ETV Bharat / entertainment

'ವೀಕೆಂಡ್​​ ವಿತ್​ ರಮೇಶ್ ಶೋ'ಗೆ ಕಾತರ: ಮೋಹಕತಾರೆ ರಮ್ಯಾ ಬಗ್ಗೆ ಪೂಜಾ ಗಾಂಧಿ ಗುಣಗಾನ - Weekend with Ramesh

'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಮೋಹಕತಾರೆ ರಮ್ಯಾ ಭಾಗಿಯಾಗುತ್ತಿದ್ದು, ಅವರ ಬಗ್ಗೆ ಪೂಜಾ ಗಾಂಧಿ ಗುಣಗಾನ ಮಾಡಿದ್ದಾರೆ.

pooja gandhi praises actress ramya
ರಮ್ಯಾ ಬಗ್ಗೆ ಪೂಜಾ ಗಾಂಧಿ ಗುಣಗಾನ
author img

By

Published : Mar 25, 2023, 6:12 PM IST

ನಟಿಸಿದ ಚೊಚ್ಚಲ ಚಿತ್ರದಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ ನಟಿ ಪೂಜಾ ಗಾಂಧಿ. 2006ರ ಡಿಸೆಂಬರ್​ನಲ್ಲಿ ತೆರೆಕಂಡ ಮುಂಗಾರು ಮಳೆ ಸೂಪರ್​ ಹಿಟ್​ ಆಗಿ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿತ್ತು. ಗೋಲ್ಡನ್​ ಸ್ಟಾರ್​ ಗಣೇಶ್​​ ಅವರಿಗೂ ಕೂಡ ಈ ಚೊಚ್ಚಲ ಚಿತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಅದಾದ ಬಳಿಕ ಕೆಲ ಹಿಟ್​ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಸದ್ಯ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಮಳೆ ಹುಡುಗಿ ಎಂದೇ ಖ್ಯಾತರಾಗಿದ್ದ ಅವರು ಸದ್ಯ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆದ್ರೆ ಇತ್ತೀಚೆಗಷ್ಟೇ ಕನ್ನಡ ಬರಹದ ಮೂಲಕ ಗಮನ ಸೆಳೆದಿದ್ದ ಅವರು ಇದೀಗ ನಟಿ ರಮ್ಯಾ ಬಗ್ಗೆ ಗುಣಗಾನ ಮಾಡಿ ಸುದ್ದಿಯಲ್ಲಿದ್ದಾರೆ.

ನಟ ರಮೇಶ್ ಅರವಿಂದ್ ನಿರೂಪಣೆಯ 'ವೀಕೆಂಡ್ ವಿತ್ ರಮೇಶ್' ಶೋ ಮತ್ತೆ ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರಸಾರವಾಗಲಿದೆ. ಮೋಹಕತಾರೆ ರಮ್ಯಾ ಅವರ ಸಾಧನೆಯ ಕಥೆ ಮೊದಲ ಎಪಿಸೋಡ್​​. ನಟಿ ರಮ್ಯಾ ಕಥೆ ಹೇಳಲು ರಮೇಶ್‌ ಅರವಿಂದ್‌ ರೆಡಿಯಾಗಿದ್ದಾರೆ. ಮೊದಲ ಅತಿಥಿಯಾಗಿ ರಮ್ಯಾ ಭಾಗಿಯಾಗಲಿದ್ದು, ಈ ಬಗ್ಗೆ ಪೂಜಾ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟಿ ಪೂಜಾ ಗಾಂಧಿ ಬರಹ: ವೀಕೆಂಡ್​​ ವಿತ್​ ರಮೇಶ್​​ ಎಂಬ ಶೀರ್ಷಿಕೆ ಇರುವ ಬರಹದಲ್ಲಿ, ''ರಮೇಶ್​ ಸರ್, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿ ಜುಗಲ್​ ಬಂದಿ ನೋಡೋಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತುರದಿಂದ ಕಾಯುತ್ತಿದ್ದೆನೆ. ನನಗೆ ಏಕೆ ವೈಯಕ್ತಿಕವಾಗಿ ಇಷ್ಟ ಆಗ್ತಾರೆ ಅಂದ್ರೆ, ಅವರು ನಟಿಯರ ಪರ ನಿಲ್ಲುತ್ತಾರೆ. ಆಕೆಯಲ್ಲಿನ ಆ ಗುಣ ನನಗೆ ಬಹಳ ಇಷ್ಟ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ, ನಾನು ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ ಅವರು 'ಪೂಜಾ ಗಾಂಧಿ ಉತ್ತಮ ಪ್ರಯತ್ನ' ಎಂದು ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್​ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರ ಮಟ್ಟದ ಕನ್ನಡ ಸಿನಿಮಾಗಳು ಮೂಡಿ ಬರಲಿ'' ಎಂದು ಕನ್ನಡದಲ್ಲಿ ಪತ್ರ ಬರೆದಿದ್ದಾರೆ.

ಕನ್ನಡ ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದ 'ವೀಕೆಂಡ್ ವಿತ್ ರಮೇಶ್ ಸೀಸನ್ - 5' ಇಂದು ರಾತ್ರಿ 9ಕ್ಕೆ ಮೊದಲ ಎಪಿಸೋಡ್​ ಪ್ರಸಾರ ಆಗಲಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ಈ ಜನಪ್ರಿಯ ಕಾರ್ಯಕ್ರಮ ಪ್ರಸಾರವಾಗಲಿದೆ. ಸ್ಯಾಂಡಲ್​ವುಡ್​ ನಟಿ ರಮ್ಯಾ ಈ ಶೋನ ಮೊದಲ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಬಹಳ ಕಾತರರಾಗಿದ್ದಾರೆ.

ಇದನ್ನೂ ಓದಿ: ಮತ್ತೆ ಬರ್ತಿದೆ 'ವೀಕೆಂಡ್ ವಿತ್ ರಮೇಶ್' ಶೋ! ಮೋಹಕತಾರೆ ರಮ್ಯಾ ಮೊದಲ ಅತಿಥಿ

''ಈ ಬಾರಿಯ 'ವೀಕೆಂಡ್​​ ವಿತ್​ ರಮೇಶ್ ಶೋ'ಗೆ ರಮ್ಯಾ ಅವರು ಮೊದಲ ಅತಿಥಿಯಾಗಿ ಆಗಮಿಸಲಿದ್ದಾರೆ. ನಂತರ ನಟ, ನೃತ್ಯ ನಿರ್ದೇಶಕ ಪ್ರಭುದೇವ ಪಾಲ್ಗೊಳ್ಳಲಿದ್ದಾರೆ. ಪ್ರಭುದೇವ ಅವರೊಂದಿಗೂ ಸಂಚಿಕೆ ಚಿತ್ರೀಕರಿಸಿದ್ದೇವೆ. ಕೆಲ ರಾಜಕಾರಣಿಗಳೂ ಸೇರಿದಂತೆ ಅನೇಕ ಸಿನಿ ತಾರೆಯರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ಮಾತುಕತೆ ನಡೆಸುತ್ತಿದ್ದೇವೆ ಎಂದು ಜೀ ಚಾನಲ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ಕೆಲ ದಿನಗಳ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಜೈಲಿನಿಂದಲೇ ಜಾಕ್ವೆಲಿನ್​​ಗೆ ಪ್ರೇಮ ಪತ್ರ ಬರೆದ ವಂಚಕ ಸುಕೇಶ್ ಚಂದ್ರಶೇಖರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.