ETV Bharat / entertainment

ನಾಳೆ ಸಲಾರ್​ ಟ್ರೇಲರ್ ರಿಲೀಸ್: ಪ್ರಶಾಂತ್ ನೀಲ್, ಪ್ರಭಾಸ್​ ಫೋಟೋಗೆ ಕ್ಯಾಪ್ಷನ್​ ಕೊಟ್ಟು ಫ್ರೀ ಟಿಕೆಟ್ ಪಡೆಯಿರಿ - ವಿಜಯ್ ಕಿರಗಂದೂರ್

ನಾಳೆ ಸಂಜೆ 7:19ಕ್ಕೆ ಬಹುನಿರೀಕ್ಷಿತ ಸಲಾರ್ ಟ್ರೇಲರ್ ಅನಾವರಣಗೊಳ್ಳಲಿದೆ.

Salaar trailer unveiling tomorrow
ನಾಳೆ ಸಲಾರ್ ಟ್ರೇಲರ್ ಅನಾವರಣ
author img

By ETV Bharat Karnataka Team

Published : Nov 30, 2023, 4:20 PM IST

ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲು ಸಜ್ಜಾಗಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಸಲಾರ್'. ಕೆಜಿಎಫ್​ ಖ್ಯಾತಿಯ ನಿರ್ಮಾಪಕರು, ನಿರ್ದೇಶಕರು ಮತ್ತು ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಕಾಂಬಿನೇಶನ್​ನ ಪ್ರಾಜೆಕ್ಟ್​​ ಆದ ಹಿನ್ನೆಲೆ, ಸಿನಿಮಾ ಮೇಲೆ ಸಿನಿಪ್ರಿಯರ ನಿರೀಕ್ಷೆ ಶಿಖರದಷ್ಟಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಮಾಸ್ ಪೋಸ್ಟರ್‌ಗಳಿಗೆ ಮನಸೋತಿರುವ ಅಭಿಮಾನಿಗಳು ಟ್ರೇಲರ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷಿತ ಆ್ಯಕ್ಷನ್ - ಪ್ಯಾಕ್ಡ್ ಟ್ರೇಲರ್ ನಾಳೆ ಸಂಜೆ 7:19ಕ್ಕೆ ಅನಾವರಣಗೊಳ್ಳಲಿದೆ.

ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಗೂ ಮುನ್ನ ಹೊಂಬಾಳೆ ಫಿಲ್ಮ್ಸ್ ಆ್ಯಕ್ಷನ್ - ಪ್ಯಾಕ್ಡ್ ಚಿತ್ರದ ತೆರೆಮರೆಯ ಫೋಟೋ ಹಂಚಿಕೊಂಡಿದೆ. ಇದು ಸಲಾರ್ ಸೆಟ್‌ ಫೋಟೋ ಆಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಾಯಕ ನಟ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಥ್ರಿಲ್ಲಿಂಗ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾದ ಟ್ರೇಲರ್​​ ನಾಳೆ ಬಿಡುಗಡೆ ಆಗಲಿದ್ದು, ಒಂದು ಹಂತದ ಕಾಯುವಿಕೆ ಪೂರ್ಣಗೊಳ್ಳಲಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಶನ್​ನ ಫೈನಲ್​ ಔಟ್​​ಪುಟ್ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ​​

ನಟ ನಿರ್ದೇಶಕರ ಫೋಟೋ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್​​ ಈ ಫೋಟೋಗೆ ಕ್ಯಾಪ್ಷನ್​ ಕೊಡಿ, ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮೊದಲ ದಿನದ ಶೋಗಳ ಟಿಕೆಟ್​ ಪಡೆಯಿರಿ ಎಂದು ಬರೆದುಕೊಂಡಿದೆ. ಅತ್ಯುತ್ತಮ ಕ್ಯಾಪ್ಷನ್​ ನೀಡುವ 5 ಮಂದಿಗೆ ಸಿನಿಮಾ ತೆರೆಕಂಡ ಮೊದಲ ದಿನದ ಟಿಕೆಟ್​ಗಳು ಉಚಿತವಾಗಿ ಲಭ್ಯವಾಗಲಿದೆ. ಈ ಹಿನ್ನೆಲೆ, ಅಭಿಮಾನಿಗಳು ಈ ಪೋಸ್ಟ್​​ನ ಕಾಮೆಂಟ್​​ ಬಾಕ್ಸ್​​​ನಲ್ಲಿ ಕ್ಯಾಪ್ಷನ್​​ ಕೊಡುತ್ತಿದ್ದಾರೆ.

ಇದನ್ನೂ ಓದಿ: ನಯನತಾರಾಗೆ ಐಷಾರಾಮಿ ಕಾರ್​​ ಗಿಫ್ಟ್ ಕೊಟ್ಟ ಪತಿ ವಿಘ್ನೇಶ್ ಶಿವನ್: ಬೆಲೆ ಕೇಳಿದರೆ ಹುಬ್ಬೇರಿಸ್ತೀರಾ...!

ಈಗಾಗಲೇ ಬಿಡುಗಡೆಯಾಗಿರುವ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಟ್ರೇಲರ್​ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಕಳೆದ ಐದು ವರ್ಷಗಳಲ್ಲಿ, ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಈ ಅವಧಿಯಲ್ಲಿ ಮಾಡಿದ್ದು ಎರಡೇ ಸಿನಿಮಾ. ಆದರೆ ಜನಪ್ರಿಯತೆ ಮಾತ್ರ ಅಳೆಯಲಾಗದಷ್ಟು. ರಾಕಿಂಗ್​​ ಸ್ಟಾರ್ ಯಶ್ ಜೊತೆಗಿನ ಕೆಜಿಎಫ್ 1 ಮತ್ತು ಕೆಜಿಎಫ್ 2 ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಇದೀಗ ಪ್ರಭಾಸ್ ಪ್ರಮುಖ ಪಾತ್ರದಲ್ಲಿರುವ ಸಲಾರ್ ರಿಲೀಸ್​ಗೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಅನಿಮಲ್ vs ಸ್ಯಾಮ್ ಬಹದ್ದೂರ್: ರಣ್​ಬೀರ್ ರಶ್ಮಿಕಾ ಸಿನಿಮಾ 100 ಕೋಟಿ ಕಲೆಕ್ಷನ್​ ಸಾಧ್ಯತೆ!

ಪ್ರಶಾಂತ್ ನೀಲ್ ಮತ್ತು ಪ್ರಭಾಸ್​ ಕಾಂಬಿನೇಶನ್​ನ ಚೊಚ್ಚಲ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಿನ್ನು ಆನಂದ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್ ಮತ್ತು ರಾಮಚಂದ್ರ ರಾಜು ಕೂಡ ಇದ್ದಾರೆ. ವಿಜಯ್ ಕಿರಗಂದೂರ್ ನಿರ್ಮಾಣದ ಸಲಾರ್ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಶಾರುಖ್ ಖಾನ್ ಅವರ ಡಂಕಿ ಸಿನಿಮಾ ಜೊತೆ ಪೈಪೋಟಿ ನಡೆಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.