ಪೆಟ್ರೋಮ್ಯಾಕ್ಸ್ - ಡಬಲ್ ಮೀನಿಂಗ್ ಡೈಲಾಗ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ ಸಿನಿಮಾ. ಟ್ರೇಲರ್ ಮೂಲಕ ಭಾರಿ ಸದ್ದು ಮಾಡಿದ್ದ ಮತ್ತು ಸತೀಶ್ ನೀನಾಸಂ, ಹರಿಪ್ರಿಯಾ ನಟನೆಯ ಸಿನಿಮಾ ಇಂದು 200ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿದೆ. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ಮುಖ್ಯ ಚಿತ್ರಮಂದಿರ ಅನುಪಮ ಚಿತ್ರಮಂದಿರದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾವನ್ನು ಚಿತ್ರ ತಂಡ ಮೊದಲ ಶೋ ನೀಡಿ ಖುಷಿ ಪಟ್ಟಿತು. ನಟ ಸತೀಶ್ ನೀನಾಸಂ, ನಿರ್ದೇಶಕ ವಿಜಯ ಪ್ರಸಾದ್, ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರೋ ವಿಜಯಲಕ್ಷ್ಮಿ ಸಿಂಗ್ ಹಾಗೂ ಕಾರುಣ್ಯಾ ರಾಮ್, ನಾಗಭೂಷಣ್ ಅವರು ಪ್ರೇಕ್ಷಕರ ಜೊತೆ ಸಿನಿಮಾ ನೋಡಿದರು. ಜೊತೆಗೆ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಗೆ ಸಾಕ್ಷಿಯಾದರು.
ಇನ್ನು ಪೆಟ್ರೋಮ್ಯಾಕ್ಸ್ ಸಿನಿಮಾ ಒಂದು ಹುಡುಗಿ ಹಾಗೂ ಮೂರು ಜನ ಅನಾಥರ ನಡುವೆ ನಡೆಯುವ ಕಥೆ. ಸತೀಶ್ ನೀನಾಸಂ, ಕಾರುಣ್ಯಾ ರಾಮ್, ಗೊಂಬೆಗಳ ಖ್ಯಾತಿಯ ಅರುಣ್ ಹಾಗು ನಾಗಭೂಷಣ್ ಅಪ್ಪ, ಅಮ್ಮನಿಗೆ ಬೇಡವಾದ್ದರಿಂದ ಒಂದು ಅನಾಥ ಆಶ್ರಮದಲ್ಲಿ ಒಟ್ಟಿಗೆ ಬೆಳೆಯುತ್ತಾರೆ.
ಈ ನಾಲ್ಕು ಜನ ಅನಾಥರು ಒಂದು ಮನೆಗಾಗಿ ಏನಾಲ್ಲ ಸಮಸ್ಯೆಗಳನ್ನ ಎದುರಿಸುತ್ತಾರೆ? ಈ ಅನಾಥರ ಒಳ್ಳೆ ಮನಸ್ಸಿಗೆ ರಿಯಲ್ ಎಸ್ಟೇಟ್ ಏಜೆಂಟ್ ಪಾತ್ರ ಮಾಡಿರೋ ಹರಿಪ್ರಿಯಾ, ಈ ನಾಲ್ಕು ಜನ ಅನಾಥರಿಗೆ ಮನೆ ಬಾಡಿಗೆ ಕೊಡಿಸುತ್ತಾರಾ? ಹಾಗೂ ಡಬಲ್ ಮೀನಿಂಗ್ ಡೈಲಾಗ್ ಜೊತೆಗೆ ಬೆಳಕು ಹಾಗೂ ಜೀವನ ಸೇರಿದರೆ ಹೇಗೆ ಪೆಟ್ರೋಮ್ಯಾಕ್ಸ್ ಆಗುತ್ತೆ ಅನ್ನೋದನ್ನ, ಸಿದ್ದಲಿಂಗು, ನೀರ್ ದೋಸೆ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ವಿಜಯ ಪ್ರಸಾದ್ ಅಚ್ಚುಕಟ್ಟಾಗಿ ಹೇಳಿದ್ದಾರೆ.
ಚಿತ್ರದಲ್ಲಿ ಸತೀಶ್ ನೀನಾಸಂ, ಹರಿಪ್ರಿಯಾ ಅಲ್ಲದೇ ವಿಜಯಲಕ್ಷ್ಮೀ ಸಿಂಗ್, ಅಚ್ಯುತ್ ಕುಮಾರ್, ಪದ್ಮಜಾ ರಾವ್, ಸುಧಾ ಬೆಳವಾಡಿ ಕೊಟ್ಟ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪೆಟ್ರೋಮ್ಯಾಕ್ಸ್ ಸಿನಿಮಾದ ಮತ್ತೊಂದು ಜೀವಾಳ ಅಂದ್ರೆ, ನಿರಂಜನ್ ಬಾಬು ಕ್ಯಾಮರಾ ಕೈಚಕ ಹಾಗೂ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಿನ್ನಲೆ ಸಂಗೀತ.
ಈ ಚಿತ್ರವನ್ನು ಸತೀಶ್ ಪಿಕ್ಚರ್ಸ್, ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ. ಒಟ್ಟಿನಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ಗಳು ಅತೀ ಅನಿಸಿದರು, ಚಿತ್ರದ ಸೆಕೆಂಡ್ ಹಾಫ್ನಲ್ಲಿ ಸಂದೇಶದ ಜೊತೆಗೆ ಸಿನಿಮಾ ನೋಡಿದ ಪ್ರೇಕ್ಷಕರು ಥಿಯೇಟರ್ ಹೊರಗಡೆ ಬರ್ತಾರೆ.
(ಇದನ್ನೂ ಓದಿ: ಅಶ್ಲೀಲ ಅಂದ್ರೆ ಏನು? ಪೆಟ್ರೋಮ್ಯಾಕ್ಸ್ನಲ್ಲಿ ಹೇಳ್ತಾರೆ ಕೇಳಿ...)