ETV Bharat / entertainment

ನಾನು ಕೆಟ್ಟ ಸಿನಿಮಾ ಮಾಡಿಲ್ಲ, 'A' ಸರ್ಟಿಫಿಕೇಟ್​ ಬೇಸರ ತಂದಿದೆ: ಪ್ರಶಾಂತ್​ ನೀಲ್

ಸಲಾರ್​ ಸಿನಿಮಾಗೆ 'ಎ' ಪ್ರಮಾಣಪತ್ರ ಸಿಕ್ಕಿರುವ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

Prashanth Neel
ಪ್ರಶಾಂತ್​ ನೀಲ್
author img

By ETV Bharat Karnataka Team

Published : Dec 20, 2023, 8:16 PM IST

'ಸಲಾರ್​​' ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ. ನಟ ಪ್ರಭಾಸ್ ಅಭಿನಯದ ಆ್ಯಕ್ಷನ್ ಡ್ರಾಮಾ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ (ಸಿಬಿಎಫ್‌ಸಿ) 'ಎ' ಪ್ರಮಾಣಪತ್ರ ಪಡೆದುಕೊಂಡಿದೆ. ಸಿಬಿಎಫ್​​​ಸಿ ಸೂಚಿಸಿದ ಕೆಲ ಬದಲಾವಣೆಗಳನ್ನು ಮಾಡುವ ಮೂಲಕ ಚಿತ್ರ ನಿರ್ಮಾಪಕರು ಯು/ಎ ಪ್ರಮಾಣಪತ್ರ ಪಡೆಯಬಹುದಿತ್ತು. ಆದರೆ, ಆ ಬದಲಾವಣೆ ಕಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಶಾಂತ್ ನೀಲ್ ಉಲ್ಲೇಖಿಸಿದ್ದಾರೆ. ಇದೊಂದು ಕಂಪ್ಲೀಟ್​ ಆ್ಯಕ್ಷನ್​ ಎಂಟರ್​​​ಟೈನ್ಮೆಂಟ್​ ಸಿನಿಮಾವಾಗಿದ್ದು ಹೊಡೆದಾಟ, ರಕ್ತಭರಿತ ಸೀಕ್ವೆನ್ಸ್​ಗಳು ಸಾಕಷ್ಟಿದೆ.

  • " class="align-text-top noRightClick twitterSection" data="">

ಆನ್​ಲೈನ್​ನಲ್ಲಿ ಸಲಾರ್​ ಪ್ರಮೋಶನ್​ ದೊಡ್ಡ ಮಟ್ಟದಲ್ಲೇ ನಡೆಯುತ್ತಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಹೆಸರಾಂತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಸಲಾರ್​ ತಂಡದೊಂದಿಗೆ ವಿಶೇಷ ಸಂದರ್ಶನವನ್ನು ನಡೆಸಿದ್ದಾರೆ. ಸಿನಿಮಾ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ವಿಶೇಷ ಕ್ಷಣಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದೆ.

ಸಂದರ್ಶನದಲ್ಲಿ, ಎಸ್‌ಎಸ್ ರಾಜಮೌಳಿ ಅವರು ಸಲಾರ್ 'ಎ' ಪ್ರಮಾಣಪತ್ರ ಪಡೆದಿರುವ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್​​ ಅವರ ಅನಿಸಿಕೆಗಳ ಬಗ್ಗೆ ಕೇಳಿದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನಿರ್ದೇಶಕರು, "ಸಿನಿಮಾವನ್ನು 'ಎ' ಪ್ರಮಾಣಪತ್ರವನ್ನು ಪಡೆಯುವಷ್ಟು ಹಿಂಸಾತ್ಮಕವಾಗಿ ಮಾಡುವ ಉದ್ದೇಶ ಎಂದಿಗೂ ಇರಲಿಲ್ಲ" ಎಂದರು.

ಕಳೆದ 30 ವರ್ಷಗಳಿಂದ ಪ್ರೇಕ್ಷಕನಾಗಿ ತೆಲುಗು ಸಿನಿಮಾಗಳಲ್ಲಿ ತಾವು ನೋಡಿದ ಸಾಹಸ ದೃಶ್ಯಗಳನ್ನು ಮೀರುವ ಗುರಿ ಬಗ್ಗೆ ವಿವರಿಸಿದರು. ಪ್ರಶಾಂತ್ ಅವರು ತೆಲುಗು ಚಲನಚಿತ್ರಗಳಲ್ಲಿನ ಆ್ಯಕ್ಷನ್ ಮತ್ತು ಸೂಪರ್‌ ಸ್ಟಾರ್ ಪ್ರಭಾಸ್​​ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ಅದ್ಭುತ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ನೀಡುವ ಗುರಿ ಇತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಯು/ಎ ಪ್ರಮಾಣಪತ್ರವನ್ನು ಪಡೆಯಲು ಸಿಬಿಎಫ್‌ಸಿಯು ಸಿನಿಮಾದಲ್ಲಿ ಸಾಕಷ್ಟು ಸೀನ್​ಗಳ ಕಡಿತಕ್ಕೆ ವಿನಂತಿಸಿತು. ಆದರೆ ಆ ದೃಶ್ಯಗಳನ್ನು ತೆಗೆದುಹಾಕಿದರೆ, ಚಲನಚಿತ್ರದ ಕಥೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತೆ. "ನಾನು ಬಹಳ ನಿರಾಶೆಗೊಂಡಿದ್ದೇನೆ. ಸುಮಾರು 15-20 ನಿಮಿಷಗಳ ಕಾಲ ಶಾಂತವಾಗಿ ಕುಳಿತೆ. ಏಕೆಂದರೆ ನಾನು ಹಿಂಸೆಯೊಂದಿಗೆ ಕೆಟ್ಟ ಅಥವಾ ಸಂವೇದನಾರಹಿತ ಸಿನಿಮಾವನ್ನು ಮಾಡಿಲ್ಲ ಎಂಬುದು ನನಗೆ ತಿಳಿದಿದೆ. ಸಲಾರ್‌ಗೆ ಅಗತ್ಯವಿರುವ ಹಿಂಸೆಯನ್ನು ಸೇರ್ಪಡಿಸಲಾಗಿದೆ" ಎಂದು ತಿಳಿಸಿದರು.

ಸಲಾರ್‌ನಲ್ಲಿನ ಹಿಂಸಾತ್ಮಕ ದೃಶ್ಯಗಳ ಬಗ್ಗೆ ಮಾತನಾಡುತ್ತಾ, ನಿರೂಪಣೆ ಮತ್ತು ಅದರ ಪ್ರಾಮುಖ್ಯತೆಯನ್ನು ನಿರ್ದೇಶಕರು ಪ್ರತಿಪಾದಿಸಿದರು. "ಈ ಸಿನಿಮಾ ಸ್ನೇಹ ಮತ್ತು ತ್ಯಾಗದ ಬಗ್ಗೆ" ಇದೆ. ಪ್ರಾಪಂಚಿಕ ವ್ಯವಹಾರಗಳಲ್ಲಿ ಆಸಕ್ತಿಯಿಲ್ಲದ ವ್ಯಕ್ತಿ ಪ್ರಭಾಸ್​, ಆದರೆ ಪರಿಸ್ಥಿತಿ ಅವನ್ನು ಬದಲಾಯಿಸಿತು ಎಂದು ಪ್ರಭಾಸ್​ ಪಾತ್ರದ ಬಗ್ಗೆ ಹೇಳಿದರು.

ಇದನ್ನೂ ಓದಿ: ಸಲಾರ್​ ಸೆಟ್​​​ನ 'worst thing' ಹಂಚಿಕೊಂಡ ಪೃಥ್ವಿರಾಜ್

ಸಲಾರ್‌ಗೆ 'ಎ' ಪ್ರಮಾಣಪತ್ರ ಸಿಕ್ಕಾಗ ಪ್ರಶಾಂತ್ ತಕ್ಷಣವೇ ಪ್ರಭಾಸ್ ಅವರನ್ನು ಸಂಪರ್ಕಿಸಿದರು. ಪ್ರಭಾಸ್​ ತಕ್ಷಣವೇ ಪ್ರತಿಕ್ರಿಯಿಸಿ, "ತೆಗೆದುಕೊಳ್ಳಿ" ಎಂದು ತಿಳಿಸಿದರು. ಸಂದರ್ಶನದಲ್ಲಿ, ಈ ಕಥೆಗೆ ಅಂತಹ ಆ್ಯಕ್ಷನ್ ಸೀಕ್ವೆನ್ಸ್‌ಗಳ ಅಗತ್ಯವಿದೆ ಎಂಬುದನ್ನು ನಿರ್ದೇಶಕರು ಒತ್ತಿ ಹೇಳಿದರು. ಸಿಬಿಎಫ್​ಸಿಯ ಮಾರ್ಗಸೂಚಿಗಳನ್ನು ಅರ್ಥಮಾಡಿಕೊಂಡಿರುವುದಾಗಿ ಒಪ್ಪಿಕೊಂಡರು. ಏಕೆಂದರೆ ಸಲಾರ್‌ನಂತಹ ಸಿನಿಮಾ ತಮ್ಮ ಸ್ವಂತ ಮಕ್ಕಳಿಗೆ ಸೂಕ್ತವಾಗಿದೆಯೇ? ಎಂಬ ವಿಚಾರವನ್ನು ನಿರ್ದೇಶಕರು ಪರಿಗಣಿಸಿದಿದ್ದಾರೆ. ಮಾತು ಮುಂದುವರಿಸಿದ ಪ್ರಶಾಂತ್, ತಮ್ಮ ಗುರಿ ಹಿಂಸಾತ್ಮಕ ಸಿನಿಮಾ ಮಾಡುವುದಲ್ಲ. ಆದರೆ ಡ್ರಾಮ್ಯಾಟಿಕ್​​ ಸ್ಟೋರಿ ನಿರೂಪಿಸುವಾಗ ಹಿಂಸಾತ್ಮಕ ವಿಷಯಗಳು ಒಳಗೊಳ್ಳುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ: Salaar Vs Dunki: ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ ಭರ್ಜರಿ ಪೈಪೋಟಿ; ಯಾವ ಸಿನಿಮಾ ಮುಂದಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.