ETV Bharat / entertainment

'ಪವರ್ ಸ್ಟಾರ್' ಬ್ಯಾನರ್​ನ 10ನೇ ಸಿನಿಮಾದ ಟೈಟಲ್ ಏನು ಗೊತ್ತಾ?

ಪಿಆರ್​ಕೆ ನಿರ್ಮಾಣ ಸಂಸ್ಥೆಯಿಂದ 10ನೇ ಸಿನಿಮಾದ ನಿರ್ಮಾಣದ ಬಗ್ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್​ ತಮ್ಮ ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ.

author img

By

Published : Apr 6, 2022, 8:24 PM IST

Ashwini Puneeth Rajkumar
ಅಶ್ವಿನಿ ಪುನೀತ್ ರಾಜ್​ಕುಮಾರ್

ಬೆಂಗಳೂರು: ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟು ಹಾಕಿದ ಕನಸಿನ ಕೂಸು ಪಿಆರ್​ಕೆ ಸಿನಿಮಾ ನಿರ್ಮಾಣ ಸಂಸ್ಥೆ. ‌ಹೊಸ ಪ್ರತಿಭೆಗಳು, ಯುವ ನಟ ಹಾಗು ನಿರ್ದೇಶಕರಿಗೆ ಅವಕಾಶ ಕೊಡುವ ಉದ್ದೇಶದಿಂದ ಪುನೀತ್‌ ಪಿಆರ್​ಕೆ ಪ್ರೊಡಕ್ಷನ್ ಹುಟ್ಟು ಹಾಕಿದ್ದರು.

ಈ ಸಂಸ್ಥೆಯಡಿ ಹಲವು ಸದಭಿರುಚಿಯ ಸಿನಿಮಾಗಳು ಬರ್ತಿವೆ. ಆದರೆ ಪುನೀತ್ ರಾಜ್‍ಕುಮಾರ್ ನಿಧನದ ನಂತರ ಪಿಆರ್​ಕೆಯಡಿ ಸಿನಿಮಾಗಳು ನಿರ್ಮಾಣ ಆಗೋದು ಡೌಟ್ ಎನ್ನಲಾಗಿತ್ತು. ಆದರೆ ಈಗ ಹೊಸ ಸಿನಿಮಾ ಅನೌಂಸ್ ಆಗಿದೆ. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ಹೊಸ ಚಿತ್ರದ ಮೂಲಕ ಹಲವು ಹೊಸ ಪ್ರಯತ್ನಕ್ಕೆ ನಿರ್ಮಾಣ ಸಂಸ್ಥೆ ಮುಂದಾಗಿದೆ. ಚಿತ್ರಕ್ಕೆ ಆಚಾರ್ & ಕೋ. ಎಂದು ಶೀರ್ಷಿಕೆ ಇಡಲಾಗಿದೆ. 60ರ ದಶಕದ ಬೆಂಗಳೂರಿನಲ್ಲಿ ನಡೆಯುವ ಕತೆ ಇದಾಗಿರಲಿದೆ. ಇದು ಪಿಆರ್​ಕೆ ಪ್ರೊಡಕ್ಷನ್ಸ್​ನಲ್ಲಿ ತಯಾರಾಗುತ್ತಿರುವ ಮೊದಲ ಮಹಿಳಾ ನಿರ್ದೇಶನದ ಚಿತ್ರವೂ ಹೌದು.

  • "ಆಚಾರ್ & ಕೋ." ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 10 ನೇ ಚಿತ್ರ. 60 ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ.

    ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ.
    (1/5) pic.twitter.com/Nfao1yvD1I

    — Ashwini Puneeth Rajkumar (@ashwinipuneet) April 6, 2022 " class="align-text-top noRightClick twitterSection" data=" ">

ಆಚಾರ್ & ಕೋ.’ ಚಿತ್ರವನ್ನು ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ಸಂಗೀತ ನಿರ್ದೇಶನದ ಮೂಲಕ ಎಲ್ಲೆಡೆ ಗುರುತಿಸಿಕೊಂಡಿರುವ, ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿರುವ ಬಿಂದುಮಾಲಿನಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ತಾಂತ್ರಿಕ ವರ್ಗದಲ್ಲೂ ಹಲವು ಮಹಿಳೆಯರು ಇರಲಿದ್ದಾರೆ ಎನ್ನಲಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಜತೆಗೆ ಗುರುದತ್ ಎ.ತಲ್ವಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ‌ ಚಿತ್ರದಲ್ಲಿ ನಾಯಕ, ನಾಯಕಿ ಯಾರು? ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ: ನಾನು ಹಾಗಂದಿಲ್ಲ, ವದಂತಿ ನಿಲ್ಲಿಸಿ.. ಅಪಪ್ರಚಾರದ ಕುರಿತು ಮೌನ ಮುರಿದ ಬಹುಭಾಷಾ ನಟಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.