ETV Bharat / entertainment

ದೀಪಿಕಾ ಪಡುಕೋಣೆಗೆ ಬರ್ತ್​ಡೇ ಶುಭ ಕೋರಿದ ಪ್ರಭಾಸ್​ - Deepika Padukone birthday

ನಟಿ ದೀಪಿಕಾ ಪಡುಕೋಣೆ ಅವರಿಗಿಂದು ಜನ್ಮದಿನದ ಸಂಭ್ರಮ. ಸಲಾರ್ ನಟ ಪ್ರಭಾಸ್​ ಕೂಡಾ ಶುಭ ಕೋರಿದ್ದಾರೆ.

Prabhas wishes Deepika Padukone on her birthday
ದೀಪಿಕಾ ಪಡುಕೋಣೆ ಬರ್ತ್​ಡೇಗೆ ಪ್ರಭಾಸ್​​ ವಿಶ್​​
author img

By ETV Bharat Karnataka Team

Published : Jan 5, 2024, 2:46 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 38ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟಿಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರು ಹಾಗು ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸಲಾರ್​ ಸಿನಿಮಾ ಹೀರೋ ಪ್ರಭಾಸ್​​ ಕೂಡ ವಿಶೇಷವಾಗಿ ಬರ್ತ್‌ಡೇ ವಿಶ್ ಮಾಡಿದ್ದಾರೆ. ​

Prabhas wishes Deepika Padukone on her birthday
ಪ್ರಭಾಸ್​ ಸ್ಪೆಷಲ್​ ವಿಶ್​​

ದೀಪಿಕಾರನ್ನು 'ಅತ್ಯಂತ ಸುಂದರ ನಟಿ' ಎಂದು ಪ್ರಭಾಸ್ ಉಲ್ಲೇಖಿಸಿದ್ದಾರೆ. ಭವಿಷ್ಯದ ದಿನಗಳು ಅದ್ಭುತವಾಗಿರಲಿ ಎಂದು ಹಾರೈಸಿದ್ದಾರೆ. ಇಬ್ಬರು 'ಕಲ್ಕಿ 2898 ಎಡಿ' ಎಂಬ ಸೈನ್ಸ್ ಫಿಕ್ಷನ್​ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾ ಇದೇ ವರ್ಷ ತೆರೆಕಾಣಲಿದೆ. ಅಮಿತಾಭ್​​ ಬಚ್ಚನ್, ದಿಶಾ ಪಟಾನಿ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರತಿಷ್ಟಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ಕಾರ್ಯಕ್ರಮದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ: ಗೆಳೆಯನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್

ಆರಂಭದಲ್ಲಿ ಪ್ರಾಜೆಕ್ಟ್ ಕೆ ಎಂದು ಈ ಸಿನಿಮಾಗೆ ಹೆಸರಿಡಲಾಗಿತ್ತು. ಪ್ರಪಂಚಾದ್ಯಂತ ಪ್ರಭಾಸ್​, ದೀಪಿಕಾ ಅಭಿಮಾನಿಗಳು ಹೊಸ ಸಿನಿಮಾ ಕುರಿತು ಸಾಕಷ್ಟು ಉತ್ಸುಕರಾಗಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.

ಇದನ್ನೂ ಓದಿ: 'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್​ ಮನವಿ

ಪ್ರಭಾಸ್ ಪ್ರಸ್ತುತ 'ಸಲಾರ್' ಸಿನಿಮಾದ ಯಶಸ್ಸಿ ಖುಷಿಯಲ್ಲಿದ್ದಾರೆ. ಬರ್ತ್​​ಡೇ ಗರ್ಲ್ ದೀಪಿಕಾ ಪಡುಕೋಣೆ ಅವರ ಫೈಟರ್ ಬಿಡುಗಡೆಗೆ ಸಜ್ಜಾಗಿದೆ. ಹೃತಿಕ್ ರೋಷನ್ ಜೊತೆ ಇದೇ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿರುವ 'ಫೈಟರ್' ಈ ತಿಂಗಳಾಂತ್ಯದಲ್ಲಿ ತೆರೆಗಪ್ಪಳಿಸಲಿದೆ. ಅಮಿತಾಭ್ ಬಚ್ಚನ್ ಜೊತೆಗೆ 'ದಿ ಇಂಟರ್ನ್' ಪ್ರಾಜೆಕ್ಟ್​ಗೂ ದೀಪಿಕಾ ಸಹಿ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.