ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ ಅನಿಮಲ್ ಇಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಸಂದೀಪ್ ವಂಗಾ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಬಾಬಿ ಡಿಯೋಲ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರಂಭದಲ್ಲಿ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ನಾಯಕಿ ಪಾತ್ರವನ್ನು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಅಭಿನಯಿಸಬೇಕಿತ್ತು. ಆದರೆ, ಅಂತಿಮವಾಗಿ ಆ ಪಾತ್ರ ರಶ್ಮಿಕಾ ಮಂದಣ್ಣ ಪಾಲಾಯಿತು.
- " class="align-text-top noRightClick twitterSection" data="">
ಸಂದೀಪ್ ವಂಗಾ ರೆಡ್ಡಿ ಅವರು ಅನಿಮಲ್ ಸಿನಿಮಾವನ್ನು 2021ರಲ್ಲಿ ಘೋಷಣೆ ಮಾಡಿದ್ದರು. ಪ್ರಾರಂಭದಲ್ಲಿ ಪರಿಣಿತಿ ಚೋಪ್ರಾ ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಸಿಂಗ್ ಪಾತ್ರವನ್ನು ಅಭಿನಯಿಸಿಲು ಸಿದ್ಧರಾಗಿದ್ದರು. ಸಿನಿಮಾ ಘೋಷಣೆ ಮಾಡಿದ್ದಾಗ ಪರಿಣಿತಿ ಚೋಪ್ರಾ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಂತರದಲ್ಲಿ ವರದಿಯ ಪ್ರಕಾರ ಇಮ್ತಿಯಾಜ್ ಅಲಿ ನಿರ್ದೇಶನದ ಅಮರ್ ಸಿಂಗ್ ಚಮ್ಕಿಲಾ ಚಿತ್ರಕ್ಕೆ ಸಹಿ ಹಾಕಿದ್ದ ಕಾರಣ ಅನಿಮಲ್ ಸಿನಿಮಾದಿಂದ ದೂರ ಸರಿಯಬೇಕಾಗಿ ಬಂತು. ಅಮರ್ ಸಿಂಗ್ ಚಮ್ಕಿಲಾ ಚಿತ್ರದಲ್ಲಿ ಪರಿಣಿತಿ ಅವರು ದಿಲ್ಜಿತ್ ದೋಸಾಂಜ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಎರಡೂ ಸಿನಿಮಾಗಳ ಡೇಟ್ಗಳ ಸಮಸ್ಯೆಯಿಂದಾಗಿ ಅನಿಮಲ್ ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗದೆ, ಚಿತ್ರದಿಂದ ಹಿಂದೆ ಸರಿದಿದ್ದರು ಎಂದು ಮಾಧ್ಯಮಗತಳು ವರದಿ ಮಾಡಿದ್ದವು. ಅದೇನೇ ಇದ್ದರೂ ಟ್ರಯಲ್ ಶೂಟಿಂಗ್ ವೇಳೆ ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರು, ಆ ಪಾತ್ರಕ್ಕೆ ಪರಿಣಿತಿ ಚೋಪ್ರಾ ಸೂಕ್ತವಲ್ಲ ಎಂದು ಪರಿಣಿಸಿದ್ದರು ಎಂದು ಮತ್ತೊಂದು ವರದಿ ಹೇಳಿತ್ತು.
ರಶ್ಮಿಕಾ ಮಂದಣ್ಣ ಅವರು ಚಿತ್ರದ ನಾಯಕಿ ಎಂದು ಘೋಷಣೆಯಾದ ನಂತರ ಪರಿಣಿತಿ ಚೋಪ್ರಾ, "ಇಂತಹವುಗಳು ಸಂಭವಿಸುತ್ತವೆ. ಇದು ಜೀವನದ ಒಂದು ಭಾಗ. ನಾವು ಪ್ರತಿದಿನ ಈ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಆದರೆ ಯಾವುತ್ತೂ ನಿಮಗೆ ಸೂಕ್ತವಾದ ಆಯ್ಕೆಯನ್ನು ನೀವು ಮಾಡಬೇಕು" ಎಂದು ವಾಹಿನಿಯೊಂದರ ಜೊತೆ ಹಂಚಿಕೊಂಡಿದ್ದರು.
ಈವೆಂಟ್ ಒಂದರಲ್ಲಿ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ನಿರ್ವಹಿಸಿರುವ ಗೀತಾಂಜಲಿ ಪಾತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ, ನಾಯಕನನ್ನು ಅವನ ಹೆತ್ತವರಿಗಿಂತ ಆಳವಾಗಿ ಅರ್ಥಮಾಡಿಕೊಳ್ಳುವ ಪಾತ್ರ ಇದು. ಚಿತ್ರದುದ್ದಕ್ಕೂ ಬರುವ ಈ ಪ್ರಮುಖ ಪಾತ್ರದ ಮಹತ್ವವನ್ನು ಒತ್ತಿ ಹೇಳಿದ್ದರು.
ಇದನ್ನೂ ಓದಿ: 100 ಕೋಟಿಯತ್ತ ರಶ್ಮಿಕಾ ಸಿನಿಮಾ: ರಣ್ಬೀರ್ ವೃತ್ತಿಜೀವನದಲ್ಲಿ ಹೊಸ ದಾಖಲೆ ಸೃಷ್ಟಿಗೆ 'ಅನಿಮಲ್' ಸಜ್ಜು!