ಟಾಲಿವುಡ್ನ ಖ್ಯಾತ ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಮುಳುಗಿದ್ದರೂ ಸಿನಿಮಾದ ಅಭಿರುಚಿ ಮಾತ್ರ ಕಡಿಮೆಯಾಗಿಲ್ಲ. ಎರಡು ವೃತ್ತಿಗೆ ಸಮಬಲ ನ್ಯಾಯ ಒದಗಿಸುತ್ತಾ ಬರುತ್ತಿರುವ ನಟ ಕಂ ರಾಜಕಾರಣಿ ಪವನ್ ಕಲ್ಯಾಣ್, ಏನೇ ಮಾಡಿದರೂ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಈ ಪಟ್ಟಿಗೆ ಇದೀಗ ಅವರು ಧರಿಸುವ ಪಾದರಕ್ಷೆ (ಶೂ) ಕೂಡ ಸೇರಿಕೊಂಡಿದೆ. ದುಬಾರಿ ಬೆಲೆಯ ಶೂಗಳು ಇವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಜಾಗ ಪಡೆದಿದೆ. ಅದರ ಬೆಲೆ ಕೇಳಿ ನೆಟಿಜನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
-
Here's the 1st Peek at #BroTheAvatar Combo that'll set the screens ablaze on July 28th 🤙🔥 #BROTheDuo 💥@PawanKalyan & @IamSaiDharamTej 🤩@thondankani @MusicThaman @vishwaprasadtg @vivekkuchibotla @bkrsatish @TheKetikaSharma@NavinNooli @ZeeStudios_ @zeestudiossouth… pic.twitter.com/B2bwd8rPQo
— People Media Factory (@peoplemediafcy) May 29, 2023 " class="align-text-top noRightClick twitterSection" data="
">Here's the 1st Peek at #BroTheAvatar Combo that'll set the screens ablaze on July 28th 🤙🔥 #BROTheDuo 💥@PawanKalyan & @IamSaiDharamTej 🤩@thondankani @MusicThaman @vishwaprasadtg @vivekkuchibotla @bkrsatish @TheKetikaSharma@NavinNooli @ZeeStudios_ @zeestudiossouth… pic.twitter.com/B2bwd8rPQo
— People Media Factory (@peoplemediafcy) May 29, 2023Here's the 1st Peek at #BroTheAvatar Combo that'll set the screens ablaze on July 28th 🤙🔥 #BROTheDuo 💥@PawanKalyan & @IamSaiDharamTej 🤩@thondankani @MusicThaman @vishwaprasadtg @vivekkuchibotla @bkrsatish @TheKetikaSharma@NavinNooli @ZeeStudios_ @zeestudiossouth… pic.twitter.com/B2bwd8rPQo
— People Media Factory (@peoplemediafcy) May 29, 2023
'ಬ್ರೋ' ಚಿತ್ರತಂಡ ಇತ್ತೀಚೆಗೆ ಪವನ್ ಕಲ್ಯಾಣ್ ಅವರ ವಿಶೇಷ ಫೋಟೋಶೂಟ್ ಮಾಡಿಸಿದ್ದು, ಇದರ ಭಾಗವಾಗಿ ಅವರ ಪೋಸ್ಟರ್ ಅನ್ನು ಇದೀಗ ಬಿಡುಗಡೆ ಮಾಡಿದೆ. ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಇಬ್ಬರು ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಒಂದು ಕಡೆ ಬೈಕ್ ಮೇಲೆ ಕಾಲಿಟ್ಟು ಸ್ಟೈಲಿಶ್ ಲುಕ್ ನೀಡಿದರೆ, ಸಾಯಿ ಧರಮ್ ತೇಜ್ ಅವರ ಹಿಂದೆ ಕೈ ಕಟ್ಟಿ ನಿಂತಿದ್ದಾರೆ. ಆದರೆ, ಪೋಸ್ಟರ್ನಲ್ಲಿ ತೋರಿಸಿದ ಶೂ ನೆಟಿಜನ್ಗಳ ಗಮನ ಸೆಳೆಯುತ್ತಿದೆ. ಪವನ್ ಕಲ್ಯಾಣ್ ಧರಿಸಿರುವ ಶೂಗಳು ಟ್ರೆಂಡಿಯಾಗಿದ್ದರಿಂದ ಅವರ ಅಭಿಮಾನಿಗಳು ಗೂಗಲ್ನಲ್ಲಿ ಸರ್ಚ್ ಮಾಡಲಾಂಭಿಸಿದ್ದಾರೆ. ಯಾವ ಬ್ರ್ಯಾಂಡ್ ಮತ್ತು ಅದರ ಬೆಲೆ ಎಷ್ಟು ಅಂತೆಲ್ಲ ಆ ಶೂಗಳ ವಿವರಗಳನ್ನು ತಿಳಿದುಕೊಳ್ಳಲಾರಂಭಿಸಿದ್ದಾರೆ.
ಬಿಳಿ ಮತ್ತು ಕಪ್ಪು ಬಣ್ಣದ್ದಾದ ಆಕರ್ಷಮಯ ಶೂಗಳು ಇವಾಗಿದ್ದು, ಬಾಲ್ಮೈನ್ ಎಂಬ ಅಂತಾರಾಷ್ಟ್ರೀಯ ಕಂಪನಿಗೆ ಸೇರಿದ್ದಾಗಿದೆ. ಈ ಶೂಗಳ ಬೆಲೆ ರೂ. 1,06,070 (ಒಂದು ಲಕ್ಷದ ಆರು ಸಾವಿರದ ಎಪ್ಪತ್ತು ರೂಪಾಯಿ). ಅತ್ಯಂತ ದುಬಾರಿ ಬೆಲೆಯ ಶೂ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಕೂಡ ಆಗಿದೆ.
ನಟ ಕಂ ನಿರ್ದೇಶಕ ಸಮುದ್ರಖನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ್ಯಕ್ಷನ್ ಡ್ರಾಮಾ ಜಾನರ್‌ನಲ್ಲಿ ಗುರುತಿಸಿಕೊಳ್ಳಲಿರುವ ‘ಬ್ರೋ’ ಕಾಲಿವುಡ್‌ನ ‘ವಿನೋದಯ ಸೀತಮ್’ ರೀಮೇಕ್ ಎನ್ನಲಾಗಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಕೇತಿಕಾ ಶರ್ಮಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯಲ್ಲಿ ವಿವೇಕ್ ಕುಚಿಬೋಟ್ಲ ಮತ್ತು ಟಿಜಿ ವಿಶ್ವಪ್ರಸಾದ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ತಣಿಕೆಲ್ಲ ಭರಣಿ, ಬ್ರಹ್ಮಾನಂದಂ ಮುಂತಾದ ತಾರೆಯರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ತಮನ್ ಸಂಗೀತ ನೀಡುತ್ತಿದ್ದಾರೆ.
ಇತ್ತೀಚೆಗಷ್ಟೇ ಇದರ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಜುಲೈ 28ರಂದು ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಪವನ್ ಕಲ್ಯಾಣ್ ಅವರು ಈ ಚಿತ್ರವಲ್ಲದೇ ಕೃಷ್ಣ ನಿರ್ದೇಶನದ ‘ಹರಿ ಹರ ವೀರ ಮಲ್ಲು’, ಹರೀಶ್ ಶಂಕರ್ ನಿರ್ದೇಶನದ ’ಉಸ್ತಾದ್ ಭಗತ್ ಸಿಂಗ್’ ಹಾಗೂ ‘ಸಾಹೋ’ ಖ್ಯಾತಿಯ ನಿರ್ದೇಶಕ ಸುಜೀತ್ ಅವರ ‘ಒಜಿ’ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: 62ನೇ ವಸಂತಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್: 'ಪ್ರೇಮಲೋಕದ ಹೆಡ್‌ಮಾಸ್ಟರ್' ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?