ETV Bharat / entertainment

ಸಲಾರ್​ ಸೆಟ್​​​ನ 'worst thing' ಹಂಚಿಕೊಂಡ ಪೃಥ್ವಿರಾಜ್ - ರಾಜಮೌಳಿ

ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪರಸ್ಪರರ ಕುರಿತ ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Prithviraj Sukumaran and Prabhas
ಪೃಥ್ವಿರಾಜ್ - ಪ್ರಭಾಸ್
author img

By ETV Bharat Karnataka Team

Published : Dec 20, 2023, 5:00 PM IST

ಸೌತ್​ ಸೂಪರ್​​​ ಸ್ಟಾರ್​ಗಳಾದ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ಅವರ 'ಸಲಾರ್​​'ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಎರಡು ಭಾಗಗಳಲ್ಲಿ ಈ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಮೂಡಿಬರಲಿದ್ದು, ಬಾಲ್ಯಸ್ನೇಹಿತರು ಶತ್ರುಗಳಾಗಿ ಮಾರ್ಪಟ್ಟಿರುವಂತೆ ಈಗಾಗಲೇ ಅನಾವರಣಗೊಂಡಿರುವ ಟ್ರೇಲರ್​ಗಳು ಬಹಿರಂಗಪಡಿಸಿವೆ.

ಹೊಂಬಾಳೆ ಫಿಲ್ಮ್ಸ್ ಆನ್​ಲೈನ್​ನಲ್ಲಿ ಸಿನಿಮಾದ ಪ್ರಚಾರವನ್ನು ಜೋರಾಗಿ ನಡೆಸುತ್ತಿದೆ. ಇತ್ತೀಚೆಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ದಕ್ಷಿಣ ಚಿತ್ರರಂಗದ ದಿಗ್ಗಜರ ಸಮಾಗಮ ಆಗಿರುವುದನ್ನು ನೋಡಬಹುದು. ಪೃಥ್ವಿರಾಜ್ ಸುಕುಮಾರನ್​, ಪ್ರಭಾಸ್ ಮತ್ತು ಪ್ರಶಾಂತ್ ನೀಲ್​​ ಸಲಾರ್‌ನ ತೆರೆಮರೆಯ ವಿಚಾರಗಳನ್ನು ತಿಳಿಸಿದ್ದಾರೆ. ಬಾಹುಬಲಿ ಖ್ಯಾತಿಯ ರಾಜಮೌಳಿ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ಇಂಟರ್​ವ್ಯೂವ್​ ನಡೆಸಿದ್ದಾರೆ. ಆಸಕ್ತಿಕರ ಸಂದರ್ಶನದ ಸಮಯದಲ್ಲಿ, ರಾಜಮೌಳಿ ಅವರು ಪ್ರಭಾಸ್ ಜೊತೆಗೆ ಕೆಲಸ ಮಾಡಿದ ಅನುಭವದ ಬಗ್ಗೆ ಪೃಥ್ವಿರಾಜ್ ಮತ್ತು ಪ್ರಶಾಂತ್ ಅವರನ್ನು ಪ್ರಶ್ನಿಸಿದರು.

ಪ್ರಭಾಸ್ ಜೊತೆ ಕೆಲಸ ಮಾಡುವಾಗ ನಿಮಗನಿಸಿದ "ಕೆಟ್ಟ ವಿಷಯ"ವೇನು ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಪೃಥ್ವಿರಾಜ್ ಪ್ರತಿಕ್ರಿಯಿಸಿ "ನೀವು ಡಯಟ್ ಮಾಡಲು ಸಾಧ್ಯವಿಲ್ಲ" ಎಂದು ಹಾಸ್ಯವಾಗಿ ಟೀಕಿಸಿದರು. ಪ್ರಭಾಸ್​​ ಆಹಾರಪ್ರಿಯ ಅನ್ನೋದು ನಿಮಗೆ ತಿಳಿದೇ ಇದೆ. ಅಲ್ಲದೇ ಸದೃಢ ಮೈಕಟ್ಟು ಹೊಂದಲು ಹೆಚ್ಚಿನ ಪ್ರಮಾಣದ ಆಹಾರ ಸೇವಿಸುತ್ತಾರೆಂಬುದನ್ನು ಅಲ್ಲಗೆಳೆಯುವಂತಿಲ್ಲ. ಸಲಾರ್ ಶೂಟಿಂಗ್‌ ಸೆಟ್​​ನ ಘಟನೆಯೊಂದನ್ನು ಪೃಥ್ವಿರಾಜ್ ನೆನಪಿಸಿಕೊಂಡರು. ಇಪ್ಪತ್ತು ವಿಭಿನ್ನ ಖಾದ್ಯಗಳೊಂದಿಗೆ ಪ್ರಭಾಸ್​ ಅವರ ಊಟ ಬಂತು. ಆ ರಾತ್ರಿ ಊಟಕ್ಕೆ ಅವಕಾಶ ಕಲ್ಪಿಸಲು ಹೆಚ್ಚುವರಿ ಹೋಟೆಲ್ ರೂಮ್​​ನ ಅಗತ್ಯವಿತ್ತು ಎಂದು ತಮಾಷೆ ಮಾಡಿದರು.

ಮಾತು ಮುಂದುವರಿಸಿದ ಪೃಥ್ವಿರಾಜ್, "ಪ್ರಭಾಸ್ ಸುತ್ತಮುತ್ತ ಇರುವಾಗ ನೀವು ಬಹಳಾನೆ ಜಾಗರೂಕರಾಗಿರಬೇಕು. ಓಹ್ ನನಗಿದು ಇಷ್ಟ, ಅದು ಇಷ್ಟ ಎಂದು ಹೇಳೋದಲ್ಲ. ಏಕೆಂದರೆ ಸಂಜೆ ನೀವು ನಿಮ್ಮ ರೂಮಿಗೆ ಹೋದಾಗ ನಿವೇನು ಹೇಳಿದ್ದೀರೋ ಅದು ರೆಡಿ ಇರುತ್ತೆ. ಹೀಗೇ ಒಮ್ಮೆ ಅವರತ್ರ ಮಾತನಾಡುತ್ತಿದ್ದೆ. ನಾನು ಮನೆಗೆ ಹೋಗಿ, ಕಾರ್ ಓಡಿಸಿ ತುಂಬಾ ದಿನ ಆಯ್ತು ಅಂದಾಗ ಅವರು ನಾನು ನನ್ನ ಲ್ಯಾಂಬೋರ್ಗಿನಿ ಬಿಟ್ಟು ಹೋಗ್ತೀನಿ. ಇಲ್ಲೇ ಸ್ವಲ್ಪ ದಿನ ಇಟ್ಟುಕೊಳ್ಳಿ ಅಂದಾಗ ನಾನು ನಿಮಗೆ ಹುಚ್ಚು ಹಿಡಿದಿದೆಯಾ ಎಂದು ಕೇಳಿದ್ದೆ. ಅವರು ಡೇಂಜರಸ್ ವ್ಯಕ್ತಿ (ತಮಾಷೆಯ ಮಾತುಗಳು)" ಎಂದು ತಿಳಿಸಿದರು.

ಇದನ್ನೂ ಓದಿ: Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?

ಪ್ರಭಾಸ್ ಕೂಡ ಪೃಥ್ವಿರಾಜ್ ಅವರನ್ನು ಹೊಗಳಿದರು. ನಿರ್ದೇಶಕರಾಗಿ ಮತ್ತು ಸೂಪರ್‌ಸ್ಟಾರ್ ಭಾರಿ ಯಶಸ್ಸು ಸಾಧಿಸುತ್ತಿದ್ದಾರೆ, ಅವರೋರ್ವ ಅದ್ಭುತ ಪ್ರತಿಭೆ ಎಂದು ಶ್ಲಾಘಿಸಿದರು. ಪ್ರಶಾಂತ್ ನೀಲ್​ ಅವರು ಸೆಟ್​ನಲ್ಲಿ ಡೈಲಾಗ್ಸ್​​ ಬದಲಾಯಿಸುತ್ತಿದ್ದರೂ, ಪೃಥ್ವಿರಾಜ್ ತಮ್ಮ ಪ್ರೊಫೆಶನಲಿಸಮ್​ ಅನ್ನು ಸಾಬೀತುಪಡಿಸುತ್ತಿದ್ದರು. ಯಾವಾಗಲೂ ಕೂಲ್ ಆಗಿರುವಂತಹ ನಟನನ್ನು ನಾನು ನೋಡಿಲ್ಲ. ಮೊದಲ ದಿನದಿಂದ ಕೊನೆಯ ದಿನದವರೆಗೆ ಸಖತ್​ ಕೂಲ್​​ ಆಗಿ ತಮ್ಮ ಪ್ರೊಫೆಶನಲಿಸಮ್​ ಅನ್ನು ಎತ್ತಿಹಿಡಿದರು. "ಶೃತಿ ಹಾಸನ್ ಅವರಿಗಿಂತ ಹೆಚ್ಚು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದೇನೆ" ಎಂದು ಪ್ರಭಾಸ್​ ಹಾಸ್ಯಚಟಾಕಿ ಹಾರಿಸಿದರು.

ಇದನ್ನೂ ಓದಿ: ಹೆಚ್ಚಾಯ್ತು 'ಸಲಾರ್'​ ಫೀವರ್​: ಮಧ್ಯರಾತ್ರಿಯು ಶೋ , ಟಿಕೆಟ್​ ದರ ಹೆಚ್ಚಳಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ತೆಲಂಗಾಣ ಸರ್ಕಾರ

ಹೊಂಬಾಳೆ ಫಿಲ್ಮ್ಸ್‌ನಿಂದ ಈ ಸಿನಿಮಾ ನಿರ್ಮಾಣಗೊಂಡಿದೆ. 400 ಕೋಟಿ ರೂಪಾಯಿ ಬಜೆಟ್​ನ ಸಿನಿಮಾ ಎಂದು ವರದಿಯಾಗಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಿಸೆಂಬರ್ 22ರಂದು ತೆರೆಕಾಣಲಿದೆ. ಶಾರುಖ್ ಖಾನ್ ಅವರ ಡಂಕಿ ಸಿನಿಮಾದೊಂದಿಗೆ ಪೈಪೋಟಿ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.