ETV Bharat / entertainment

ನಾನು ಹಣಕ್ಕೋಸ್ಕರ ಚೀಪ್ ಗಿಮಿಕ್ ಮಾಡಲ್ಲ: ನಟಿ ತನಿಷಾ ಕುಪ್ಪಂಡ - ನಟಿ ತನಿಷಾ ಕುಪ್ಪಂಡ

ನಟಿ ತನಿಷಾ ಕುಪ್ಪಂಡ ಯೂಟ್ಯೂಬರ್​ ಕೇಳಿದ ಪ್ರಶ್ನೆಯೊಂದಕ್ಕೆ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ಸಹನಟನ ಮೇಲೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

pentagon-kannada-movie-heroine-thanisha-kuppanda-controversy
ನಾನು ಹಣಕ್ಕೋಸ್ಕರ ಚೀಪ್ ಗಿಮಿಕ್ ಮಾಡಲ್ಲ : ನಟಿ ತನಿಷಾ ಕುಪ್ಪಂಡ
author img

By

Published : Apr 3, 2023, 10:49 PM IST

Updated : Apr 4, 2023, 11:44 AM IST

ನಟಿ ತನಿಷಾ ಕುಪ್ಪಂಡ

ಕಿರುತೆರೆ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಹಾಗೂ ಸದ್ಯ ಬೆಳ್ಳಿ ಪರದೆಯಲ್ಲಿ ಮಿಂಚುತ್ತಿರುವ ನಟಿ ತನಿಷಾ ಕುಪ್ಪಂಡ. ಸದ್ಯ ಐದು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಪೆಂಟಗನ್ ಸಿನಿಮಾ ಮೂಲಕ ಸುದ್ದಿಯಲ್ಲಿರುವ ನಟಿ ಯೂಟ್ಯೂಬರ್ ಒಬ್ಬ ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನದ ವೇಳೆ ಯೂಟ್ಯೂಬರ್, ಪೆಂಟಗನ್​ ಸಿನೆಮಾದ ಹಾಡಿನಲ್ಲಿ ಸಿಕ್ಕಾಪಟ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೀರಾ. ನೂಡ್​ ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನೆ ಕೇಳಿದ್ದ. ಇದಕ್ಕೆ ಕೋಪಗೊಂಡ ನಟಿ ಯೂಟ್ಯೂಬರ್ ಅವರ​​ನ್ನು ತರಾಟೆಗೆ ತೆಗೆದುಕೊಂಡು ಸಂದರ್ಶನದಿಂದ ಹೊರ ನಡೆದಿದ್ದರು. ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ಗಿಮಿಕ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆ ನಟಿ ತನಿಷಾ ಕುಪ್ಪಂಡ ಹಾಗೂ ಪೆಂಟಗನ್ ಚಿತ್ರದ ನಿರ್ದೇಶಕ ರಘು ಸುದ್ದಿಗೋಷ್ಠಿ ನಡೆಸಿ ಯೂಟ್ಯೂಬರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಯೂಟ್ಯೂಬರ್ ಕೇಳಿದ ಪ್ರಶ್ನೆಗೆ ಗರಂ ಆಗಿದ್ದ ನಟಿ, ​ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ಈ ರೀತಿ ವರ್ತಿಸುವುದು ಸರಿಯಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟಿ ತನಿಶಾ ಕುಪ್ಪಂಡ, ಯೂಟ್ಯೂಬರ್​ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋದಾಗ ನಮ್ಮ ಸಿನಿಮಾದ ನಿರ್ಮಾಪಕಿ ಯೂಟ್ಯೂಬರ್ ಎಂಬ ಕಾರಣಕ್ಕೆ ಬೇಡ ಅಂದರು. ಆದರೆ ಆ ವ್ಯಕ್ತಿ ತನ್ನ ಚಾನಲ್ ನಲ್ಲಿ ನನ್ನ ಹೆಸರು ಇಟ್ಟುಕೊಂಡು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ಎಂದು ವಿಡಿಯೋಗಳನ್ನು ಮಾಡುತ್ತಿದ್ದಾನೆ. ಈ ಕಾರಣಕ್ಕೆ ನಾವು ಆ ವ್ಯಕ್ತಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಅಂದರು.

ಇನ್ನು, ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಲ್ಲಿವರೆಗೆ ಬೆಳೆದು ನಿಂತಿದ್ದೇನೆ. ನಾನು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೇನೆ. ನಾನು ಈ ಸಿನಿಮಾದಲ್ಲಿ ನಟಿಸಲು ಯಾರ ಜೊತೆಯೂ ಯಾವ ರೀತಿಯಲ್ಲಿಯೂ ಕಾಂಪ್ರಮೈಸ್ ಮಾಡಲ್ಲ. ಅವನು ಆ ರೀತಿ ಕೇಳಿದಾಗ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಅಂದುಕೊಂಡೆ. ನಾನು ಪಬ್ಲಿಸಿಟಿಗಾಗಿ, ಹಣ ಮಾಡೋ ಉದ್ದೇಶದಿಂದ ನಾನು ಹಾಡಿನಲ್ಲಿ ನಟಿಸಿಲ್ಲ. ಹೆಣ್ಣುಮಕ್ಕಳಿಗೆ ಹಣ ಸಂಪಾದನೆ ಮಾಡಲು ಹಲವು ದಾರಿಗಳಿವೆ ಕಣ್ಣೀರಿಟ್ಟರು.

ಇದೇ ವೇಳೆ ನಟ ಹರ್ಷ ವಿರುದ್ಧವೂ ನಟಿ ಆಕ್ರೋಶ ಹೊರಹಾಕಿದರು. ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹರ್ಷ ಕೂಡ ನನಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ್ದರು. ಇದು ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿತ್ತು. ಸಿನಿಮಾದವರು ಆಗಿ ಈ ರೀತಿಯ ಪ್ರಶ್ನೆ ಕೇಳುವುದು ಎಷ್ಟು ಸರಿ ಎಂದು ತಮ್ಮ ಕೋಪವನ್ನು ಹೊರಹಾಕಿದರು.

ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಪೆಂಟಗನ್ ಸಿನಿಮಾದ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಕಾಮನಬಿಲ್ಲು ಮೂಡುತಿದೆ ಎಂಬ ರೊಮ್ಯಾಂಟಿಂಕ್ ಹಾಡಿನಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಬ್ಯಾಕ್ ಲೈಸ್ ಆಗಿ ಕಾಣಿಸಿಕೊಂಡಿರುವುದು ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ. ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಪೆಂಟಗನ್ ಚಿತ್ರ ಇದೇ ವಾರ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ : ಕಲರ್ಸ್​ ಕನ್ನಡ ವಾಹಿನಿಗೆ ಪರಂ​ ರಾಜೀನಾಮೆ: ಭಾವನಾತ್ಮಕ ಪೋಸ್ಟ್​ ಶೇರ್​

Last Updated : Apr 4, 2023, 11:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.