ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಭಾರತದಿಂದ ಲಾಸ್ ಏಂಜಲೀಸ್‌ಗೆ ಮರಳಿದ್ದು, ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗಳು ಮಾಲ್ತಿ ಮೇರಿ ಚೋಪ್ರಾ, ಪತಿ ಜೋನಾಸ್ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ, ಮೂರು ವರ್ಷಗಳ ಬಳಿಕ ನವೆಂಬರ್ 1 ರಂದು ಭಾರತಕ್ಕೆ ಭೇಟಿ ನೀಡಿದ್ದರು. UNICEFನ ರಾಯಭಾರಿಯಾಗಿ ಉತ್ತರ ಪ್ರದೇಶದ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಸಲುವಾಗಿ ಕೆಲ ದಿನಗಳ ಕಾಲ ಭಾರತದಲ್ಲಿದ್ದರು. ನವೆಂಬರ್ 9ರಂದು ಲಾಸ್ ಏಂಜಲೀಸ್‌ಗೆ ಮರಳಿದ್ದು, ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆದಿದ್ದಾರೆ. ಈ ವೇಳೆ ಪತಿ ಮತ್ತು ಪುತ್ರಿಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಚಿತ್ರಗಳು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ: 'ಧಾರಾವಿ ಬ್ಯಾಂಕ್': ಸುನೀಲ್ ಶೆಟ್ಟಿ ಜೊತೆ ತೆರೆ ಹಂಚಿಕೊಂಡ ಕನ್ನಡತಿ ಭಾವನಾ ರಾವ್
ಪ್ರಿಯಾಂಕಾ ಭಾರತದಿಂದ ಮರಳಿದ ಬಳಿಕ ಕ್ರಿಸ್‌ಮಸ್ ಹಬ್ಬ ಆಚರಣೆಯ ಸಿದ್ಧತೆಯತ್ತ ಗಮನ ಹರಿಸಿದ್ದಾರೆ. ಮಗಳು ಮಾಲ್ತಿಯೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ, ತಮ್ಮ ಪುತ್ರಿಯ ಮೊದಲ ಕ್ರಿಸ್‌ಮಸ್ ತಯಾರಿಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ. ಇದು ಕೇವಲ ಆರಂಭ, ಸಂಭ್ರಮ ಇನ್ನೂ ಬಹಳಷ್ಟಿದೆ ಎಂದು ಬರೆದಿದ್ದಾರೆ. ಇದಕ್ಕೂ ಮೊದಲು ಮಗಳು ಮಾಲ್ತಿಯೊಂದಿಗೆ ಪ್ರಿಯಾಂಕಾ ಮತ್ತು ಪತಿ ನಿಕ್ ಆಟ ಆಡುವ ಫೋಟೋ ಹಂಚಿಕೊಂಡಿದ್ದರು.
ಇದನ್ನೂ ಓದಿ: ಲಾಸ್ ಏಂಜಲೀಸ್‌ಗೆ ಮರಳಿದ ಪ್ರಿಯಾಂಕಾ.. ಯೋಗಿ ಸರ್ಕಾರದ ಯೋಜನೆ ಶ್ಲಾಘಿಸಿದ ಚೋಪ್ರಾ