ETV Bharat / entertainment

ಗಂಧದ ಗುಡಿ ಸಿನಿಮಾದಲ್ಲಿ ಪವರ್ ಸ್ಟಾರ್ ಕ್ಯಾಮರಾ ಕೈಚಳಕ - Gandhad Gudi movie

ಗಂಧದ ಗುಡಿ ಸಿನಿಮಾದಲ್ಲಿ ಪುನೀತ್ ರಾಜ್​​ಕುಮಾರ್ ಕ್ಯಾಮರಾ ಕೈಚಳಕ ಇದೆ. ಇದರ ಸಣ್ಣ ಮೇಕಿಂಗ್ ವಿಡಿಯೋವೊಂದು ಅನಾವರಣ ಆಗಿದೆ.

Power star camera work in Gandhad Gudi movie
ಗಂಧದ ಗುಡಿ ಸಿನಿಮಾದಲ್ಲಿ ಪವರ್ ಸ್ಟಾರ್ ಕ್ಯಾಮರಾ ಕೈಚಳಕ
author img

By

Published : Sep 27, 2022, 4:26 PM IST

ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಅಮೃತ ಘಳಿಗೆ ಸಮೀಪಿಸುತ್ತಿದೆ. ಕನ್ನಡ ಚಿತ್ರರಂಗದ ರಾಜರತ್ನ, ಪವರ್ ಸ್ಟಾರ್, ಅಪ್ಪು, ಯುವರತ್ನ ಕಂಡ ಕನಸಿನ ಪಯಣದ ಚಿತ್ರ ಗಂಧದ ಗುಡಿ. ಟೈಟಲ್, ಟೀಸರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾಗಿರುವ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ರಂದು ಬಿಡುಗಡೆ ಆಗಲಿದೆ. ಆದರೆ, ಅಪ್ಪು ನಮ್ಮೊಂದಿಲ್ಲ ಅನ್ನೋದೇ ಬಲು ಬೇಸರದ ಸಂಗತಿ.

ಈ ಗಂಧದ ಗುಡಿ ಸಿನಿಮಾ ಚಿತ್ರೀಕರಣದಲ್ಲಿ ಪುನೀತ್ ಕ್ಯಾಮಾರಾ ಕೈಚಳಕ ಇದೆ. ಇದರ ಸಣ್ಣ ಮೇಕಿಂಗ್ ವಿಡಿಯೋವೊಂದನ್ನು ಚಿತ್ರತಂಡದಿಂದ ಅನಾವರಣ ಆಗಿದೆ. ಅಪ್ಪು ಕ್ಯಾಮರಾ ಹಿಡಿದು ಚಿತ್ರೀಕರಣ ಮಾಡುತ್ತಿದ್ದಾರೆ. ಕೈಯಲ್ಲಿ ಕ್ಯಾಮರಾ ಹಿಡಿದು ಚಿತ್ರತಂಡದ ಜೊತೆ ತಮಾಷೆ ಮಾಡಿರುವ ವಿಡಿಯೋ ಇದಾಗಿದೆ.

ಗಂಧದ ಗುಡಿ ಸಿನಿಮಾದಲ್ಲಿ ಪವರ್ ಸ್ಟಾರ್ ಕ್ಯಾಮರಾ ಕೈಚಳಕ

ಪುನೀತ್ ರಾಜ್‍ಕುಮಾರ್ ವನ್ಯಜೀವಿ ಛಾಯಾಗ್ರಹಕ ಅಮೋಘ ವರ್ಷ ಜೊತೆ ಸೇರಿ ಕರುನಾಡ ಬಗ್ಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಾಜ್ಯದ ಹಲವು ಅರಣ್ಯ ಪ್ರದೇಶಗಳಿಗೆ ತೆರಳಿ ಪುನೀತ್ ರಾಜ್‍ಕುಮಾರ್ ಹಾಗೂ ಅಮೋಘ ವರ್ಷ ಈ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ.

ಇದನ್ನೂ ಓದಿ: ಯುವ ದಸರಾದಲ್ಲಿ ಅಪ್ಪು ನಮನ.. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ರಾಜರತ್ನನ ಪತ್ನಿ ಅಶ್ವಿನಿ

ಪುನೀತ್ ರಾಜ್‍ಕುಮಾರ್ ಅಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದೆ. ಈ ಹಿನ್ನೆಲೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್​ ಅಕ್ಟೋಬರ್ 28ಕ್ಕೆ ಗಂಧದ ಗುಡಿಯನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.