೊಂದಿರುವ ರಾಣ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ‌.

Raana Release On November 11 Statewide
ರಾಣ ಚಿತ್ರದ ಪೋಸ್ಟರ್​

ರಾಣ ಲವ್ ಸ್ಟೋರಿಯ ಜೊತೆಗೆ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿದೆ. ರವಿವರ್ಮ, ಚೇತನ್, ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ಶ್ರೇಯಸ್​ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.

Raana Release On November 11 Statewide
ರಾಣ ಚಿತ್ರದ ಪೋಸ್ಟರ್​

ಸದ್ಯ ರೀಷ್ಮಾ ನಾಣಯ್ಯ ಜೊತೆ ಶ್ರೇಯಸ್ ಮಂಜು ಮಸ್ತ್ ಡ್ಯಾನ್ಸ್ ಮಾಡಿರೋ ಮೇಕಿಂಗ್ ಫೋಟೋಗಳು ಅನಾವರಣಗೊಂಡಿವೆ. ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ಅಲ್ಲದೇ ರಜನಿ ಭಾರದ್ವಾಜ್, ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ಚಿತ್ರದಲ್ಲಿ ಬಣ್ಣದ ಹಚ್ಚಿಸಿದ್ದಾರೆ.

Raana Release On November 11 Statewide
ರಾಣ ಚಿತ್ರದ ಪೋಸ್ಟರ್​

ಅಧ್ಯಕ್ಷ,‌ ರನ್ನ,‌ ಮುಕುಂದ ಮುರಾರಿ, ಪೊಗರು ಸಿನಿಮಾಗಳನ್ನು ನಿರ್ದೇಶಿಸಿರುವ ನಂದಕಿಶೋರ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಮೂರು ಹಾಡುಗಳಿದ್ದು ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನವಿರುವ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

Raana Release On November 11 Statewide
ರಾಣ ಚಿತ್ರದ ಪೋಸ್ಟರ್​

ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಕೆ.ಮಂಜು ಅರ್ಪಿಸುವ, ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಿಸಿರುವ ರಾಣ ಚಿತ್ರ ನವೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‌ಈ ಸಿನಿಮಾ‌‌ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್​​ಗೆ ದೊಡ್ಡ ಮಟ್ಟದ ಬ್ರೇಕ್ ಕೊಡುತ್ತಾ ಕಾದು ನೋಡಬೇಕು.

Raana Release On November 11 Statewide
ರಾಣ ಚಿತ್ರದ ಪೋಸ್ಟರ್​

ಇದನ್ನೂ ಓದಿ: 'ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗಲಾರೆ..': ಸ್ಯಾಂಡಲ್‌ವುಜ್‌ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ವೈಭವಿ ಶಾಂಡಿಲ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.