ಟಾಲಿವುಡ್ ನಟ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಬಗ್ಗೆ ಟ್ವಟರ್‌ನಲ್ಲಿ ನಿರ್ದೇಶಕ ಓಂ ರಾವುತ್, 'ಮಂತ್ರಕ್ಕಿಂತಲೂ ಶ್ರೇಷ್ಠ ನಿನ್ನ ನಾಮ, ಜೈ ಶ್ರೀರಾಮ' ಎಂದು ಕ್ಯಾಪ್ಶನ್ ನೀಡಿದ್ದಾರೆ. ಚಿತ್ರದಲ್ಲಿ ರಾಮ ಸೀತೆಯೊಂದಿಗೆ ಲಕ್ಷ್ಮಣ ಮತ್ತು ಕುಳಿತು ಕೈ ಮುಗಿಯುತ್ತಿರುವ ಹನುಮಂತನನ್ನು ಕಾಣಬಹುದು. ಆದಿಪುರುಷ್ ಜೂನ್ 16 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.
ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ನಿರ್ವಹಿಸಿದರೆ, ಸೀತೆಯಾಗಿ ಕೃತಿ ಸನನ್ ಮತ್ತು ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರ ಮಾಡಿದ್ದಾರೆ. ಚಿತ್ರವನ್ನು ಟಿ ಸೀರಿಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ನಿರ್ಮಿಸುತ್ತಿದ್ದಾರೆ.
-
Mantron se badhke tera naam
— Om Raut (@omraut) March 30, 2023 " class="align-text-top noRightClick twitterSection" data="
Jai Shri Ram
मंत्रों से बढ़के तेरा नाम
जय श्री राम
మంత్రం కన్నా గొప్పది నీ నామం
జై శ్రీరామ్#JaiShriRam #RamNavmi#Adipurush #Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 @DevdattaGNage pic.twitter.com/QZXLOCeAOH
">Mantron se badhke tera naam
— Om Raut (@omraut) March 30, 2023
Jai Shri Ram
मंत्रों से बढ़के तेरा नाम
जय श्री राम
మంత్రం కన్నా గొప్పది నీ నామం
జై శ్రీరామ్#JaiShriRam #RamNavmi#Adipurush #Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 @DevdattaGNage pic.twitter.com/QZXLOCeAOHMantron se badhke tera naam
— Om Raut (@omraut) March 30, 2023
Jai Shri Ram
मंत्रों से बढ़के तेरा नाम
जय श्री राम
మంత్రం కన్నా గొప్పది నీ నామం
జై శ్రీరామ్#JaiShriRam #RamNavmi#Adipurush #Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 @DevdattaGNage pic.twitter.com/QZXLOCeAOH
ಟೀಕೆಗೆ ಗುರಿಯಾದ 'ಆದಿಪುರುಷ್': ಆದಿಪುರುಷ್ ಸಿನಿಮಾಗೆ ಒಂದರಂತೆ ಹಿನ್ನೆಡೆ ಆಗುತ್ತಿದೆ. ಇಂದು ಬಿಡುಗಡೆಯಾದ ಪೋಸ್ಟರ್ ಕೂಡ ಅಷ್ಟೊಂದು ಮೆಚ್ಚುಗೆ ಗಳಿಸಿಲ್ಲ. ಈ ಮೊದಲು ರಿಲೀಸ್ ಆಗಿದ್ದ ಟೀಸರ್ಗೆ ಎಲ್ಲೆಡೆಯಿಂದಲೂ ಟೀಕೆಗಳು ಕೇಳಿ ಬಂದಿದ್ದವು. ಚಿತ್ರಕ್ಕೆ ನೂರಾರು ಕೋಟಿ ಹಣ ಸುರಿಯಲಾಗಿದ್ದರೂ, ಆದಿಪುರುಷ್ ಮೇಲೆ ಪ್ರೇಕ್ಷಕರಿಗಿದ್ದ ನಿರೀಕ್ಷೆ ಸುಳ್ಳಾಗಿತ್ತು. ಹನುಮಂತನ ವೇಷ ಭೂಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ರಾಮಾಯಣದಲ್ಲಿನ ಪಾತ್ರಧಾರಿಗಳನ್ನು ಬಿಂಬಿಸಲಾಗಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಡಾಲಿ ಅಭಿನಯದ 'ಗುರುದೇವ್ ಹೊಯ್ಸಳ' ಬಿಡುಗಡೆ: ಶುಭ ಕೋರಿದ ರಶ್ಮಿಕಾ ಮಂದಣ್ಣ
ಈ ಕಾರಣಕ್ಕಾಗಿ ಆದಿಪುರುಷ್ ಸಿನಿಮಾದ ಮೇಲೆ ವಕೀಲ ರಾಜ್ ಗೌರವ್ ಅವರು ದೆಹಲಿ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಓಂ ರಾವುತ್ ವಿರುದ್ಧ ಅರ್ಜಿ ಸಲ್ಲಿಸಿ, ಸಿನಿಮಾ ಬಿಡುಗಡೆ ಮುಂದೂಡುವಂತೆ ಕೋರಿದ್ದರು. ಮಾತ್ರವಲ್ಲದೇ 2021ರಲ್ಲಿ ‘ಆದಿಪುರುಷ್' ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಸೆಟ್‌ನಲ್ಲಿ ಇರಲಿಲ್ಲ. ಬದಲಾಗಿ ನಿರ್ದೇಶಕ ಓಂ ರಾವುತ್ ಮತ್ತು ಇತರ ಕೆಲವರು ಮಾತ್ರ ಹಾಜರಿದ್ದರು. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರಲಿಲ್ಲ. ಇಷ್ಟೆಲ್ಲಾ ಅಡೆತಡೆಗಳಿರುವ ಆದಿಪುರುಷ್ ಸಿನಿಮಾ ನಿಗದಿತ ದಿನಾಂಕಕ್ಕೆ ಥಿಯೇಟರ್‌ಗೆ ಬರಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ: ಪೊನ್ನಿಯನ್ ಸೆಲ್ವಂ-2 ಸಿನಿಮಾ ಟ್ರೇಲರ್ ರಿಲೀಸ್: ರಾಣಿಯರಾಗಿ ಮಿಂಚಿದ ಐಶ್ವರ್ಯಾ ರೈ, ತ್ರಿಶಾ