ETV Bharat / entertainment

ಪವಿತ್ರ ಬಂಧನಕ್ಕೆ ತೆಲುಗು ನಟ ನರೇಶ್ ಸಜ್ಜು.. ವಿಡಿಯೋ ಮೂಲಕ ಶುಭಸುದ್ದಿ ಹಂಚಿಕೊಂಡ ಜೋಡಿ - actress Pavitra lokesh

ನಟ ನರೇಶ್ ತಮ್ಮ ಟ್ವಿಟರ್ ಮೂಲಕ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ನಟಿ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ.

Pavitra Naresh Marriage
ನರೇಶ್ ಪವಿತ್ರಾ ಮದುವೆ
author img

By

Published : Dec 31, 2022, 12:54 PM IST

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೇಲೆ ಬರುತ್ತಿದ್ದ ಟೀಕೆ ಟಿಪ್ಪಣಿಗೆ ಹಿರಿಯ ನಟ ನರೇಶ್ ಮತ್ತು ನಟಿ ಪವಿತ್ರಾ ಅಂತ್ಯ ಹಾಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ವಿಡಿಯೋ ಮೂಲಕ ಅಧಿಕೃತವಾಗಿ ಘೋಷಿಸಲಾಗಿದೆ.

ನಟ ನರೇಶ್ ತಮ್ಮ ಟ್ವಿಟರ್ ಮೂಲಕ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರುತ್ತಾ ತಮ್ಮ ಲೋಕಕ್ಕೆ ಆಹ್ವಾನಿಸಿದ್ದಾರೆ. ಆ ವಿಡಿಯೋದಲ್ಲಿ ಪವಿತ್ರಾ ಜೊತೆ ಕೇಕ್ ಕತ್ತರಿಸಿರುವ ನರೇಶ್, ಪವಿತ್ರಾ ಅವರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದು ಘೋಷಿಸಿದ್ದಾರೆ. ಜೊತೆಗೆ ಎಲ್ಲರ ಆಶೀರ್ವಾದ ಕೋರಿದ್ದಾರೆ.

ಕೆಲವು ದಿನಗಳಿಂದ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಚಿತ್ರರಂಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿತ್ತು. ನರೇಶ್ ಅವರ ಮೂರನೇ ಪತ್ನಿ ರಮ್ಯಾ ಕೂಡ ಇವರಿಬ್ಬರ ಸಂಬಂಧದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪವಿತ್ರ ಮತ್ತು ನರೇಶ್ ಈ ವರ್ಷದ ಕೊನೆ ದಿನ ವಿಡಿಯೋ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.