ಜಿಯೋ ಮಾಮಿ ಮುಂಬೈ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮುಂಬೈಗೆ ಆಗಮಿಸಿದ್ದಾರೆ. ಮುಂಬೈನ ಪಾಪರಾಜಿಗಳು ದೇಸಿ ಹುಡುಗಿ ಆಗಮನದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. MAMI ಫಿಲ್ಮ್ ಫೆಸ್ಟಿವಲ್ 2023 ರ ಅಧ್ಯಕ್ಷತೆ ವಹಿಸಿರುವ ಪ್ರಿಯಾಂಕಾ ಚೋಪ್ರಾ ಶುಕ್ರವಾರ ಭಾರತಕ್ಕೆ ಬಂದಿಳಿದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಕಪ್ಪು ಕ್ರಾಪ್ ಟಾಪ್ನಲ್ಲಿ ಕಂಗೊಳಿಸುತ್ತಿದ್ದರು. ಉದ್ದವಾದ ಶ್ರಗ್ ಮತ್ತು ಮ್ಯಾಚಿಂಗ್ ಪ್ಯಾಂಟ್ ತೊಟ್ಟಿದ್ದ ಪಿಗ್ಗಿ ತೆರೆದ ಕೂದಲಿನೊಂದಿಗೆ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಆರಾಮದಾಯಕವಾದ ಬೂದು ಬಣ್ಣದ ಜಾಗರ್ ಮತ್ತು ಕಪ್ಪು ಸ್ನೀಕರ್ ನಲ್ಲಿ ಸುಂದರವಾಗಿ ಕಂಡು ಬಂದರು. ಮುಂಬೈಗೆ ಆಗಮಿಸಿದ ನಂತರ, ಅವರು ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ನಿನ್ನೆಯೇ ಅವರು ನಾನು ಬಹಳ ದಿನಗಳ ನಂತರ ಭಾರತಕ್ಕೆ ಹಿಂದಿರುಗುತ್ತಿದ್ದು, ಖುಷಿಯಾಗುತ್ತಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದರು.
ಪ್ರಿಯಾಂಕಾ ತಮ್ಮ ಪಾಸ್‌ಪೋರ್ಟ್ ಮತ್ತು ಅಧಿಕೃತ ಪೇಪರ್‌ಗಳ ಚಿತ್ರವನ್ನು ಪೋಸ್ಟ್ ಮಾಡಿದ್ದರು. ‘‘ ಇನ್ನು ಕಾಯಲು ಸಾಧ್ಯವಿಲ್ಲ" ಎಂದು ಶೀರ್ಷಿಕೆ ಕೊಟ್ಟಿದ್ದರು. ಅವರ ಮುಂಬೈ ಗೆ ಬರುವ ಮುನ್ನ ತಮ್ಮ ಮಗಳು ಮಾಲ್ತಿ ಮೇರಿಯೊಂದಿಗೆ ತಮ್ಮ ಕಾರ್ ಸವಾರಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ತಮ್ಮ ಮಗಳ ಮುಖವನ್ನು ಮಾತ್ರ ತೋರಿಸಿಲ್ಲ.
Jio MAMI ಮುಂಬೈ ಚಲನಚಿತ್ರೋತ್ಸವವು 10 ದಿನಗಳ ಕಾಲ ನಡೆಯಲಿದ್ದು, ಈ ವೇಳೆ ಪ್ರಪಂಚದಾದ್ಯಂತದ 250 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಕ್ಟೋಬರ್ 27 ರಿಂದ ನವೆಂಬರ್ 5 ರವರೆಗೆ ಈ ಉತ್ಸವವು ನಡೆಯಲಿದೆ.
ಉತ್ಸವದಲ್ಲಿ 40 ಕ್ಕೂ ಹೆಚ್ಚು ವಿಶ್ವ ಪ್ರೀಮಿಯರ್‌ಗಳು, 45 ಏಷ್ಯಾ ಪ್ರೀಮಿಯರ್‌ಗಳು ಮತ್ತು 70 ಕ್ಕೂ ಹೆಚ್ಚು ದಕ್ಷಿಣ ಏಷ್ಯಾ ಪ್ರೀಮಿಯರ್ ಶೋಗಳು ನಡೆಯಲಿವೆ. ಈ ವರ್ಷದ ಉತ್ಸವವು ದಕ್ಷಿಣ ಏಷ್ಯಾದ ಚಿತ್ರರಂಗದಲ್ಲಿ ಸಮಕಾಲೀನ ಚಲನಚಿತ್ರಗಳು ಮತ್ತು ಉದಯೋನ್ಮುಖ ಸಿನಿಮಾಗಳನ್ನು ಹೈಲೈಟ್ ಮಾಡುವ ಗುರಿ ಹೊಂದಿದೆ. ಇದು ದಕ್ಷಿಣ ಏಷ್ಯಾದ ಪ್ರಮುಖ ಕಾರ್ಯಕ್ರಮವಾಗಿದೆ.
ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಜೊತೆಗೆ, ಕರೀನಾ ಕಪೂರ್ ಖಾನ್, ಸೋನಮ್ ಕಪೂರ್, ಕರಣ್ ಜೋಹರ್, ಕಮಲ್ ಹಾಸನ್, ಮಣಿರತ್ನಂ, ಲುಕಾ ಗ್ವಾಡಿಗ್ನೋ, ಹನ್ಸಲ್ ಮೆಹ್ತಾ, ಏಕ್ತಾ ಕಪೂರ್, ಭೂಮಿ ಪೆಡ್ನೇಕರ್, ಸೋಭಿತಾ ಧೂಲಿಪಾಲ, ಅನುರಾಗ್ ಕಶ್ಯಪ್, ಮಾನುಷಿ ಕಶ್ಯಪ್, ಮಾನುಷಿ ಕಶ್ಯಪ್ ಮುಂತಾದ ಇತರ ಪ್ರಸಿದ್ಧ ಸೆಲೆಬ್ರಿಟಿಗಳು ಮತ್ತು ಚಲನಚಿತ್ರ ನಿರ್ಮಾಪಕರು ಫಜಲ್ ಮತ್ತು ಇನ್ನು ಹಲವರು ಪಾಲ್ಗೊಳ್ಳಲಿದ್ದಾರೆ.