ETV Bharat / entertainment

ನಟಿ ಪಾಯಲ್​-ಕುಸ್ತಿಪಟು ಸಂಗ್ರಾಮ್ ಸಿಂಗ್​ ಸಪ್ತಪದಿಗೆ ಮುಹೂರ್ತ ಫಿಕ್ಸ್!

ನಟಿ ಪಾಯಲ್​ ರೋಹಟ್ಗಿ ಮತ್ತು ಕುಸ್ತಿಪಟು ಸಂಗ್ರಾಮ್​ ಸಿಂಗ್​ ಮದುವೆಗೆ ಮುಹೂರ್ತ ನಿಗದಿಯಾಗಿದೆ. ಜುಲೈ 9ರಂದು ಇಬ್ಬರು ಸಪ್ತಪದಿ ತುಳಿಯಲಿದ್ದಾರೆ..

author img

By

Published : May 28, 2022, 3:47 PM IST

payal-rohatgi-sangram
ಸಪ್ತಪದಿಗೆ ಮುಹೂರ್ತ ಫಿಕ್ಸ್

ಮುಂಬೈ : ಜನಪ್ರಿಯ ಕಿರುತೆರೆ ನಟಿ ಪಾಯಲ್ ರೋಹಟ್ಗಿ ಮತ್ತು ಆಕೆಯ ಗೆಳೆಯ ಕುಸ್ತಿಪಟುವಾದ ಸಂಗ್ರಾಮ್ ಸಿಂಗ್ ಜುಲೈ 9ರಂದು ಹಸೆಮಣೆ ಏರಲಿದ್ದಾರೆ. ಅಹಮದಾಬಾದ್ ಅಥವಾ ಉದಯಪುರದಲ್ಲಿ ಮದುವೆ ಸಂಭ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೇ ಇಬ್ಬರೂ ಮದುವೆಯಾಗಲು ಇಚ್ಚಿಸಿದ್ದರು. ಆದರೆ, ಕುಟುಂಬದ ಸದಸ್ಯರೊಬ್ಬರು ಸಾವನ್ನಪ್ಪಿದ ಕಾರಣ ಮದುವೆ ದಿನಾಂಕ ಮುಂದೂಡಿಕೆಯಾಗಿತ್ತು. ಇದೀಗ ಜುಲೈ 9ಕ್ಕೆ ಮದುವೆ ನಿಗದಿಯಾಗಿದೆ. ವಿವಾಹ ಸಂಭ್ರಮದಲ್ಲಿ ಕೇವಲ ಆಪ್ತೇಷ್ಟರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕುಸ್ತಿಪಟು ಸಂಗ್ರಾಮ್, ತನ್ನ ತಾಯಿ ಮತ್ತು ಸಹೋದರಿಯ ಸಹಾಯದಿಂದ ಇಬ್ಬರೂ ಅಂತಿಮವಾಗಿ ಮದುವೆಯ ದಿನಾಂಕವನ್ನು ನಿರ್ಧರಿಸಿದ್ದೇವೆ. ಪಾಯಲ್ ಮತ್ತು ನಾನು ಜುಲೈ 9ರಂದು ವಿವಾಹ ಬಂಧನಕ್ಕೆ ಒಳಗಾಗಲಿದ್ದೇವೆ. ಉದಯಪುರ ಅಥವಾ ಅಹಮದಾಬಾದ್​ನಲ್ಲಿ ವೆಡ್ಡಿಂಗ್​ ಪ್ಲಾನ್​ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಓದಿ: 12 ದಿನದೊಳಗೆ ಮೂವರು ನಟಿಯರು ಅನುಮಾನಾಸ್ಪದ ಸಾವು.. ಟಾಲಿವುಡ್​ ಚಿತ್ರರಂಗಕ್ಕೆ ಆಘಾತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.