ETV Bharat / entertainment

'ರಾಘ್​ನೀತಿ' ಅರಶಿಣ ಶಾಸ್ತ್ರದ ವಿಡಿಯೋ ವೈರಲ್​; ಮಿಲಿಯನ್​ ಡಾಲರ್​ ಸ್ಮೈಲ್​ನಲ್ಲಿ ಜೋಡಿ - ಈಟಿವಿ ಭಾರತ ಕನ್ನಡ

RagNeeti joyful Haldi ceremony: ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ಅರಶಿಣ ಶಾಸ್ತ್ರದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Peek into Parineeti Chopra and Raghav Chadha's joyful Haldi ceremony - watch
'ರಾಘ್​ನೀತಿ' ಅರಶಿಣ ಶಾಸ್ತ್ರದ ವಿಡಿಯೋ ವೈರಲ್​; ಮಿಲಿಯನ್​ ಡಾಲರ್​ ಸ್ಮೈಲ್​ನಲ್ಲಿ ಜೋಡಿ
author img

By ETV Bharat Karnataka Team

Published : Sep 29, 2023, 5:53 PM IST

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ಭಾನುವಾರ (ಸೆಪ್ಟೆಂಬರ್​ 24) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಈ ಜೋಡಿ ಕುಟುಂಬಸ್ಥರು, ಆಪ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಈಗಾಗಲೇ ಮದುವೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದೀಗ ವಿವಾಹಕ್ಕೂ ಮೊದಲಿನ ಕಾರ್ಯಕ್ರಮಗಳ ಚಿತ್ರಣಗಳು ಆನ್​ಲೈನ್​ನಲ್ಲಿ ಕಾಣಿಸಿಕೊಂಡಿದೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲವಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೂತನ ವಧು-ವರರ ಲೇಟೆಸ್ಟ್‌ ಫೋಟೋಗಳನ್ನು ನೋಡಲು ಮತ್ತು ಸಂಭ್ರಮದ ಬಗ್ಗೆ ತಿಳಿಯಲು ಕಾತರರಾಗಿದ್ದರು. ಆದರೆ, ಬಿಗಿ ಭದ್ರತೆಯ ಕಾರಣ ಇವರಿಬ್ಬರ ಹೆಚ್ಚು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕೇವಲ ಮದುವೆ ಮೆರವಣಿಗೆ ಮತ್ತು ಅಲಂಕಾರಗಳ ದೃಶ್ಯಗಳು ಮಾತ್ರ ಕಂಡು ಬಂದಿದ್ದವು.

ಅದಾದ ನಂತರ ಕೆಲವೊಂದು ಮದುವೆಯ ಫೋಟೋಗಳನ್ನು ರಾಘ್​ನೀತಿ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಇದು ಅವರ ಅಭಿಮಾನಿಗಳಿಗೆ ತೃಪ್ತಿದಾಯಕವಾಗಿರಲಿಲ್ಲ. ಇನ್ನೊಂದಿಷ್ಟು ಮದುವೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಇದೀಗ ಜೋಡಿಯ ಹಳ್ದಿ (ಅರಶಿಣ ಶಾಸ್ತ್ರ) ಕಾರ್ಯಕ್ರಮದ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಕಾಣಿಸಿಕೊಂಡಿದೆ. ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ತಮ್ಮ ಸಂತೋಷದ ಕ್ಷಣವನ್ನು ಎಂಜಾಯ್​ ಮಾಡುತ್ತಿರುವ ದೃಶ್ಯ ಇದಾಗಿದೆ.

ಇದನ್ನೂ ಓದಿ: RagNeeti wedding pictures: ಬಹುಕಾಲದ ಪ್ರೀತಿಗೆ ಮೂರು ಗಂಟಿನ ನಂಟು; ಅದ್ಧೂರಿಯಾಗಿ ಮದುವೆಯಾದ ರಾಘ್​ನೀತಿ

ಈ ಸುಂದರ ಕಾರ್ಯಕ್ರಮದಲ್ಲಿ ನಟಿ ಪರಿಣಿತಿ ರೆಡ್​ ಸ್ಟೈಲಿಶ್​ ಗೌನ್​ ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು. ಶೈನಿಂಗ್​ ಹ್ಯಾರ್​ಬ್ಯಾಂಡ್​​ ಮತ್ತು ಗೋಲ್ಡನ್​ ಇಯರಿಂಗ್​ ಜೊತೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ರಾಘವ್​ ಚಡ್ಡಾ ಬಿಳಿ ಕುರ್ತಾ ಮತ್ತು ಪೈಜಾಮದಲ್ಲಿ ಅವರ ಪಕ್ಕವೇ ಕುಳಿತಿದ್ದರು. ಎಂದಿನಂತೆ ಸನ್​ಗ್ಲಾಸ್​ ಧರಿಸಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದರು. ಇಬ್ಬರು ತಮ್ಮ ಬಹುಕಾಲದ ಕನಸು ನನಸಾಗುತ್ತಿರುವ ಸಂತೋಷಕ್ಕೆ ಮಿಲಿಯನ್​ ಡಾಲರ್​ ಸ್ಮೈಲ್​ನಲ್ಲಿ ಮಿನುಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆರತಕ್ಷತೆಯ ಫೋಟೋ​ ವೈರಲ್: ಇದಕ್ಕೂ ಮುನ್ನ ರಾಘ್​ನೀತಿ ಆರತಕ್ಷತೆಯ ಫೋಟೋಗಳು ವೈರಲ್​ ಆಗಿದ್ದವು. ಪರಿಣಿತಿ ಮತ್ತು ರಾಘವ್ ಮದುವೆಯ ನಂತರ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉದಯಪುರದ ಅರಮನೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಮದುವೆಗೆ ಬಂದಿದ್ದ ಅತಿಥಿಗಳಿಗೆ ಮಾತ್ರ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು.

ಮದುವೆ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪತ್ನಿ ಗೀತಾ ಬಾಸ್ರಾ ಮತ್ತು ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಆದರೆ ಪರಿಣಿತಿ ಸೋದರ ಸಂಬಂಧಿ, ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಇದನ್ನೂ ಓದಿ: Parineeti Chopra - Raghav Chadha Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.