ETV Bharat / entertainment

ಬಿಡುಗಡೆಗೂ ಮುನ್ನವೇ 400 ಕೋಟಿ ಬಾಚಿದ 'ಆದಿಪುರುಷ್​': ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ - ಕೃತಿ ಸನೋನ್

ಪೌರಾಣಿಕ ಚಿತ್ರ ಆದಿಪುರುಷ್​ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಿಲೀಸ್​ಗೂ ಮುನ್ನವೇ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಬಾರಿ ಸದ್ದು ಮಾಡುತ್ತಿದೆ.

ಆದಿಪುರುಷ್
adipurush
author img

By

Published : Jun 3, 2023, 1:51 PM IST

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ ಚಿತ್ರ 'ಆದಿಪುರುಷ್​' ​ಬಿಡುಗಡೆಗೆ ಸಜ್ಜಾಗಿದೆ. ಓಂ ರಾವುತ್​ ನಿರ್ದೇಶಿಸಿದ 'ಆದಿಪುರುಷ್​' ಸಿನಿಮಾ ಮಹಾಕಾವ್ಯ ರಾಮಾಯಣ ಆಧರಿಸಿದ ಪೌರಾಣಿಕ ನಾಟಕವಾಗಿದೆ. ಪ್ರಭಾಸ್​ ರಾಮನಾಗಿ, ಕೃತಿ ಸನೋನ್​ ಸೀತೆಯಾಗಿ, ಸನ್ನಿ ಸಿಂಗ್​ ಲಕ್ಷ್ಮಣನಾಗಿ ಮತ್ತು ಸೈಫ್​ ಅಲಿ ಖಾನ್​ ರಾವಣನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್​ ಜೊತೆಗೆ ಜೈ ಶ್ರೀರಾಮ್​ ಎಂಬ ಲಿರಿಕಲ್​ ಸಾಂಗ್​ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್​: ಪ್ರಭಾಸ್​ ಅಭಿನಯದ ಆದಿಪುರುಷ್​ ಸಿನಿಮಾ 500 ಕೋಟಿ ರೂಪಾಯಿಗಳ ಬೃಹತ್​ ಬಜೆಟ್​ನಲ್ಲಿ ತಯಾರಾಗಿದೆ. ಬಿಡುಗಡೆಗೂ ಮುನ್ನವೇ ಈಗಾಗಲೇ ಚಿತ್ರ 432 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಹೀಗಾಗಿ ಸಿನಿಮಾ ರಿಲೀಸ್​ಗೂ ಮುನ್ನವೇ ಶೇಕಡ 85 ರಷ್ಟು ಬಜೆಟ್​ ವಸೂಲಿ ಮಾಡಿದೆ ಎನ್ನಲಾಗಿದೆ.

ಆದಿಪುರುಷ್​ ಪ್ರೀ ರಿಲೀಸ್ ಬ್ಯುಸಿನೆಸ್: ಇದರ ಜೊತೆಗೆ ಸೌತ್ ಥಿಯೇಟ್ರಿಕಲ್ ರೈಟ್ಸ್ ಮೂಲಕ ಈ ಸಿನಿಮಾ ಸುಮಾರು 185 ಕೋಟಿ ರೂಪಾಯಿ ಪಡೆದಿದೆ. ಥಿಯೇಟರ್ ಅಲ್ಲದ ಮತ್ತು ಚಿತ್ರಮಂದಿರದ ಒಟ್ಟು ಮೊತ್ತವನ್ನು ಒಳಗೊಂಡಂತೆ, ಚಿತ್ರವು ಬಿಡುಗಡೆಗೆ ಮುನ್ನವೇ 432 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಟ್ರೇಡ್ ಅಂದಾಜಿನ ಪ್ರಕಾರ, ಈ ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಒಂದು ರೇಂಜ್‌ನಲ್ಲಿ ನಡೆಯುವುದು ಖಚಿತ. ಮೇಲಾಗಿ ಈ ಚಿತ್ರದ ಓಪನಿಂಗ್ಸ್ ಕೂಡ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ ಆದಿಪುರುಷ್​ ಬಾಲಿವುಡ್​ನಲ್ಲಿ 100 ಕೋಟಿ ರೂಪಾಯಿ ಬಾಚುವುದು ಖಚಿತ ಎನ್ನುತ್ತಾರೆ ಟ್ರೇಡ್ ಪಂಡಿತರು.

ಅಮೆರಿಕದಲ್ಲಿ 'ಆದಿಪುರುಷ್​' ಕ್ರೇಜ್: ಪೌರಾಣಿಕ ಚಿತ್ರ 'ಆದಿಪುರುಷ್​' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಎಲ್ಲವೂ ಸಿದ್ಧವಾಗುತ್ತಿದೆ. ಜೂನ್ 6 ರಂದು ತಿರುಪತಿಯಲ್ಲಿ ಈ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಅಭೂತಪೂರ್ವ ರೀತಿಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ನಿರ್ಮಾಪಕರು ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಜೊತೆಗೆ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಿರ್ಮಾಪಕರು ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ 200 ನೃತ್ಯಗಾರರು ಮತ್ತು 200 ಗಾಯಕರನ್ನು ಅಖಾಡಕ್ಕೆ ತರಲಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಟಿಕೆಟ್​ ಅತೀ ವೇಗದಲ್ಲಿ ಮಾರಾಟವಾಗುತ್ತಿದೆ. ಸಿನಿಮಾ ಉತ್ತಮ ಕಲೆಕ್ಷನ್​ ಮುಂದುವರೆಸಿದೆ.

ಇದಲ್ಲದೇ ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಜೂನ್​ 18 ರವರೆಗೆ ನಡೆಯಲಿರುವ 2023ರ ಆವೃತ್ತಿಯ ಎಸ್ಕೇಪ್​ ಫ್ರಾಂ ಟ್ರೆಬೆಕಾ ಸೆಕ್ಷನ್​ ಅಡಿ ಈ ಚಿತ್ರ ವರ್ಲ್ಡ್​​ ಪ್ರಿಮೀಯರ್​ ಕಾಣಲಿದೆ. ಚಿತ್ರವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಜೂನ್​ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಿದ್ಧಗೊಳ್ಳುತ್ತಿದೆ. ಈಗಾಗಲೇ 'ಸಾಹೋ', 'ರಾಧೇಶ್ಯಂ' ಫ್ಲಾಪ್‌ಗಳಿಂದ ಕಂಗೆಟ್ಟಿರುವ ಪ್ರಭಾಸ್‌ಗೆ 'ಆದಿಪುರುಷ' ಚಿತ್ರ ಯಾವ ರೀತಿಯ ಯಶಸ್ಸನ್ನು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಪೊಲೀಸ್​ ಪಾತ್ರದಲ್ಲಿ ನಟ ರಿಷಿ: ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ನೀನಾಸಂ ಸತೀಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.