ETV Bharat / entertainment

'ಸಲಾರ್ ಫ್ಯಾನ್ ಆರ್ಮಿ' ಪರಿಚಯಿಸಿದ ತಂಡ: ಮತ್ತೆ ಶಾರುಖ್​ ಸಿನಿಮಾ ಜೊತೆ ಹೊಂಬಾಳೆ ಫಿಲ್ಮ್ಸ್ ಪೈಪೋಟಿ - Hombale Films

ಪ್ರಭಾಸ್ ಮುಖ್ಯಭೂಮಿಕೆಯ ಸಲಾರ್ ಸಿನಿಮಾ ಪ್ರಚಾರ ಪ್ರಾರಂಭಗೊಂಡಿದೆ.

Prabhas starrer Salaar
ಪ್ರಭಾಸ್ ಸಲಾರ್ ಸಿನಿಮಾ ಪ್ರಚಾರ
author img

By ETV Bharat Karnataka Team

Published : Nov 26, 2023, 8:15 PM IST

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''ಸಲಾರ್''. ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ. ಕಳೆದ ಕೆಲ ಸಮಯಗಳಿಂದ ಸಿನಿಮಾ ಯಶಸ್ಸಿನ ವಿಚಾರದಲ್ಲಿ ಕೊಂಚ ಹಿನ್ನಡೆ ಕಂಡಿರುವ ಪ್ರಭಾಸ್​​ ವೃತ್ತಿಜೀವನದಲ್ಲಿ ಸಲಾರ್​ ಮಹತ್ವದ ಪಾತ್ರ ನಿರ್ವಹಿಸಲಿದೆ. ಕೆಜಿಎಫ್​ ಖ್ಯಾತಿಯ ನಿರ್ಮಾಪಕರು, ನಿರ್ದೇಶಕರು ಈ ತಂಡದಲ್ಲಿರುವ ಹಿನ್ನೆಲೆ ಪ್ರೇಕ್ಷಕರ ನಿರಿಕ್ಷೆ ಮತ್ತಷ್ಟು ಹೆಚ್ಚಾಗಿದೆ. ಬಹುನಿರೀಕ್ಷಿತ ಸಲಾರ್ ಸಿನಿಮಾದ ಟ್ರೇಲರ್ ಇನ್ನಷ್ಟೇ ಬಹಿರಂಗವಾಗಬೇಕಿದೆ. ಆದ್ರೀಗ ನಿರ್ಮಾಪಕರು ಪ್ರಭಾಸ್ ಅವರ ಅಭಿಮಾನಿಗಳೊಂದಿಗೆ ರೋಮಾಂಚನಕಾರಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

'ಸಲಾರ್‌' ಸಿನಿಮಾ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಪ್ರಚಾರ ಪ್ರಾರಂಭಿಸಿದೆ. 'ಸಲಾರ್ ಫ್ಯಾನ್ ಆರ್ಮಿ'ಗೆ ಸೇರಲು ಅಭಿಮಾನಿಗಳಿಗೆ ಕರೆ ನೀಡಿದೆ. ಸೋಷಿಯಲ್​ ಮೀಡಿಯಾ ಪೋಸ್ಟ್ ಪೋಸ್ಟ್ ಮೂಲಕ, ಚಿತ್ರ ತಯಾರಕರು 'ಸಲಾರ್ ಫಿಲ್ಟರ್' ಅನ್ನು ಬಳಸಲು ಅಭಿಮಾನಿಗಳನ್ನು ಪ್ರೋತ್ಸಾಹಿದ್ದಾರೆ. ಸೆಲ್ಫಿ ತೆಗೆದು https://www.salaar.army ವೆಬ್‌ಸೈಟ್‌ನಲ್ಲಿ ನಿಮ್ಮ ವಿವರಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದೆ. ಇದರಲ್ಲಿ ಭಾಗವಹಿಸುವವರು ಹೊಂಬಾಳೆ ಫಿಲ್ಮ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ ಮತ್ತು ಸಲಾರ್ ಮರ್ಚೈಂಡೈಸ್ ಮೇಲೆ ಡಿಸ್ಕೌಂಟ್ ಸಹ ಪಡೆಯಲಿದ್ದಾರೆ. ಇದರಲ್ಲಿ ಭಾಗವಹಿಸುವ ಮೊದಲ 100 ಅಭಿಮಾನಿಗಳಿಗೆ ಮಾತ್ರ ಈ ಪ್ರಯೋಜನಗಳು ಸಿಗಲಿವೆ.

ಕೆಜಿಎಫ್‌ ಸರಣಿ ಸಿನಿಮಾಗಳಿಗೆ ಹೆಸರುವಾಸಿಯಾದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಒಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಅದ್ಭುತ ಸಿನಿಮೀಯ ಅನುಭವ ನೀಡಲು ಚಿತ್ರತಂಡ ಸಜ್ಜಾಗಿದೆ. ಭಾರತ, ಯುರೋಪ್, ಆಫ್ರಿಕಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ ಪಂಚ ಭಾಷೆಗಳಲ್ಲಿ ತೆರೆಕಾಣಲಿದೆ. ಜುಲೈ 6 ರಂದು ಹೊಂಬಾಳೆ ಫಿಲ್ಮ್ಸ್ ಟೀಸರ್ ಅನಾವರಣಗೊಳಿಸಿತ್ತು. ಅದ್ಭುತ ಆ್ಯಕ್ಷನ್​ ದೃಶ್ಯಗಳನ್ನು ಸಿನಿಮಾ ಒಳಗೊಂಡಿರಲಿದೆ ಎಂದು ಟೀಸರ್​​ ಸುಳಿವು ನೀಡಿದೆ. ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕಂಬಳ: ಚಿನ್ನದ ಪದಕ ಪಡೆದ 'ಕಾಂತಾರ ಕೋಣಗಳು'

ಡಿಸೆಂಬರ್ 22ರಂದು ಶಾರುಖ್ ಖಾನ್ ಅವರ ಡಂಕಿ ಸಿನಿಮಾ ಜೊತೆ ಸಲಾರ್ ತೆರೆಗಪ್ಪಳಿಸಲು ಸಿದ್ಧವಾಗಿದೆ. ಯಶ್ ಅಭಿನಯದ ''ಕೆಜಿಎಫ್: ಅಧ್ಯಾಯ 1'' ಮತ್ತು ಶಾರುಖ್ ಅವರ ''ಝೀರೋ'' 2018ರ ಡಿಸೆಂಬರ್​ 21ರಂದು ತೆರೆಕಂಡಿತ್ತು. ಶಾರುಖ್ ಖಾನ್ ಚಿತ್ರದೊಂದಿಗೆ ಹೊಂಬಾಳೆ ಫಿಲ್ಮ್ಸ್ ಎರಡನೇ ಬಾರಿಗೆ ಬಾಕ್ಸ್​ ಆಫೀಸ್​ ಪೈಪೋಟಿ ನಡೆಸಲಿದೆ. ಎರಡೂ ಚಿತ್ರಗಳು ಮುಂದಿನ ಡಿಸೆಂಬರ್ 22ರಂದು ತೆರೆಕಾಣಲಿವೆ.

ಇದನ್ನೂ ಓದಿ: ತಮನ್ನಾ ಭಾಟಿಯಾ ಗೆಳೆಯನಿಗೆ ಎದುರಾದ ಮದುವೆ ಪ್ರಶ್ನೆ: ವಿಜಯ್​ ವರ್ಮಾ ಉತ್ತರವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.