ETV Bharat / entertainment

'ಸಲಾರ್​' ರಿಲೀಸ್​ ಟ್ರೇಲರ್​ ಔಟ್​​: ಮಾಸ್​ ಲುಕ್​ನಲ್ಲಿ ಅಬ್ಬರಿಸಿದ ಪ್ರಭಾಸ್​, ಹೆಚ್ಚಿದ ನಿರೀಕ್ಷೆ - ಈಟಿವಿ ಭಾರತ ಕನ್ನಡ

Salaar release trailer: ಪ್ರಶಾಂತ್​ ನೀಲ್​ ನಿರ್ದೇಶನದ 'ಸಲಾರ್​' ಚಿತ್ರದ ಮತ್ತೊಂದು ಟ್ರೇಲರ್​ ಬಿಡುಗಡೆಯಾಗಿದೆ.

prabhas-starrer-salaar-movie-release-trailer-out
'ಸಲಾರ್​' ರಿಲೀಸ್​ ಟ್ರೇಲರ್​ ಔಟ್​​: ಮಾಸ್​ ಲುಕ್​ನಲ್ಲಿ ಅಬ್ಬರಿಸಿದ ಪ್ರಭಾಸ್​, ಹೆಚ್ಚಿದ ನಿರೀಕ್ಷೆ
author img

By ETV Bharat Karnataka Team

Published : Dec 18, 2023, 4:19 PM IST

Updated : Dec 18, 2023, 5:01 PM IST

'ಕೆಜಿಎಫ್'​ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಡಿಸೆಂಬರ್ 22 ರಂದು ತೆರೆ ಕಾಣಲಿದೆ. ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಪ್ರಚಾರ ಕಾರ್ಯಗಳು ಚುರುಕುಗೊಂಡಿವೆ. ಅದರಂತೆ ಇದೀಗ ಬಹುನಿರೀಕ್ಷಿತ ಸಿನಿಮಾದ ಮತ್ತೊಂದು ಟ್ರೇಲರ್​ ಅನಾವರಣಗೊಂಡಿದೆ. 'ಸಲಾರ್​ ರಿಲೀಸ್ ಟ್ರೇಲರ್​' ಎಂಬ ಶೀರ್ಷಿಕೆಯೊಂದಿಗೆ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಆ್ಯಕ್ಷನ್​ ಅವತಾರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಬ್ಬರಿಸಿದ್ದಾರೆ.

ಬಿಡುಗಡೆಯಾದ ಟ್ರೇಲರ್​ನಲ್ಲಿ ನಾಯಕರಾದ ಪ್ರಭಾಸ್​ ಮತ್ತು ಪೃಥ್ವಿರಾಜ್​ ಅವರನ್ನು ಸಂಪೂರ್ಣವಾಗಿ ತೋರಿಸಲಾಗಿದೆ. ಮೊದಲ ಟ್ರೇಲರ್​ಗಿಂತ ಹೆಚ್ಚಿನ ಆ್ಯಕ್ಷನ್​ ದೃಶ್ಯಗಳೊಂದಿಗೆ ತೋರಿಸಲಾಗಿದೆ. ಪ್ರಭಾಸ್​ ಅವರ ಡೈಲಾಗ್​ಗಳಂತೂ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ನಾಯಕಿ ಶ್ರುತಿ ಹಾಸನ್​ ಅವರನ್ನು ಕೂಡ ಟ್ರೇಲರ್​ನಲ್ಲಿ ತೋರಿಸಲಾಗಿದೆ. ಸಿನಿಮಾದ ಫೈನಲ್​ ಟಚ್​ ಮುಗಿಯುತ್ತಿದ್ದಂತೆ ಟಾಲಿವುಡ್​ ರೆಬಲ್​ ಸ್ಟಾರ್​ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ ಮತ್ತೊಂದು ಬ್ಲಾಕ್​ಬಸ್ಟರ್​ಗೆ ತಯಾರಾಗಿ ನಿಂತಿದೆ.

  • " class="align-text-top noRightClick twitterSection" data="">

ಮತ್ತೊಂದೆಡೆ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಲಿರುವ ಸಲಾರ್​ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಚಿತ್ರತಂಡ ಅಭಿಮಾನಿಗಳ ಕಾತರವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡಿದೆ. ಅದಕ್ಕಾಗಿಯೇ ಬಿಡುಗಡೆಗೆ ಇನ್ನೇನು ದಿನಗಣನೆ ಇರುವಾಗಲೇ ಟ್ರೇಲರ್​ ಅನ್ನು ಕೂಡ ಬಿಡುಗಡೆಗೊಳಿಸಿದೆ. ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ನಟ ಪೃಥ್ವಿರಾಜ್​ ಸುಕುಮಾರನ್​ ಅವರು, ಎಲ್ಲ ಪಾತ್ರದ ಡೈನಾಮಿಕ್ಸ್​ ಅದ್ಭುತವಾಗಿರುತ್ತದೆ. ಸಲಾರ್​ನಲ್ಲಿ ಅದ್ಧೂರಿ ಸಾಹಸ ದೃಶ್ಯಗಳಿವೆ ಎಂದಿದ್ದಾರೆ.

ಮುಂಬೈನಲ್ಲಿ ಪ್ರಭಾಸ್​ ಕಟೌಟ್​​: 'ಸಲಾರ್​' ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಭಾಸ್​ ಅವರ 120 ಅಡಿ ಬೃಹತ್​ ಕಟೌಟ್​ ಅನ್ನು ಮುಂಬೈನಲ್ಲಿ ಹಾಕಲಾಗಿದೆ. ಥಾಣೆಯ ಆರ್​ ಮಾಲ್​ ಎದುರು ಹಾಕಲಾಗಿರುವ ಈ 120 ಅಡಿ ಬೃಹತ್​ ಕಟೌಟ್​ ಅಲ್ಲಿನ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಕಟೌಟ್​ಗೆ ಸಂಬಂಧಿಸಿದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದರ ಆಧಾರದ ಮೇಲೆ ಡಾರ್ಲಿಂಗ್​ ಪ್ರಭಾಸ್​ಗೆ ಇರೋ ರೇಂಜ್​ ಎಷ್ಟು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕೆಜಿಎಫ್​, ಕಾಂತಾರ ಮುಂತಾದ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ 'ಸಲಾರ್​' ಸಿನಿಮಾ ನಿರ್ಮಿಸಿದೆ. ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಜೊತೆಗೆ ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​, ಮೀನಾಕ್ಷಿ ಚೌಧರಿ, ಈಶ್ವರಿ ರಾವ್​, ಶರಣ್​ ಶಕ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸೆಂಬರ್​ 22ರಂದು ಬಿಡುಗಡೆಯಾಗಲಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವುದು ಖಚಿತ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಅಡ್ವಾನ್ಸ್​ ಬುಕ್ಕಿಂಗ್​ನಲ್ಲಿ 'ಡಂಕಿ' ಮೀರಿಸಿದ 'ಸಲಾರ್​'; ಭಾರತದಲ್ಲೇ ₹1.55 ಕೋಟಿ ಕಲೆಕ್ಷನ್​

Last Updated : Dec 18, 2023, 5:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.