ETV Bharat / entertainment

2019ರಲ್ಲಿ ನಟ ಪ್ರಭಾಸ್​ಗೆ 'ಅಭಿಮಾನ'ದ ಕಪಾಳಮೋಕ್ಷ; ವಿಡಿಯೋ ವೈರಲ್​ - ಸಲಾರ್

ನಟ ಪ್ರಭಾಸ್​ ತಮ್ಮ ಅಭಿಮಾನಿಯಿಂದ ಪ್ರೀತಿಯ ಕಪಾಳಮೋಕ್ಷ ಸ್ವೀಕರಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Prabhas fan slaps actor after he poses for picture with her in viral video
ನಟ ಪ್ರಭಾಸ್​ಗೆ 'ಅಭಿಮಾನ'ದ ಕಪಾಳಮೋಕ್ಷ; ವಿಡಿಯೋ ವೈರಲ್​
author img

By ETV Bharat Karnataka Team

Published : Oct 2, 2023, 7:37 PM IST

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ​ ಪ್ರಭಾಸ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. 'ಬಾಹುಬಲಿ' ಸಿನಿಮಾದಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿರುವ ಹೀರೋ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಚಿತ್ರಗಳ ಬಗ್ಗೆ ಆಗಾಗ ಅಪ್​ಡೇಟ್​ ನೀಡುವ ನಟ ಫ್ಯಾನ್ಸ್​ ಜೊತೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಇದೀಗ ತಮ್ಮ ಅಭಿಮಾನಿಯಿಂದ ಪ್ರೀತಿಯ ಕಪಾಳಮೋಕ್ಷ ಸ್ವೀಕರಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

2019ರಲ್ಲಿ ತೆಗೆಯಲಾದ ವಿಡಿಯೋ ಇದೀಗ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ. ಈ ದೃಶ್ಯದಲ್ಲಿ, ವಿಮಾನ ನಿಲ್ದಾಣದಲ್ಲಿ ಪ್ರಭಾಸ್​ ಅವರನ್ನು ಕಂಡ ಸಂತೋಷದಲ್ಲಿ ಅಭಿಮಾನಿ ಹುಡುಗಿಯೊಬ್ಬಳು ಅವರ ಬಳಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಾಳೆ. ತನ್ನ ನೆಚ್ಚಿನ ನಟನನ್ನು ಕಂಡು ಖುಷಿ ತಡೆಯಲಾಗದೇ ಪ್ರಭಾಸ್​ ಕೆನ್ನೆಗೆ 'ಅಭಿಮಾನ'ದ ಕಪಾಳಮೋಕ್ಷ ಮಾಡುತ್ತಾಳೆ. ನಗುತ್ತಾ ಆಕೆ ಅಲ್ಲಿಂದ ತೆರಳುತ್ತಾಳೆ. ಒಂದು ಸೆಕೆಂಡ್​ ಆ ಹುಡುಗಿಯ ನಡೆ ಪ್ರಭಾಸ್​ ಅವರನ್ನು ಗೊಂದಲಕ್ಕೆ ದೂಡುವಂತೆ ಮಾಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಇಂತಹದ್ದೇ ಕೆಲವು ಕಾರಣಗಳಿಗಾಗಿ ಸೆಲೆಬ್ರಿಟಿಗಳು ಎಲ್ಲಿಗೇ ಹೋದರೂ ಅಂಗರಕ್ಷಕರನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಅಭಿಮಾನ ತೀವ್ರ ರೂಪ ಪಡೆಯುವುದೂ ಉಂಟು. ಕೆಲ ಅಭಿಮಾನಿಗಳು ತಾವು ಮೆಚ್ಚುವ ಸೆಲೆಬ್ರಿಟಿಗಳಿಗೆ ಹತ್ತಿರವಾಗಲು ಪ್ರಯತ್ನಿಸುವ ವೇಳೆ ಮಿತಿ ಮೀರಿ ವರ್ತಿಸುವುದುಂಟು. ಆದರೆ ಈ ವಿಡಿಯೋ ನಟನ ಮೇಲಿರುವ ಆಕೆಯ ಅಗಾಧ ಪ್ರೀತಿಯನ್ನು ತೋರಿಸಿದೆ. ಆದರೆ ಪ್ರಭಾಸ್​ ಆಕೆಯ ವರ್ತನೆಗೆ ಗಾಬರಿಯಾದಂತೆ ಕಾಣುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಪ್ರೀತಿ, ಅಭಿಮಾನ ವ್ಯಕ್ತಪಡಿಸುವ ಭರದಲ್ಲಿ ಸೆಲೆಬ್ರಿಟಿಗಳ ಖಾಸಗಿತನಕ್ಕೆ ಅಡ್ಡಿಯಾಗಬಾರದು ಎಂಬುದನ್ನು ಫ್ಯಾನ್ಸ್​ ನೆನಪಿಟ್ಟುಕೊಳ್ಳುವುದು ಅತ್ಯಗತ್ಯ.

ಇದನ್ನೂ ಓದಿ: 'ಸಲಾರ್'​ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಂಬಾಳೆ ಫಿಲಂಸ್ ಪೋಸ್ಟ್‌ ಸ್ಪಷ್ಟನೆ ಹೀಗಿದೆ..

ಪ್ರಭಾಸ್​ ಸಿನಿಮಾಗಳು.. ಪ್ರಭಾಸ್​ 'ಸಲಾರ್'​ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​​ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಾದ ಬಳಿಕ ಕಲ್ಕಿ 2898 ಎಡಿ ಸಿನಿಮಾ ಇವರ ಕೈಯಲ್ಲಿದೆ. ಬಿಗ್​ ಸ್ಟಾರ್ ಕಾಸ್ಟ್ ಹೊಂದಿರುವ ಈ ಚಿತ್ರ ಬಿಗ್​ ಬಜೆಟ್​ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಪ್ರಭಾಸ್ ಕೊನೆಯ ಚಿತ್ರ ಆದಿಪುರುಷ್​​ ಹಿನ್ನೆಡೆ ಕಂಡಿದ್ದು, ಮುಂದಿನ ಸಿನಿಮಾ ಗೆಲ್ಲಲಿದೆ ಅನ್ನೋದು ಅಭಿಮಾನಿಗಳ ಗಟ್ಟಿ ವಿಶ್ವಾಸ. ಈ ಚಿತ್ರಗಳು ಪ್ರಭಾಸ್ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂಬ ದೃಢ ನಂಬಿಕೆಯಿದೆ.

ಆದಾಗ್ಯೂ ಈ ವರ್ಷದ ಕೊನೆಯಲ್ಲಿ ಎಸ್‌ಆರ್‌ಕೆ ಅಭಿನಯದ ಡಂಕಿ ಸಿನಿಮಾ ಕೂಡ ಬಿಡುಗಡೆ ಆಗೋ ಹಿನ್ನೆಲೆ, ಸಲಾರ್ ಎದುರಿಸಬಹುದಾದ ಸಂಭಾವ್ಯ ಸ್ಪರ್ಧೆಯನ್ನು ಅಲ್ಲಗೆಳೆಯುವಂತಿಲ್ಲ. ಎಸ್​ಆರ್​ಕೆ ಅವರ ಕೊನೆಯ ಎರಡು ಚಿತ್ರಗಳಾದ ಪಠಾಣ್​ ಮತ್ತು ಜವಾನ್​ ಎರಡೂ ಕೂಡ ಸಾವಿರ ಕೋಟಿ ರೂ. ಕ್ಲಬ್​ ಸೇರಿದ್ದು, ಮುಂದಿನ ಸಿನಿಮಾ ಕೂಡ ಸಲಾರ್​​ಗೆ ಸಖತ್​ ಫೈಟ್​ ಕೊಡಲಿದೆ. ಈ ಎರಡೂ ಸಿನಿಮಾಗಳು ಒಂದೇ ದಿನ ಅಂದ್ರೆ, ಡಿಸೆಂಬರ್ 22 ರಂದು ತೆರೆಗಪ್ಪಳಿಸಲಿವೆ.

ಇದನ್ನೂ ಓದಿ: 'ಸಲಾರ್​' ಪ್ರಶಾಂತ್​ ನೀಲ್​ ನಿರ್ದೇಶನದ 'ಉಗ್ರಂ' ರಿಮೇಕ್​; ರವಿ ಬಸ್ರೂರು ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.